ಗ್ರೇಟ್ ವಿಜ್ಞಾನಿ ಐನ್ ಸ್ಟೀನ್ ಬಗ್ಗೆ ನೀವೆಲ್ಲಾ, ತಿಳಿದುಕೊಂಡಿದ್ದೀರಿ. ಫಿಸಿಕ್ಸ್ ನಲ್ಲಿ ನೋಬಲ್ ಪಡೆದಿರುವ ಐನ್ ಸ್ಟೀನ್ ಶತಮಾನದ ಮನುಷ್ಯ ಎನ್ನುವ ಬಿರುದಿಗೆ ಕೂಡ ಪಾತ್ರವಾದವರು. ನಿಮಗೆ ಐನ್ ಸ್ಟೀನ್ ಮಗುವಾಗಿದ್ದಾಗ ಹೇಗಿದ್ದರು ಗೊತ್ತೇ? ದಪ್ಪಗೆ ಇದ್ದರು. ನಿಜವಾಗಿಯೂ ಅವರು ತುಂಬಾ ದಪ್ಪಗಿದ್ದರು. ದೊಡ್ಡ ತಲೆಯನ್ನು ಹೊಂದಿದ್ದರು.ಅಲ್ಲದೆ ಶಾಲೆಯ ದಿನಗಳಲ್ಲಿ ಅವರಿಗೆ ಮಾತಿನ ತೊಂದರೆ ಇತ್ತು.
ಥಾಮಸ್ ಸಾವೆಲ್ ಎಂಬ ಸಂಶೋಧಕ ಗುರುತಿಸಿದ ಹಾಗೆ ಅನೇಕ ಮಂದಿ ಇಂತಹ ಅದ್ಬುತ ಪ್ರತಿಭೆಯುಳ್ಳವರಿಗೆ ಚಿಕ್ಕಂದಿನಲ್ಲಿ ಮಾತಿನ ತೊಂದರೆ ಇತ್ತು. ಅದಕ್ಕಾಗಿ ಆತ ಈ ತೊಂದರೆಯನ್ನು ಐನ್ ಸ್ಟೀನ್ ಸಿಂಡ್ರೋಮ್ ಎಂದು ಗುರುತಿಸುತ್ತಾನೆ. ಗೊತ್ತಾ? ಅದಿರಲಿ, ಈ ಐನ್ ಸ್ಟೀನ್ ಎಷ್ಟೆಲ್ಲಾ ದೇಶಗಳಲ್ಲಿ ಕೆಲಸ ಮಾಡಿದರು ಗೊತ್ತೇ? ಜರ್ಮನಿ,ಇಟಲಿ, ಬೆಲ್ಜಿಯಂ, ಇಂಗ್ಲೆಂಡ್, ಅಮೇರಿಕ, ಸ್ವಿಸ್, ಆಸ್ಟ್ರಿಯಾ ದೇಶಗಳಲ್ಲಿ ಕೆಲಸ ಮಾಡಿದರು.
1955 ರಲ್ಲಿ ಐನ್ ಸ್ಟೀನ್ ಸತ್ತ ನಂತರ ಅವರ ಮೆದುಳನ್ನು ಸುಮಾರು 45 ವರ್ಷಗಳು ಜಾರ್ ಒಂದರಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಪ್ರಿನ್ಸ್ ಟನ್ ಆಸ್ಪತ್ರೆಯ ಪೆಥಲಾಜಿಸ್ಟ್ ಥಾಮಸ್ ಹಾರ್ವೆ ಎನ್ನುವವರು ಅವರ ಕುಟುಂಬದ ಅನುಮತಿಯಿಲ್ಲದೇ ಐನ್ ಸ್ಟೀನ್ ಮೆದುಳನ್ನು ತೆಗೆದುಕೊಂಡು ಹೋಗಿ ಸಂಗ್ರಹಿಸಿದ್ದರು. ಅದಕ್ಕಾಗಿ ಅವರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ಅಂತೂ ಹಲವಾರು ವರ್ಷಗಳ ಬಳಿಕ ಅವರ ಮಗ ಹನ್ಸ್ ಆಲ್ಬರ್ಟ್ ಮೆದುಳನ್ನು ಅಧ್ಯಾಯನ ಮಾಡಲು ಅನುಮತಿ ನೀಡಿದರು. ಅನಂತರ ನಡೆದದ್ದೇ ಅದ್ಬುತ. ಇಡೀ ವಿಶ್ವದ ವಿಜ್ಞಾನಿಗಳೆಲ್ಲಾ ಈ ಮೆದುಳನ್ನು ಅಧ್ಯಾಯನ ಮಾಡಿದರು. ಸಾಮಾನ್ಯರಂತಿಲ್ಲದ ಅನೇಕ ರಚನೆಗಳನ್ನು ಆ ಮೆದುಳಿನಲ್ಲಿ ಪತ್ತೆಹಚ್ಚಲಾಯಿತು. ಅದಕ್ಕಾಗಿಯೇ ಅಲ್ಲವೇ ಅವರು ಐನ್ ಸ್ಟೀನ್ ಆಗಿದ್ದು?
ಐನ್ ಸ್ಟಿನ್ ಜನನ 14-ಮಾರ್ಚ್-1879. ಮರಣ 18-ಏಪ್ರಿಲ್-1955.
ದಿ ಹೆಬ್ರೀವ್ ಯೂನಿರ್ವಸಿಟಿ ಆಫ್ ಜೇರುಸಲೇಮ್ ಲೈಬ್ರೆರಿಯಿಂದ ಮತ್ತಷ್ಟು ಮಾಹಿತಿಗಾಗಿ ಐನ್ ಸ್ಟೀನ್ ರವರ ಜಾಲತಾಣ.
hi Chandru.
ReplyDeleteI saw your SITE its very good.
kidly change the INSTEN birth And death date. that was published wrong.
regads:
Manjunath
9986295970