WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Friday, June 10, 2016

ಲೆ ಇಕೋ ಕಂಪನಿಯ ಲೆ 2 ಮತ್ತು ಲೆ ಮ್ಯಾಕ್ಸ್ 2 ಎರಡು ನೂತನ ಶ್ರೇಣಿ ಮೊಬೈಲ್ ಗಳು ಭಾರತದಲ್ಲಿ ಬಿಡುಗಡೆ

ಲೆ ಟಿವಿಯ ಲೆ 2 ಮತ್ತು ಲೆ ಮ್ಯಾಕ್ಸ್ 2 ಎಂಬ ಎರಡು ಶ್ರೇಣಿಯ ಮೊಬೈಲ್ ಗಳು ಭಾರತೀಯ ಮಾರುಕಟ್ಟೆಗೆ ಜೂನ್ ತಿಂಗಳಿನಲ್ಲಿಯೇ ಲಗ್ಗೆ ಇಟ್ಟಿವೆ. ತೀರಾ ಕಡಿಮೆ ಬೆಲೆ ನಿಗದಿಪಡಿಸಿರುವ ಕಂಪನಿ ಮಧ್ಯಮ ವರ್ಗದವರನ್ನ ಗುರಿಯಾಗಿಸಿಕೊಂಡು ಮಾರುಕಟ್ಟೆಯನ್ನ ಭದ್ರಪಡಿಸಿಕೊಳ್ಳುವ ಯೋಚನೆ ಮಾಡಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಚೀನಾದಲ್ಲಿ ಟಿವಿ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಲೆ ಟಿವಿ ಮೊಬೈಲ್ ಮೂಲಕವು ಜನಪ್ರಿಯತೆ ಗಳಿಸಿದೆ. ಅದಾಗಲೇ ಚೀನಾ ಮತ್ತು ಅಮೆರಿಕಾ ಹಾಗೂ ಭಾರತದ ಮಾರುಕಟ್ಟೆಯಲ್ಲಿ ಭಾರಿ ಮಾರಾಟ ದಲ್ಲಿರುವ ಕಂಪನಿ. ಭಾರತದ ಮಾರುಕಟ್ಟೆಯಲ್ಲಿ ಫೆಬ್ರವರಿ- ಮೇ ತಿಂಗಳಿನ  ನೂರು ದಿನಗಳಲ್ಲಿ ಸುಮಾರು 5 ಲಕ್ಷ ಮೊಬೈಲ್ ಗಳ ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ  ಎಂದು ಕಂಪನಿ ತಿಳಿಸಿದೆ.

ಇದೀಗ ಬಿಡುಗಡೆಯಾಗಿರುವ ಮೊಬೈಲ್ಗಲ್ಲಿ ಜಗತ್ತಿನಲ್ಲಿಯೇ ಮೊದಲ ಬಾರಿಗೆ CDLA ತಂತ್ರಜ್ಞಾನ ದಲ್ಲಿ ಆಡಿಯೋ ಇಯರ್ ಪೋನ್ ಗಳಲ್ಲಿ ಸಂಗೀತ ಆಲಿಸುವ ವ್ಯವಸ್ಥೆ ಹಾಗೂ VoLTE ತಂತ್ರಜ್ಞಾನ ದಲ್ಲಿ ಎಚ್.ಡಿ ಧ್ವನಿಯಲ್ಲಿ ವಾಯಿಸ್/ ವಿಡಿಯೋ ಕಾಲಿಂಗ್ ವ್ಯವಸ್ಥೆ, 3 ಜಿಬಿ ರ್ಯಾಮ್, 32 ಜಿಬಿ ಸಾಮರ್ಥ್ಯವುಳ್ಳ ಆಂತರಿಕ ಮೆಮೊರಿ,  16 ಮೆಗಾ ಪಿಕ್ಸೆಲ್ ಹಿಂದಿನ ಕ್ಯಾಮೆರಾ,8 ಮೆಗಾ ಪಿಕ್ಸೆಲ್ ಮುಂದಿನ ಕ್ಯಾಮೆರಾ ಹಾಗೂ ಸ್ನಾಪ್ ಡ್ರಾಗನ್ _ ಪ್ರೊಸೆಸರ್ ಹೊಂದಿರುವ ಲೆ 2 ಮೊಬೈಲ್  11900.00 ರೂಪಾಯಿಗೆ ಲಭ್ಯವಿದೆ ಹಾಗೂ ಸ್ನಾಪ್ ಡ್ರಾಗನ್ 820 ಪ್ರೊಸೆಸರ್, 21ಮೆಗಾ ಪಿಕ್ಸೆಲ್ ಹಿಂದಿನ ಕ್ಯಾಮೆರಾ,8 ಮೆಗಾ ಪಿಕ್ಸೆಲ್ ಮುಂದಿನ ಕ್ಯಾಮೆರಾ, 4 ಹಾಗೂ 6 ಜಿಬಿ ರ್ಯಾಮ್ ಹೊಂದಿರುವ ಲೆ ಮ್ಯಾಕ್ಸ್ 2 ಮೊಬೈಲ್ ಕ್ರಮವಾಗಿ 22999.00 ರೂ ಹಾಗೂ 29990.00 ರೂ. ಬೆಲೆ ನಿಗದಿ ಪಡಿಸಲಾಗಿದೆ.


