ಯಾವುದಾದರೂ ಸರಿ, ಒಂದು ಕೆಲಸ ಸಿಕ್ಕಿದರೆ ಸಾಕು ಎನ್ನುವ ಕಾಲ ಈಗಿಲ್ಲ. ತಮ್ಮ ತಮ್ಮ
ಆಸಕ್ತಿಗೆ ಸರಿಹೊಂದುವ ಕೆಲಸ ಮಾಡಿದರೆ ಎಲ್ಲರಿಗೂ ಒಳ್ಳೆದು. ಅದಕ್ಕೆ ಸರಿಯಾದ ಕಂಪೆನಿ
ಹುಡುಕಬೇಕು. ಕಂಪೆನಿ ಸೇರುವ ಮುನ್ನ ಅಥವಾ ಕಂಪೆನಿಗೆ ಅರ್ಜಿ ಗುಜರಾಯಿಸುವ ಮುನ್ನ ಆ
ಕಂಪೆನಿ ಬಗ್ಗೆ ಪೂರ್ತಿ ವಿವರ ತಿಳಿದಿದ್ದರೆ ಒಳ್ಳೆಯದು. ಕಂಪೆನಿಯ ಜಾಲತಾಣದಲ್ಲೇನೋ
ಕಂಪೆನಿಯ ಬಗ್ಗೆ ವಿವರ ಇರುತ್ತದೆ. ಆದರೆ ಅದರ ಬಗ್ಗೆ ಅಲ್ಲಿ ಕೆಲಸ ಮಾಡಿದವರಿಂದ
ಹಿಂಮಾಹಿತಿ (feedback) ಸಿಗುವುದಿಲ್ಲ. ಅಲ್ಲಿ ಕೆಲಸ ಮಾಡಿದವರನ್ನು ಪರಿಚಯ ಮಾಡಿಕೊಂಡು
ಅವರಿಂದ ಮಾಹಿತಿ ತಿಳಿದುಕೊಳ್ಳುವುದು ಎಲ್ಲ ಸಂದರ್ಭಗಳಲ್ಲಿ ಅಸಾಧ್ಯ. ಈ ಎಲ್ಲ
ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಇರುವ ಜಾಲತಾಣ www.glassdoor.com. ಈ ಜಾಲತಾಣದಲ್ಲಿ ಕಂಪೆನಿಗಳ ವಿಮರ್ಶೆ ಮಾತ್ರವಲ್ಲ, ಅಲ್ಲಿ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು, ಸಂಬಳ ಎಷ್ಟಿರಬಹುದು, ಇತ್ಯಾದಿ ಎಲ್ಲ ಮಾಹಿತಿಗಳಿವೆ.
No comments:
Post a Comment