ಸ್ನೇಹಿತರೆ ಮೊನ್ನೆಯಷ್ಟೆ ಅಲ್ಟ್ರಾಬುಕ್ ಎಂಬ ಲ್ಯಾಪ್‌ಟಾಪುಗಳ ಬಗ್ಗೆ ವರದಿಯನ್ನು ಓದಿದ್ದೀರಿ ತಾನೆ? ಆಗ ಅಲ್ಟ್ರಾಬುಕ್ ಲ್ಯಾಪ್‌ಟಾಪುಗಳ ನಿಖರವಾದ ಬೆಲೆಯ ಬಗ್ಗೆ ವರಿದಿಯಾಗಿರಲಿಲ್ಲ. ಇದೀಗ ಆಸುಸ್ ಕಂಪನಿಯು ಹೊರತಂದಿರುವ ಜೆನ್ ಬುಕ್ ಎಂಬ ಅಲ್ಟ್ರಾಬುಕ್ ಲ್ಯಾಪ್‌ಟಾಪುಗಳ ಬೆಲೆ ಕೋರ್ ಐ3 ಲ್ಯಾಪ್ ಟಾಪು ಸುಮಾರು 48,760.00 ರೂಗಳಿಗೆ ಪ್ಲಿಪ್ ಕಾರ್ಟ್ ಆನ್ಲೈನ್ ಜಾಲತಾಣದಲ್ಲಿ ಲಭ್ಯವಿದ್ದು. ಕೋರ್ ಐ7 ಲ್ಯಾಪ್ ಟಾಪಿನ ಬೆಲೆ ಸುಮಾರು 89,900.00 ರೂಗಳ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಉಲ್ಟ್ರಾಬುಕ್‌ಗಳೆಂದರೆ ಲೋಹದ ಮೇಲ್ಮೈಹೊಂದಿರುವ
ತೆಳುವಾದ ಲ್ಯಾಪ್‌ಟಾಪುಗಳು. ಇವುಗಳನ್ನು ಹಗುರ ಮಾಡಲು, ಇವುಗಳಲ್ಲಿ ಹಾರ್ಡ್‌ಡಿಸ್ಕ್
ಬದಲಿಗೆ ಫ್ಲಾಶ್ ಸ್ಮರಣಕೋಶಗಳನ್ನು ಬಳಸಲಾಗುತ್ತಿದೆ. ಡೆಸ್ಕ್ಟಾಪ್ ಗಳಲ್ಲಿ
ಸ್ಪರ್ಶಸಂವೇದಿ ತೆರೆಗಳು ಜನಪ್ರಿಯವಾಗಿಲ್ಲವಾದರೂ ಅಲ್ಟ್ರಾಬುಕ್‌ಗಳಲ್ಲಿ ಇಂತಹ ತೆರೆಗಳು
ಕಡ್ಡಾಯವಾಗಿ ಬೇಕೇ ಬೇಕು. ಆಸುಸ್ ಕಂಪೆನಿಯು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನು ಹಾಗೂ ಟ್ಯಾಬ್ಲೆಟ್+ಸ್ಮಾರ್ಟ್‌ಫೋನು=ಪ್ಯಾಡ್ ಪೋನ್
ತಯಾರಿಸಿ ಮಾರಾಟಕ್ಕೆ ಒದಗಿಸಿ ಯಶಸ್ಸು ಕಂಡಿದ್ದು ಇದೀಗ ಅಲ್ಟ್ರಾಬುಕ್ ಎಂಬ ಲ್ಯಾಪ್‌ಟಾಪುಗಳನ್ನು ತಯಾರಿಸಿದ್ದು. ಇತ್ತೀಚಿನ ಎರಡನೆಯ ಪೀಳಿಗೆ ಕೋರ್ ಪ್ರೊಸೆಸರ್ (ಮೊಬೈಲ್ ಬಳಕೆ ಹೊಂದುವಂತೆ) ಶಕ್ತಿಯನ್ನು ಹೊಂದಿರುವ ಲ್ಯಾಪ್ ಟಾಪುಗಳ ಮಾದರಿಗಾಗಿ ASUS ಕಂಪನಿಯ ಅಂತರ್ಜಾಲ ತಾಣ ನೋಡಿ. http://zenbook.asus.com/zenbook
No comments:
Post a Comment