WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!
Showing posts with label source Kannada Gizbot. Show all posts
Showing posts with label source Kannada Gizbot. Show all posts

Sunday, April 15, 2012

ದಾನ ಮಾಡಲು ವೆಬ್ ಸೈಟ್

ಫೇಸ್ ಬುಕ್ ಇಲ್ಲವೆ ಟ್ವಿಟರ್ ನಲ್ಲಿ ನಿಮಗಿಷ್ಟವಾದ ವೀಡಿಯೊ ಅಥವಾ ಫೋಟೋಗಳನ್ನು ಹೇಗೆ ಶೇರ್ ಮಾಡಬಹುದೋ ಹಾಗೆಯೇ ನೀವು ದಾನ ಮಾಡಲು ಇಚ್ಛಿಸುವ ಸಮಾಜ ಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡು ಹಣ ಪಾವತಿಸಬಹುದು.
ಸೈನ್ ಅಪ್ ಮಾಡಿ ನೇರವಾಗಿ ಆನ್ಲೈನ್ ನಲ್ಲೆ ಹಣ ಸಂದಾಯ ಮಾಡುವ ಸೌಲಭ್ಯವಿದ್ದು ಜಗತ್ತಿನ ಅನೇಕ ಹೆಸರಾಂತ ಸಮಾಜ ಸೇವಾ ಸಂಸ್ಥೆಗಳು ಈ ವೆಬ್ ಸೈಟ್ ನ ಅಡಿಯಲ್ಲಿ ಬರುವ ಸೂಚನೆ ಕೊಟ್ಟಿವೆ.
ದಾನ ಮಾಡಲು ಚೆಕ್ ಮಾಡಿ: – http://www.igivefirst.com

Wednesday, March 21, 2012

ಸ್ಯಾಮ್ಸಂಗ್ ಫೋನ್ ಗೆ ಆನ್ಲೈನ್ ಅಂಗಡಿ

ಸ್ಯಾಮ್ಸಂಗ್ ಇಂಡಿಯಾ ಈಗ ಭಾರತೀಯ ಗ್ರಾಹಕರಿಗೆ ತನ್ನದೇ ಆದ ಹೊಸ ಆನ್ಲೈನ್ ಮಳಿಗೆಯನ್ನು ಪ್ರಾರಂಭಿಸಿದೆ.
ಇದರೊಂದಿಗೆ ನೀವು ಈಗ ಸ್ಯಾಮ್ಸಂಗ್ ಕಂಪನಿಯ ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ ಹಾಗು ಬಿಡಿಭಾಗಗಳನ್ನು ಇಲ್ಲೇ ಕೊಳ್ಳಬಹುದು. ಹಣ ಪಾವತಿಗಾಗಿ ಆನ್ಲೈನ್ (ಡೆಬಿಟ್ / ಕ್ರೆಡಿಟ್ ಕಾರ್ಡ್) ಸೌಲಭ್ಯ ಹಾಗು ಖರೀದಿಸಿದ ವಸ್ತು ಮನೆಗೆ ಬಂದ ಮೇಲೆ ಹಣ ಪಾವತಿ ಮಾಡುವ ಆಯ್ಕೆಯನ್ನೂ ಕೊಟ್ಟಿದೆ.
ನಿಮ್ಮ ಹತ್ತಿರದ ಮೊಬೈಲ್ ಅಂಗಡಿಗಿಂತಲೂ ಕಡಿಮೆ ಬೆಲೆಯಲ್ಲಿ ಸ್ಯಾಮ್ಸಂಗ್ ಉತ್ಪನ್ನಗಳು ಇಲ್ಲಿ ಸಿಗಲಿದ್ದು, ಕೆಲವು ಮೊಬೈಲುಗಳ ಮೇಲೆ ಡಿಸ್ಕೌಂಟ್ ಕೂಡಾ ಇದೆ.
ಹಾಗಾದರೆ ತಡ ಯಾಕೆ. ಖರೀದಿ ಮಾಡಲು ಇಲ್ಲವೆ ಬೆಲೆಯನ್ನು ಚೆಕ್ ಮಾಡಲು ಭೇಟಿ ಕೊಡಿ .

