“ನಿಮ್ಮ ಜೀವಕ್ಕೆ ಬೆಲೆ ಇಲ್ಲದಿರಬಹುದು ಆದರೆ ಪೆಟ್ರೋಲ್ ತುಂಬ ದುಬಾರಿ. ಇಲ್ಲಿ ಧೂಮಪಾನ
ಮಾಡಬೇಡಿ” -ಇದು ಪೆಟ್ರೋಲ್ ಬಂಕ್ ಒಂದರ ಮುಂದೆ ಇರುವ ಫಲಕ. ಇನ್ನೊಂದು ಉದಾಹರಣೆ
-ಒಬ್ಬಾಕೆ ತನ್ನ ಚಿಕ್ಕ ಮಗುವನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಇದರಲ್ಲೇನು ವಿಶೇಷ
ಎನ್ನುತ್ತೀರಾ? ಆಕೆಯ ಹೆಗಲಲ್ಲಿ ಒಂದು ಬುಟ್ಟಿ ಇದೆ. ಆ ಬುಟ್ಟಿಯಲ್ಲಿ ಆಕೆಯ ಮುದ್ದಿನ
ನಾಯಿ ಇದೆ. ಅಂದರೆ ಆಕೆ ನಾಯಿಯನ್ನು ಹೊತ್ತುಕೊಂಡು ಹೋಗುತ್ತಿದ್ದಾಳೆ ಮತ್ತು ಅದೇ
ಸಮಯದಲ್ಲಿ ತನ್ನ ಮಗುವನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಇವೆಲ್ಲ ಎಲ್ಲಿ
ಎನ್ನುತ್ತೀರಾ? ನಮ್ಮದೇ ಭಾರತ ದೇಶದಲ್ಲಿ ಸ್ವಾಮಿ. ಹೌದು ಇದಕ್ಕೆ ಎಲ್ಲಿದೆ ಪುರಾವೆ
ಎನ್ನುತ್ತೀರಾ? ಬನ್ನಿ. onlyinindia.in ಜಾಲತಾಣಕ್ಕೆ ಭೇಟಿ ನೀಡಿ.
No comments:
Post a Comment