ಗೂಗಲ್ ನಕ್ಸಸ್ ಪೋನುಗಳನ್ನು ಬಳಸುವವರಿಗೆ ವ್ಯಾಲೆಟ್ ಎನ್ನುವ ಹೊಸ ಸೇವೆಯನ್ನು ಗೂಗಲ್
ನೀಡಲಾರಂಭಿಸಿದೆ.ಕ್ರೆಡಿಟ್ ಕಾರ್ಡನ್ನು ಮೊಬೈಲ್ ತಂತ್ರಾಂಶಕ್ಕೆ ತುಂಬಿ,ಅದರ ಮೂಲಕ ಹಣ
ಪಾವತಿಸುವ ವ್ಯವಸ್ಥೆ ಇದಾಗಿದೆ.ರೀಡರ್ ಇರುವೆಡೆ,ಹ್ಯಾಂಡ್‌ಸೆಟ್ಟನ್ನು ರೀಡರಿಗೆ
ಸ್ಪರ್ಶಿಸುವ ಮೂಲಕವೇ ಹಣ ಪಾವತಿಸುವ ಅನುಕೂಲತೆಯಿದೆ.ಸಮೀಪಜಾಲಗಳ ಏರ್ಪಡುವಿಕೆಯ ಮೂಲಕ
ಕೆಲಸ ಮಾಡುವ ಈ ವ್ಯವಸ್ಥೆಯು ಜನರಿಗೆ ಅರ್ಥವಾಗಲು ತುಸು ಸಮಯ ಹಿಡಿಸಬಹುದು.ಜತೆಗೆ ಸಾಧನ
ನಕ್ಸಸ್ ಬೇಕೆನ್ನುವುದು ಇದರ ಬಳಕೆಗೆ ಇನ್ನೊಂದು ಅಡ್ದಿಯಾಗಲಿದೆ.ಎಲ್ಲಾ ಮೊಬೈಲ್
ಜಾಲಗಳಲ್ಲಿ ಈ ಸೇವೆ ಲಭ್ಯವಿಲ್ಲವೆನ್ನುವುದು ಇನ್ನೊಂದು ಸಮಸ್ಯೆ.
No comments:
Post a Comment