Tuesday, March 20, 2012

ವಾರಂಟಿಫೈ

ನಾವು ದಿನನಿತ್ಯದ ಬದುಕಲ್ಲಿ ಹಲವಾರು ವಸ್ತುಗಳನ್ನು ಖರೀದಿಸುತ್ತೇವೆ. ಅದೆಷ್ಟೋ ಬಿಲ್ಲುಗಳನ್ನು ಜೇಬಿನಲ್ಲಿ ಇಲ್ಲವೆ ಪರ್ಸಿನಲ್ಲಿ ತುರುಕಿರುತ್ತೇವೆ. ಕೊಂಡುಕೊಂಡ ವಸ್ತು ಕೆಟ್ಟಾಗ ಇಲ್ಲವೆ ಹಾನಿಯಾದಾಗ ಅದರ ಬಿಲ್ಲುಗಳು ಸಿಗದಿದ್ದರೆ ಪರದಾಡಬೇಕಾಗುತ್ತದೆ.
ಇನ್ನುಮುಂದೆ ನೀವು ಯಾವುದೇ ವಾರಂಟಿ ಇರುವ ವಸ್ತು ಖರೀದಿಸಿದಾಗ ಅದರ ಬಿಲ್ಲನ್ನು ಜೋಪಾನ ಮಾಡುವ ವಾರಂಟಿಫೈ ಎಂಬ ಆಪ್ (App) ಬಂದಿದೆ. ಇದನ್ನು ನೀವು ನಿಮ್ಮ ಸ್ಮಾರ್ಟ್ಫೋನ್ ಹಾಗು ಆಪಲ್ ನ ಉತ್ಪನ್ನಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಆ ಬಿಲ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಸ್ಕ್ಯಾನ್ ಆದ ನಿಮ್ಮ ಬಿಲ್ಲುಗಳನ್ನು ವಾರಂಟಿಫೈ ನ ಸರ್ವರುಗಳು ಎಷ್ಟೇ ವರ್ಷವಾದರೂ ಸರಿ ಜೋಪಾನ ಮಾಡುತ್ತವೆ.
ಇದಷ್ಟೇ ಅಲ್ಲದೆ ವಾರಂಟಿ ಕೊನೆಯಾಗುವ ಸಮಯವನ್ನು ಅದೇ ನೆನಪಿಸುತ್ತದೆ ಹಾಗು ಆನ್ಲೈನ್ ನಲ್ಲೇ ವಾರಂಟಿಯನ್ನು ವಿಸ್ತರಿಸಬಹುದು.
ಈ ಆಪ್ ಅನ್ನು ನಿಮ್ಮ ಆಪಲ್ ಹಾಗು ಆಂಡ್ರಾಯ್ಡ್ ಫೋನುಗಳಿಗೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ  

Thursday, March 1, 2012

ಸ್ಯಾಮ್ಸಂಗ್ ನ ಚಾಟ್ ಆನ್ ಈಗ ವೆಬ್ ಬ್ರೌಸೆರ್ ನಲ್ಲಿ ಲಭ್ಯ



ಸ್ಯಾಮ್ಸಂಗ್ ಚಾಟ್ ಆನ್ (ChatON), ಮೆಸೆಂಜರ್ ಸೇವೆ ನೀಡುವ ಆಪ್ ಆಗಿದ್ದು ಈಗ ವೆಬ್ ಬ್ರೌಸರ್ ಮೂಲಕವೂ ಲಭ್ಯವಾಗಲಿದೆ.
ಸಾಮಾನ್ಯವಾಗಿ ಸ್ಯಾಮ್ಸಂಗ್ ನ ಸ್ಮಾರ್ಟ್ ಫೋನ್ಗಳಲ್ಲಿ ಈ ಸೌಲಭ್ಯವಿದ್ದು, ನಿಮ್ಮ ಸ್ನೇಹಿತರ ಜೊತೆ ಗೂಗಲ್ ಚಾಟ್ ರೀತಿಯಲ್ಲಿ ಚಾಟ್ ಮಾಡಬಹುದಿತ್ತು. ಈಗ ವೆಬ್ ಮೂಲಕವೂ ಲಾಗಿನ್ ಮಾಡಿ ಚಾಟ್ ಮಾಡಲು ಸ್ಯಾಮ್ ಸಂಗ್ ಅನುವು ಮಾಡಿಕೊಟ್ಟಿದ್ದು, ಬಡಾ, ಐಓಎಸ್ ಹಾಗು ಆಂಡ್ರಾಯ್ಡ್ ಆಪ್ ಗಳಲ್ಲಿ ಈಗಾಗಲೇ ಲಭ್ಯವಿದೆ. .
ವೆಬ್ ಮೂಲಕ ಚಾಟ್ ಆನ್ (ChatON) ಲಾಗಿನ್ ಮಾಡಲು ಕ್ಲಿಕ್ ಮಾಡಿ 

Sunday, February 26, 2012

ನಿಮ್ಮ CAMERA ಕಳೆದುಹೋದರೆ Onlineನಲ್ಲಿ ಹುಡುಕುವುದು ಹೇಗೆ ?

