ಮಿಲ್ಕ್‌ಆರ್‌ವಾಟರ್ ಎನ್ನುವ http://milkorwater.com ತಾಣ,ಶೇರು ವಹಿವಾಟು
ನಡೆಸುವವರಿಗೆ ಪ್ರಿಯವಾಗಬಲ್ಲುದು.ಈ ತಾಣದಲ್ಲಿ ಶೇರು ವಹಿವಾಟದ ಬಗ್ಗೆ ಭವಿಷ್ಯ ನುಡಿವ
ಪರಿಣತರ ಹಿಂದಿನ ಭವಿಷ್ಯವಾಣಿಗಳ ಯಶಸ್ಸಿನ ಪ್ರಮಾಣ ಹೇಗಿತ್ತು ಎಂಬಂತಹ ವಿವರಗಳು
ಲಭ್ಯ.ಶೇರುಗಳನ್ನು ಖರೀದಿಸಲು,ಮಾರಲು ಸಲಹೆ ಕೊಡುವವರು ಸಾಕಷ್ಟು ಜನ.ಅದರೆ ಅವರ
ಶಿಫಾರಸುಗಳ ಅವಸ್ಥೆ ಏನಾಯಿತು? ಅವುಗಳು ಬರೇ ಬೊಗಳೆಯೇ ಅಲ್ಲ ಅವನ್ನು ನಂಬಿದವರು ಕಾಸು
ಮಾಡಿಕೊಂಡರೇ ಎನ್ನುವ ಬಗ್ಗೆ ಯಾವ ಮಾಹಿತಿಯೂ ಸಿಗುವುದಿಲ್ಲ.ಈ ಹೊಸ ತಾಣವನ್ನು ವಿಪ್ರೋದ
ಮಾಜಿ ಉದ್ಯೋಗಿಯೋರ್ವರು ಅಭಿವೃದ್ಧಿ ಪಡಿಸುತ್ತಿದ್ದು,ಮುಂದಿನ ದಿನಗಳಲ್ಲಿ ಶೇರು ಬಗ್ಗೆ
ಮಾತ್ರವಲ್ಲದೆ ಮ್ಯೂಚುವಲ್ ಫಂಡ್,ಸರಕುಗಳು ಇತ್ಯಾದಿಗಳ ಬಗೆಗಿನ ಶಿಫಾರಸುಗಳ ಬಗ್ಗೆಯೂ
ಮಾಹಿತಿ ದೊರಕಲಿದೆ.ಹೈದರಾಬಾದಿನ ಅಮರದೀಪ ಲಖ್‌ತಾಕಿಯಾ ಅವರು ಈ ತಾಣ ಆರಂಭಿಸಿ
ತಿಂಗಳಿನ್ನೂ ತುಂಬಿಲ್ಲ.ಅವರ ಕುಟುಂಬದವರು ವಿವಿಧ ಶಿಫಾರಸುಗಳ ಬೆನ್ನು
ಹಿಡಿದು,ಕೈಸುಟ್ಟುಕೊಂಡದ್ದನ್ನು ನೋಡಿದ ಬಳಿಕ ಅವರಿಗೆ ಈ ಯೋಚನೆ ಬಂತಂತೆ.
No comments:
Post a Comment