ವಾಣಿಜ್ಯ ಉತ್ಪನ್ನವಾಗಿ,ಸಬ್ಸಿಡಿಯಿಲ್ಲದೆಯೂ ಮೂರು ಸಾವಿರ ಬೆಲೆಯಲ್ಲಿ ಜನರಿಗೆ
ಲಭ್ಯವಾಗುವ ನಿರೀಕ್ಷೆಯಿರುವ ಆಕಾಶ್ ಟ್ಯಾಬ್ಲೆಟ್ ಸಾಧನ,ಬಿಡುಗಡೆಯಾಗಿ
ಸುದ್ದಿಯಲ್ಲಿದೆ.ವಾಣಿಜ್ಯ ಮಾದರಿಯಲ್ಲಿ ಸೆಲ್‌ಪೋನ್ ಮಾಡೆಮ್ ಇರುವ ಕಾರಣ,ಇದರಲ್ಲಿ
ಅಂತರ್ಜಾಲವನ್ನು ಮೊಬೈಲ್ ಜಾಲದ ಮೂಲಕವೂ ಪಡೆಯಬಹುದು.ಸರಕಾರಕ್ಕೆ ಒದಗಿಸುವ ಮಾದರಿಯಲ್ಲಿ
ವೈ-ಫೈ ಮೂಲಕ ಅಂತರ್ಜಾಲ ಪಡೆಯಬೇಕಷ್ಟೆ.ಇನ್ನೂರೈವತ್ತಾರು ಎಂಬಿ ಸ್ಮರಣಕೋಶ
ಇದೆ.ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆ ಹೊಂದಿದ ಟ್ಯಾಬ್ಲೆಟ್ ಇನ್ನೆರಡು ತಿಂಗಳಲ್ಲಿ
ಮಾರಾಟಕ್ಕೆ ಲಭ್ಯವಾಗಬಹುದು.ಡೇಟಾವಿಂಡ್ ಕಂಪೆನಿಯಿದನ್ನು ತಯಾರಿಸಿದೆ.ಚೀನೀ ಬಿಡಿಭಾಗಗಳೇ
ಅದು ಅಗ್ಗವಾಗಿರುವ ಗುಟ್ಟು.
No comments:
Post a Comment