ವಿಶ್ವದ ಕಂಪ್ಯೂಟರ್ ಉತ್ಪಾದಕ ಕಂಪನಿಗಳಲ್ಲೇ ನಾವೀನ್ಯತೆಯ ಉತ್ಪನ್ನಗಳನ್ನು
ಹೊರತರುತ್ತಿರುವ ಹೆಸರುವಾಸಿ ಕಂಪನಿ ಅಸುಸ್, ಈಗ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್,
ಎರಡೂ ಒಂದರಲ್ಲೇ ಇರುವ ಪ್ಯಾಡ್ ಫೋನ್ ಎಂಬ ಹೆಸರಿನ ಫ್ಯಾಬ್ಲೆಟ್ ಒಂದನ್ನು ಅತಿ
ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ.
ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ರಲ್ಲಿ ಈ
ಪ್ಯಾಡ್ ಫೋನ್ ಅನ್ನು ಪ್ರದರ್ಶಿಸಿ ಹಲವರನ್ನು ಬೆರಗುಗೊಳಿಸಿದ್ದ ಅಸುಸ್ ನ ಈ
ಫ್ಯಾಬ್ಲೆಟ್, ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನ್ ಎರಡೂ ಒಳಗೊಂಡಿದೆ.
ಇದರಲ್ಲಿರುವ ಸ್ಮಾರ್ಟ್ ಫೋನ್ 4.3 ಇಂಚ್ ಡಿಸ್ಪ್ಲೇ ಹೊಂದಿದ್ದು, ಟ್ಯಾಬ್ಲೆಟ್ 10.1
ಇಂಚ್ ಟಚ್ ಸ್ಕ್ರೀನ್ ಹೊಂದಿದ್ದು, 5 ಮೆಗಾ ಪಿಕ್ಸೆಲ್ ಕ್ಯಾಮರಾ, ಆಂಡ್ರಾಯ್ಡ್ 4.0
ತಂತ್ರಾಂಶ ಹಾಗು ಶಕ್ತಿಶಾಲಿ ಬ್ಯಾಟರಿ ಹೊಂದಿದೆ.
ಬೇಕಾದಾಗ ಹೊರಗೆ ತೆಗೆದು ಈ ಸ್ಮಾರ್ಟ್ ಫೋನ್ ಅನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ಪ್ಯಾಡ್ ಫೋನಿನ ಎಲ್ಲಾ ಫೀಚರುಗಳು ಹಾಗು ಬೆಲೆಯ ಬಗ್ಗೆ
ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿಗೆ ಜಾಲತಾಣ.
No comments:
Post a Comment