ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆ ಬಗ್ಗೆ ನಮಗೆಲ್ಲಾ ಗೊತ್ತು.ಕಂಪ್ಯೂಟರಿನ
ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ತಂತ್ರಾಂಶ ವ್ಯವಸ್ಥೆ ವಿಂಡೋಸ್,ಲೀನಕ್ಸ್ ಅಂತೆ
ಮುಂದಿನ ದಿನಗಳಲ್ಲಿ ನಮ್ಮ ನಗರಗಳನ್ನು ನಿಯಂತ್ರಿಸಲು,ಅವುಗಳ
ಸಾರಿಗೆ,ಜನಸಂಚಾರ,ಪಾರ್ಕಿಂಗ್,ನೀರು,ವಿದ್ಯುತ್,ಇಂಧನ ಪೂರೈಕೆ,ಅಗ್ನಿಶಾಮಕ
ವ್ಯವಸ್ಥೆ,ಸುರಕ್ಷತೆ,ಭದ್ರತಾ ವ್ಯವಸ್ಥೆ ಇವೆಲ್ಲವನ್ನೂ ನಿಯಂತ್ರಿಸುವ ಸಮಗ್ರ ತಂತ್ರಾಂಶ
ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಬಹುದೇ? ಅ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.ಅಂತಹ
ವ್ಯವಸ್ಥೆ ಬಂದರೆ,ಸಕಲ ವ್ಯವಸ್ಥೆಗಳೂ ಸ್ವಯಂಚಾಲಿತವಾಗಿ,ಅವುಗಳು ಸೂಪರ್ ಕಂಪ್ಯೂಟರ್
ಅಂತಹ ವ್ಯವಸ್ಥೆಯ ಸಹಾಯದಿಂದ ಮಾದರಿ ನಗರಗಳನ್ನು ನಿಯಂತ್ರಿಸಲಿವೆ.ಇಂತಹ ವ್ಯವಸ್ಥೆಯಲ್ಲಿ
ಸುಮಾರು ಐವತ್ತು ಬಿಲಿಯನ್ ಸಂಪರ್ಕಿತ ಸಾಧನಗಳು ಜತೆಯಾಗಿ ಕೆಲಸ ಮಾದಬೇಕಾಗ ಬರಬಹುದು
ಎನ್ನುವ ಅಂದಾಜು ಮಾಡಲಾಗಿದೆ.ಹಲವಾರು ರೀತಿಯ ಸಂವೇದಕಗಳನ್ನು,ನಗರಗಳ ಸುತ್ತ
ಸ್ಥಾಪಿಸಿ,ಅವುಗಳ ಸಹಾಯದಿಂದ ವ್ಯವಸ್ಥೆಗಳನ್ನು ನಿಯಂತ್ರಿಸಲು ಕಂಪ್ಯೂಟರುಗಳಿಗೆ
ಸಾಧ್ಯವಾಗಲಿದೆಮೆಟ್ರೋ,ರೈಲ್ವೇ,ಬಸ್,ಖಾಸಗಿ ಸಾರಿಗೆ ಇವೆಲ್ಲವೂ ಒಂದೆಡೆಯಿಂದ
ನಿಯಂತ್ರಣವಾಗಲಿವೆ.ಹೀಗಾದಾಗ ವ್ಯವಸ್ಥೆಗಳ ನಡುವಣ ತಾಳಮೇಳ
ಹೆಚ್ಚಬಹುದು.ಪೋರ್ಚುಗಲ್‌ನಲ್ಲಿ ಪ್ರಾಯೋಗಿಕ ವ್ಯವಸ್ಥೆಯೊಂದರ ಅಳವಡಿಕೆಯೂ ಆಗಿದೆ.
No comments:
Post a Comment