ಭೌತಶಾಸ್ತ್ರದ ಪ್ರಯೋಗಶಾಲೆಗಳಲ್ಲಿ ಅಂದೋಲನ ಲೇಖಿ (Oscilloscope) ಸಾಮಾನ್ಯವಾಗಿ
ಕಾಣಸಿಗುವ ಒಂದು ಸಾಧನ. ಇದನ್ನು ಬಳಸಿ ವಿದ್ಯುತ್ ತರಂಗಗಳ ಆವರ್ತಸಂಖ್ಯೆ, ವೋಲ್ಟ್,
ಕರೆಂಟ್, ಇತ್ಯಾದಿಗಳನ್ನು ಅಳೆಯಬಹುದು. ಇದು ಬೆಲೆಬಾಳುವ ಸಾಧನ ಮಾತ್ರವಲ್ಲ ಇದನ್ನು
ಬಳಸಲು ಪರಿಣತರಿಂದ ಮಾತ್ರ ಸಾಧ್ಯ. ಇದೀಗ ಗಣಕದಲ್ಲೇ ಆಸಿಲೋಸ್ಕೋಪನ್ನು ಅನುಕರಿಸುವ
Visual Analyser ಎಂಬ ಉಚಿತ ತಂತ್ರಾಂಶ ಲಭ್ಯವಾಗಿದೆ. ಇದನ್ನು ಬಳಸಿ ಗಣಕದ ಆಡಿಯೋ
ಕಾರ್ಡ್, ಮೈಕ್ರೋಫೋನ್ ಮೂಲಕವೇ ಧ್ವನಿ ತರಂಗಗಳನ್ನು ಊಡಿಸಿ ಅವುಗಳನ್ನು
ವಿಶ್ಲೇಷಿಸಬಹುದು. ಉದಾಹರಣೆಗೆ ಭೌತಶಾಸ್ತ್ರದಲ್ಲಿ ಅತಿ ಸಾಮಾನ್ಯವಾಗಿ ಮಾಡುವ ಒಂದು
ಪ್ರಯೋಗವೆಂದರೆ ಬೇರೆ ಬೇರೆ ಟ್ಯೂನಿಂಗ್ ಫೋರ್ಕ್‌ಗಳನ್ನು ಬಳಸಿ ಬೇರೆ ಬೇರೆ ಆವರ್ತ
ಸಂಖ್ಯೆಯ ಧ್ವನಿ ತರಂಗಗಳನ್ನು ಹೊರಡಿಸುವುದು. ಈ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿರುವ
ಲ್ಯಾಪ್‌ಟಾಪ್‌ನ ಮೈಕ್ರೋಫೋನ್ ಮುಂದೆ ಧ್ವನಿ ಹೊರಡಿಸುತ್ತಿರುವ ಟ್ಯೂನಿಂಗ್ ಫೋರ್ಕ್
ಹಿಡಿದರೆ ಅದು ಯಾವ ಆವರ್ತ ಸಂಖ್ಯೆಯ ಧ್ವನಿಯನ್ನು ಹೊರಡಿಸುತ್ತಿದೆ ಎಂದು ಅದು
ಹೇಳುತ್ತದೆ. ಹಾಡುಗಾರರು ತಮ್ಮ ಶ್ರುತಿ ಶುದ್ಧಿಯನ್ನು ವೃದ್ಧಿಗೊಳಿಸಲು ಈ
ತಂತ್ರಾಂಶವನ್ನು ಬಳಸಬಹುದು. ಈ ತಂತ್ರಾಂಶ www.sillanumsoft.org ಜಾಲತಾಣದಲ್ಲಿ ಲಭ್ಯ.
No comments:
Post a Comment