ಇದೇ ಮೊದಲ ಬಾರಿಗೆ ಕಂಪನಿಯ ಸ್ವಂತ ಇ ಕಾಮರ್ಸ್ ಆದ. www.in.lemall.com ಜಾಲತಾಣದಲ್ಲಿ ಮಾರಾಟ ಮಾಡುತ್ತಿದ್ದು. ಮೊದಲ ಮಾರಾಟ ಜೂನ್ 15 ರಂದು ಮಧ್ಯಾಹ್ನ 12 ರ ನಂತರ ರಿಜಿಸ್ಟ್ರೇಷನ್ ಮಾಡಿ ಜೂನ್ 20 ರಂದು ಲೆ 2 ಮೊಬೈಲ್ ಅನ್ನು ಕೇವಲ ಒಂದು ರೂಪಾಯಿ ಗೆ ಮಾರಾಟ ಮಾಡುವುದಾಗಿ ಕಂಪನಿ ಘೋಷಿಸಿದೆ. ಮೊದಲಿನಂತೆ ಪ್ಲಿಪ್ ಕಾರ್ಟ್ ಜಾಲತಾಣದಲ್ಲಿ ಮಾರಾಟ ಮುಂದುವರೆಯಲಿದೆ.


ಈಗಾಗಲೇ ಕಂಪನಿಯ ಭರವಸೆ ನೀಡಿದಂತೆ ಲೆ 1 ಎಸ್ ಹಾಗೂ ಲೆ 1 ಇಕೋ ಹಾಗೂ ಲೆ ಮ್ಯಾಕ್ಸ್ ಮೊಬೈಲ್ ಗಳಲ್ಲಿ  ಲೈವ್ ಎಂಬ ತಂತ್ರಾಂಶದಲ್ಲಿ 100+ ಕ್ಕೂ ಹೆಚ್ಚು ಟಿವಿ ಚ್ಯಾನಲ್ ಗಳು ಹಾಗೂ ಲೆ ವಿಡಿ ಎಂಬ ತಂತ್ರಾಂಶದಲ್ಲಿ 2000+ ಕ್ಕೂ ಹೆಚ್ಚು Eros Now ಕಂಪನಿಯ ಭಾರತೀಯ ಭಾಷೆಗಳ ಸಿನಿಮಾ ಗಳನ್ನು ಉಚಿತವಾಗಿ ನೀಡಿದೆ. ಮುಂದಿನ ತೈಮಾಸಿಕದಲ್ಲಿ ಲೆ ಡ್ರೈವ್ ನಲ್ಲಿ 5 ಟೆರಾ ಬೈಟ್ ಕ್ಲೌಡ್ ಸ್ಪೇಸ್ ಹಾಗೂ 1.35 ಮಿಲಿಯನ್ ಹಾಡುಗಳನ್ನು ಉಚಿತವಾಗಿ ನೀಡಲಿದೆ ಎಂದು ಕಂಪನಿ ಹೇಳಿದೆ.


ಮಂದಿನ ದಿನಗಳಲ್ಲಿ ಕಂಪನಿಯು ಬೃಹತ್ ಪರದೆಯುಳ್ಳ ಸ್ಮಾರ್ಟ್ ಟಿ.ವಿ, ಲಿ ಸೀ ಸ್ಮಾರ್ಟ್ ಕಾರು, ಸೂಪರ್ ಸೈಕಲ್, ತ್ರಿಡಿ ಹೆಲ್ಮೆಟ್, ಪವರ್ ಬ್ಯಾಂಕ್ ಇನ್ನಿತರೆ ಉತ್ಪನ್ನ ಗಳನ್ನು  ಮಾರುಕಟ್ಟೆಗೆ ಬಿಡುಗಡೆ ಮಾಡುವ ಭರವಸೆ ನೀಡಿದೆ. 



No comments:

Post a Comment