ಈಗಂತೂ ಮದುವೆಗಳ ಸೀಸನ್. ಆಷಾಢ ಮಾಸಕ್ಕೆ ಮುನ್ನ ಮದುವೆಯಾಗುವವರಿಗೆ ಸಾಕಷ್ಟು ಕೆಲಸ
ಇರುತ್ತದೆ. ಮದುವೆಯ ಸಿದ್ಧತೆಯ ಜೊತೆಗೆ ಆಮಂತ್ರಣ ಪತ್ರಿಕೆ ಕೊಡುವ ತ್ರಾಸದಾಯಕ ಕೆಲಸ
ಬೇರೆ ಇರುತ್ತದೆ. ಈಗಂತೂ ಎಲ್ಲರೂ ಕೆಲಸಕ್ಕೆ ಹೋಗುವುದರಿಂದ ಹಾಗು ಸಮಯದ ಅಭಾವ
ಇರುವುದರಿಂದ ಎಲ್ಲರಿಗೆ ಆಮಂತ್ರಣ ಪತ್ರಿಕೆ ಕೊಡುವುದು ಅಸಾಧ್ಯವಾಗುತ್ತದೆ. ಹಾಗಾಗಿ
ಕೆಲವರು ಫೋನ್ ಮಾಡಿ ಮದುವೆಗೆ ಕರೆಯುತ್ತಾರೆ ಇಲ್ಲವೆ ಪತ್ರಿಕೆಯನ್ನು ಕೊರಿಯರ್ ಮಾಡಿ
ಸೇಫ್ ಆಗುತ್ತಾರೆ.
ಈಗ ಇಂಟರ್ನೆಟ್ ಯುಗವಾದ್ದರಿಂದ ಕೆಲವು ಬುದ್ಧಿವಂತರು ಇಮೇಲ್ ಮೂಲಕ ಆಮಂತ್ರಣ
ಪತ್ರಿಕೆ ಸ್ಕ್ಯಾನ್ ಮಾಡಿ ಕಳುಹಿಸುತ್ತಾರೆ. ಇದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು
ಹೋಗುವ ಮತ್ತೊಂದು ಪ್ರಯತ್ನ ಎಂದರೆ ನಿಮ್ಮ ಮದುವೆ ವೆಬ್ಸೈಟ್.
ಹೌದು. ನಿಮ್ಮ ಮದುವೆಗೆ ವೆಬ್ಸೈಟ್ ಒಂದನ್ನು ಸೃಷ್ಟಿ ಮಾಡಿ ನಿಮ್ಮ ಹಾಗು ನಿಮ್ಮನ್ನು
ಮದುವೆ ಆಗುವ ಹುಡುಗ/ಹುಡುಗಿಯ ಪ್ರೊಫೈಲ್ ಅನ್ನು ಸೃಷ್ಟಿಸಿ ಅದರ ಜೊತೆ ನಿಮ್ಮ
ಸ್ನೇಹಿತರು, ಸಂಬಂಧಿಗಳು, ನಿಮ್ಮ ಆಫೀಸಿನ ಸಹ ಕೆಲಸಗಾರರು, ಈ ರೀತಿ ಎಲ್ಲರಿಗೂ ಆಮಂತ್ರಣ
ಕಳಿಸಿದರೆ ಹೇಗೆ ? ಸ್ವಲ್ಪ ವಿಭಿನ್ನವಾಗಿ ಇರುತ್ತದೆ ಅಲ್ವಾ.
ಅಂಥಾ ಒಂದು ಉಚಿತ ವೆಬ್ಸೈಟ್ ಅನ್ನು ನೀವು ಸೃಷ್ಟಿ ಮಾಡಿ ನಿಮ್ಮ ಫೇಸ್ ಬುಕ್
ಪ್ರೊಫೈಲ್ ಗೆ ಲಿಂಕ್ ಕೊಟ್ಟು, ಅಲ್ಲಿರುವ, ನಿಮಗೆ ಬೇಕಾದವರನ್ನು ಮದುವೆಗೆ ಕರೆಯಲು
weduary ಎಂಬ ಉಚಿತ App ಒಂದಿದೆ. ಅದರ ಮೂಲಕ ನಿಮ್ಮ ಹಾಗು ನಿಮ್ಮ ಹುಡುಗಿಯ ಬಗೆಗಿನ
ಎಲ್ಲಾ ಮಾಹಿತಿಯನ್ನು ಕೊಟ್ಟು, ಫೇಸ್ ಬುಕ್ ಮೂಲಕ ಆಮಂತ್ರಿಸಬಹುದು. ಇದಷ್ಟೇ ಅಲ್ಲದೆ ಈ
app ಮೂಲಕ, ಯಾರ್ಯಾರು ಮದುವೆಗೆ ಬರುತ್ತಾರೆ, ಯಾರು ಬರುವುದಿಲ್ಲ ಎಂದೂ
ತಿಳಿದುಕೊಳ್ಳಬಹುದು. ಬರುವ ಪ್ರತಿಯೊಬ್ಬರ ಪ್ರೊಫೈಲ್ ಅನ್ನು ಸೃಷ್ಟಿ ಮಾಡಿ, ಅವರು
ಇಷ್ಟಪಡುವ, ಪಡದ ವಿಷಯಗಳ ಮಾಹಿತಿ ಕೊಡುತ್ತದೆ.
ನೀವು ಮದುವೆ ಆಗಿದ್ದೀರೋ ಇಲ್ಲವೋ, ಮುಂದೆ ಆಗುತ್ತೀರೋ ಇಲ್ಲವೋ, ಆದರೆ ಹಲವಾರು ಒಳ್ಳೆ theme ಹಾಗು templateಗಳು ಲಭ್ಯವಿರುವ ಈ weduary ವೆಬ್ಸೈಟ್ ಅನ್ನು ಇವತ್ತೇ ಚೆಕ್ ಮಾಡಿ.
No comments:
Post a Comment