ಶೂಬಾಕ್ಸ್ ಅನ್ನೋದು ಈಗ ಸುದ್ದಿಯಲ್ಲಿರುವ ಆಂಡ್ರಾಯ್ಡ್ ಆಪ್ಲಿಕೇಷನ್. 1000ಮೆಮೊರಿಸ್.ಕಾಮ್ ನಿಂದ ನಿರ್ಮಿಸಿರುವ ಈ ಆಪ್ಲಿಕೇಷನ್ ನಿಮ್ಮ ಹಳೆಯ ಪೋಟೋಗಳನ್ನು ಶೇರ್ ಮಾಡಿಕೊಳ್ಳುವುದಕ್ಕೆಂದೇ ಇದೆ. ಪ್ರಿಂಟಾಗಿರುವ ಪೋಟೋಗಳನ್ನು ಮೊಬೈಲ್ ನಿಂದಲೇ ಸ್ಕ್ಯಾನ್ ಮಾಡಬಹುದು. ಅದನ್ನು ಶೇರ್ ಮಾಡಬಹುದು. ಹೀಗೆ ಶೇರ್ ಮಾಡುವ ಪೋಟೋಗಳು, ಶೂ ಬಾಕ್ಸ್ ಮತ್ತು 1000.ಮೆಮೊರಿಸ್.ಕಾಮ್ ನಲ್ಲಿರುತ್ತವೆ. ನಿಮ್ಮ ಪೋಟೋಗಳನ್ನು ಖಾಸಗಿಯಾಗಿ ಇಟ್ಟುಕೊಳ್ಳಬಹುದು. ಆಯ್ದ ಕೆಲವರೊಂದಿಗಷ್ಟೆ ಹಂಚಿಕೊಳ್ಳಬಹುದು. ಪ್ರತಿ ಪೋಟೋಗೆ ಟ್ಯಾಗ್. ದಿನಾಂಕ, ಸ್ಥಳದ ಮಾಹಿತಿಯನ್ನು ಸೇರಿಸಬಹುದು. ಎಷ್ಟು ಪೋಟೋಗಳನ್ನಾದರೂ ಇಲ್ಲಿ ಅಪ್ ಲೋಡ್ ಮಾಡಬಹುದು.
1000.ಮೆಮೊರಿಸ್.ಕಾಮ್ ಜಾಲತಾಣ ವಿಳಾಸ: http://1000memories.com
ಹಳೆಯ ನೆನಪುಗಳನ್ನು ತಾಜಾಗೊಳಿಸುವ ಈ ಆಪ್ಲಿಕೇಷನ್ ನಿಮಗೆ ಬೇಕಾದರೆ ಇಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಿ:http://goo.gl/54rf5
No comments:
Post a Comment