ಇಷ್ಟಪಟ್ಟು ಖರೀದಿಸಿರುವ ಯಾವುದೇ ವಸ್ತು ಕಳೆದು ಹೋದರೆ ಎಷ್ಟು ಬೇಜಾರಾಗುತ್ತೆ ಅಂತಾ ಕಳೆದು ಕೊಂಡಿರುವುವರಿಗೆ ಮಾತ್ರ ಗೊತ್ತು.

ಅದರಲ್ಲೂ ನಮ್ಮ ನೆನಪುಗಳನ್ನು ಸೆರೆ ಹಿಡಿದು ಜೀವನ ಪೂರ್ತಿ ಜ್ಞಾಪಿಸಿಕೊಳ್ಳುವ ಚಿತ್ರಗಳು ತೆಗೆಯುವ ಕ್ಯಾಮರಾ ಕಳೆದು ಹೋದರೆ ಮನಸಿಗೆ ಇನ್ನಷ್ಟು ದುಗುಡ. ಕ್ಯಾಮರಾ ಜೊತೆ ಫೋಟೋಗಳೂ ಕಳೆದು ಹೋದರೆ ಏನೋ ಕಳೆದುಕೊಂಡ ಅನುಭವ.

ಸಂತೋಷದ ವಿಷಯ ಏನೆಂದರೆ ಕಳೆದು ಹೋದ ಕ್ಯಾಮರಾ ಅಂತರ್ಜಾಲದಲ್ಲಿ ಹುಡುಕಿ ಮಾಹಿತಿಯನ್ನು ತೆಗೆಯಬಹುದು ಕೂಡ . ಅದೇನೆಂದರೆ, ಪ್ರತಿಯೊಂದು ಕ್ಯಾಮರಾಗೂ ಒಂದು ವಿಶಿಷ್ಟವಾದ ಅಂಕಿ ಇರುತ್ತದೆ. ಅದನ್ನು ಇಂಥ ವೆಬ್ಸೈಟ್ ನಲ್ಲಿ ಕೊಟ್ಟರೆ ಸಾಕು, ನೀವು ಕಳೆದುಕೊಂಡ ನಂತರ ಯಾರಾದರೂ ಆ ಕ್ಯಾಮೆರಾ ದಲ್ಲಿ ಫೋಟೋ ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದ್ದರೆ, ನಿಮ್ಮ ಕ್ಯಾಮರಾ ದ ವಿಶಿಷ್ಟ ಸಂಖ್ಯೆ ಅನುಸರಿಸಿ ಅದು ಅಂತರ್ಜಾಲದಲ್ಲಿ ಹೆಕ್ಕಿ ತೆಗೆಯುತ್ತದೆ. ನಿಮ್ಮ ಹತ್ತಿರ ವಿಶಿಷ್ಟ ಸಂಖ್ಯೆ ಇಲ್ಲದಿದ್ದರೂ ಕೂಡ , ಕಳೆದು ಹೋದ ಕ್ಯಾಮರಾದಿಂದ ತೆಗೆದ ಯಾವುದಾದರೂ ಒಂದು ಫೋಟೋ ಇದ್ದರೂ ಸಾಕು ನೀವು ಅದನ್ನು ಅಪ್ಲೋಡ್ ಮಾಡಿ. ಈ ವೆಬ್ ಸೈಟ್ ಅದರಿಂದಲೇ ಸಂಖ್ಯೆ ಹೆಕ್ಕಿ ತೆಗೆದು ಹುಡುಕಲಾರಂಭಿಸುತ್ತದೆ.
ಪ್ರಯತ್ನಿಸಿ ನೋಡಿ , ಮತ್ತೆ ನಿಮ್ಮ ಕ್ಯಾಮರಾ ಸಿಗಬಹುದು, ಯಾವನಿಗ್ ಗೊತ್ತು.
http://www.camerafound.com
http://www.stolencamerafinder.com