ಯೂಟ್ಯೂಬ್ ನಲ್ಲಿ ಪ್ರತಿ ನಿಮಿಷ 72 ಗಂಟೆಗಳ ವಿಡಿಯೋ ಅಪ್ ಲೋಡ್ ಆಗುತ್ತದೆ ಎಂದು ಗೂಗಲ್ ಮಾಲೀಕತ್ವದ ಯೂಟ್ಯೂಬ್ ಬ್ಲಾಗ್ ಒಂದರಲ್ಲಿ ಹೇಳಿಕೊಂಡಿದ್ದು, 7ನೇ ವರ್ಷಾಚರಣೆ ವೇಳೆ ಇದೊಂದು ಮಹತ್ವದ ಮೈಲಿಗಲ್ಲು.
ಯೂಟ್ಯೂಬ್ ನಲ್ಲಿ ಚಂದಾದಾರರಾಗುವವರ ಪ್ರಮಾಣ ಶೇ.50% ರಷ್ಟು ಹೆಚ್ಚಿದ್ದು, ಒಟ್ಟು 80 ಕೋಟಿ ಮಂದಿ ತಿಂಗಳೊಂದಕ್ಕೆ ಯೂಟ್ಯೂಬ್ ನಲ್ಲಿ ಕಳೆಯುವ ಒಟ್ಟು ಸಮಯ 3 ಬಿಲಿಯನ್ (300ಕೋಟಿ) ಗಂಟೆಗಳಿಗೆ ತಲುಪಿದೆ ಎಂದು ಕಂಪನಿಯ ಹೇಳಿಕೆ. 2006 ರಲ್ಲಿ ಗೂಗಲ್ ಯೂಟ್ಯೂಬನ್ನು 1.65 ಬಿಲಿಯನ್ ಡಾಲರ್ ಗಳಿಗೆ ಖರೀದಿಸಿತ್ತು.
ಆರಂಭದಲ್ಲಿ ಕಡಿಮೆ ರೆಸೆಲ್ಯೂಶನ್ ನ ವಿಡಿಯೋ ಮಾತ್ರ ಅಪ್ ಲೋಡ್ ಮಾಡಬಹುದಾಗಿದ್ದ ಯೂಟ್ಯೂಬ್ ನಲ್ಲಿ ಈಗೀಗ ಟಿವಿ ಕಾರ್ಯಕ್ರಮಗಳನ್ನು ಅಪ್ ಲೋಡ್ ಮಾಡಬಹುದು. ಯೂಟ್ಯೂಬ್ ನಲ್ಲಿ ಸಂಗೀತ, ಮನರಂಜನೆ, ಕ್ರೀಡೆ, ಚಲನಚಿತ್ರ, ರಾಜಕೀಯ ಸುದ್ದಿ, ಹಾಸ್ಯ, ವಿಜ್ಞಾನ, ತಂತ್ರಜ್ಞಾನ,ಗಣಕಯಂತ್ರ, ಮೊಬೈಲ್ ಪೋನ್, ಆಟಿಕೆ, ಆಟಗಳು, ವಾಹನ, ಶಿಕ್ಷಣ, ಸಂಪ್ರದಾಯ, ವನ್ಯಜೀವಿ, ಪರಿಸರ, ಪ್ರಯಾಣ,ಆನಿಮೇಷನ್ ಮುಂತಾದ ಇನ್ನೂ ಅನೇಕ ವಿಡಿಯೋ ತುಣುಕುಗಳನ್ನು ವೀಕ್ಷಿಸಬಹುದು ಹಾಗೇ ಡೌನ್ಲೋಡ್ ಮಾಡಿಕೊಳ್ಳಲೂಬಹುದು. http://www.youtube.com
No comments:
Post a Comment