WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Friday, May 25, 2012

ಕಸದಿಂದ ರಸ ಮಾಡುವ ಕಸದತೊಟ್ಟಿ.ಕಾಂ

ಗುಜರಿ ವಸ್ತುಗಳು ನಿಮ್ಮ ಮನೆಯಲ್ಲಿದೆಯೇ? ಹಾಗಾದರೆ ಕಸ ಎಂದು ಹೊರಕ್ಕೆ ಎಸೆಯಬೇಡಿ. ಅದಕ್ಕೆ ಬೆಲೆ ಕಟ್ಟಿ ಆನ್ ಲೈನ್ ಮೂಲಕ ಮಾರಾಟ ಮಾಡಬಹುದು!
ಅಚ್ಚರಿ ಆಯ್ತಾ? ಹೌದು. ಉಪಯೋಗಕ್ಕೆ ಬಾರದ ಹಳೆ ಕಂಪ್ಯೂಟರ್, ಬಳಸದೆ ಮೂಲೆಯಲ್ಲಿ ಬಿದ್ದಿರೋ ಮೋಬೈಲ್, ಅಪಘಾತ ನಡೆದಾಗ ತೆಗೆದಿರಿಸಿದ ಎಕ್ಸ್ ರೇ ಗಳನ್ನು ನಿಷ್ಪ್ರಯೋಜಕ ವಸ್ತುಗಳ ಪಟ್ಟಿಗೆ ಸೇರಿಸಬೇಡಿ. ಅವೆಲ್ಲವನ್ನೂ ಜೋಪಾನವಾಗಿ ಇಟ್ಟುಕೊಳ್ಳಿ. ನಿಮ್ಮ ಮನೆಗೆ ಬಂದು ಇವೆಲ್ಲಾ ಗುಜರಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೆ "ಕಸದತೊಟ್ಟಿ".
ಕಸದತೊಟ್ಟಿ ಅನ್ನೋದು ವೆಬ್ ಸೈಟ್ ಹೆಸರು. ನಿಮ್ಮ ಮನೆಯಲ್ಲಿರುವ ನಿಷ್ಪ್ರಯೋಜಕ ವಸ್ತುಗಳ ಬಗ್ಗೆ http://www.kasadhathotti.com ನಲ್ಲಿ ಮಾಹಿತಿ ನಮೂದಿಸಿದರೆ ಸಾಕು, ಅವರೇ ಮನೆಗೆ ಬಂದು ಅವನ್ನು ಕೊಂಡ್ಯೂಯುತ್ತಾರೆ. ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆ. 
ಕಸದಿಂದ ರಸ
ಕಸವನ್ನು ರಸ ಮಾಡುವ ಉದ್ದೇಶದಿಂದ http://www.kasadhathotti.com ಎಂಬ ವೆಬ್ ಸೈಟ್ ಶುರುವಾಗಿದೆ. ಮನೆಯಲ್ಲಿ ಕೆಲಸಕ್ಕೂ ಬಾರದಿರುವ ವಸ್ತುಗಳನ್ನು ಇದು ಖರೀದಿಸುತ್ತದೆ. ಗ್ರಾಹಕರಿಂದ ಖರೀದಿಸಿದ ವಸ್ತುಗಳನ್ನು ಪನರ್ ಬಳಕೆ ಘಟಕದಲ್ಲಿ ಬೇರೆ ರೂಪ ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. 
ಮಾರಾಟ ಹೇಗೆ? 
ಗುಜರಿ ವಸ್ತುಗಳ ಮಾರಾಟ ಮಾಡಬೇಕೆಂದರೆ ವೆಬ್ ಸೈಟ್ ಗೆ ಬೇಟಿ ನೀಡಬೇಕು. ಅಲ್ಲಿ ತಮ್ಮದೊಂದು ಖಾತೆ ತೆಗೆಯಬೇಕು. ನಂತರ ತಮ್ಮಲ್ಲಿರುವ ಉಪಯೋಗಕ್ಕೆ ಬಾರದ ವಸ್ತು ಯಾವುದು ಮತ್ತು ಎಷ್ಟು ತೂಕವಿದೆ ಎಂಬ ಮಾಹಿತಿ ತುಂಬಿಸಬೇಕು. ಮನೆ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿದರೆ ಸಾಕು, ವೆಬ್ ಸೈಟ್ ನವರು ಮನೆಗೆ ಬಂದು ಒಯ್ಯುತ್ತಾರೆ. 
ಹೈಟೆಕ್ ಟಚ್
ಗುಜರಿ ವ್ಯಾಪಾರಕ್ಕೆ ಹೈಟೆಕ್ ಟಚ್ ನೀಡಿರುವವರು ಚಂದ್ರಶೇಖರ್. ಕೇವಲ ಎಸ್.ಎಸ್.ಎಲ್.ಸಿ ಓದಿರುವ ಇವರು ಮೊದಲು ಮನೆ, ಮನೆಗೆ ತೆರಳಿ ಗುಜರಿ ವಸ್ತುಗಳನ್ನು ಖರೀದಿಸಿ ತರುತ್ತಿದ್ದರು. ವ್ಯಾಪಾರದಲ್ಲಿ ಹೊಸತನದ ತುಡಿತದಿಂದ ಸ್ನೇಹಿತರೊಂದಿಗೆ ಸೇರಿ "ಕಸದತೊಟ್ಟಿ" ವೆಬ್ ಸೈಟ್ ಆರಂಭಿಸಿದ್ದಾರೆ.
ಗುಬ್ಬಚ್ಚಿ ಗೂಡು ಗಿಫ್ಟ್
"ಕಸದತೊಟ್ಟಿ" ಪರಿಸರ ಹಾಗೂ ಪಕ್ಷಿ ಸಂಕುಲದ ಕಾಳಜಿ ಇಟ್ಟುಕೊಂಡಿದೆ. 10 ಕೆಜಿಗಿಂತ ಹೆಚ್ಚು ನಿರುಪಯುಕ್ತ ವಸ್ತುಗಳನ್ನು ಮಾರಿದವರಿಗೆ ಗುಬ್ಬಚ್ಚಿಗೂಡು ಹಾಗೂ ಗಿಡವನ್ನು ಉಚಿತವಾಗಿ ನೀಡಲಾಗುತ್ತದೆ. 
ಗೆಳೆಯರೇ ಮತ್ತೇಕೆ ತಡ ಚಂದ್ರಶೇಖರ್ ರವರ ಪರಿಸರ ಕಾಳಜಿಗೆ ನಿಮ್ಮ ಕೈಜೋಡಿಸಿದರೆ ಮತ್ತಷ್ಟು ಬಲಪಡಿಸಿದ ಹಾಗೇ ಆಗುತ್ತದೆ ಅಲ್ಲವೇ? ನೀವೊಮ್ಮೆ ಬೇಟಿ ನೀಡಿ:  http://www.kasadhathotti.com
 
 

1 comment:

  1. Do you do this business at places other than Bangalore?viz:HUBLI
    Pl reply to :krkabadi@gmail.com

    ReplyDelete