ಆಟ ಆಡುವುದು ಯಾರಿಗೆ ಇಷ್ಟವಿಲ್ಲ? ಗಣಕದಲ್ಲಿ ಆಡಬಲ್ಲ ಆಟಗಳು ಸಾವಿರಾರಿವೆ. ಅವುಗಳಲ್ಲಿ
ಬಹುಪಾಲು ತುಂಬ ದೊಡ್ಡ ಗಾತ್ರದಾಗಿರುತ್ತವೆ ಮತ್ತು ಹಣ ನೀಡಿ
ಕೊಂಡುಕೊಳ್ಳಬೇಕಾಗಿರುತ್ತವೆ. ಅಂತರಜಾಲದ ಮೂಲಕವೇ ಆಡಬಲ್ಲ ಆಟಗಳ ಜಾಲತಾಣಗಳೂ ಹಲವಾರಿವೆ.
ಅಂತಹ ಒಂದು ಜಾಲತಾಣ www.brizy.com.
ಇಲ್ಲಿರುವ ಆಟಗಳೆಲ್ಲ ಅಡೋಬಿಯವರ ಫ್ಲಾಶ್ ತಂತ್ರಾಂಶವನ್ನು ಬಳಸುತ್ತವೆ. ಸಾಮಾನ್ಯವಾಗಿ
ಎಲ್ಲರ ಗಣಕಗಳಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ಫ್ಲಾಶ್ ಇನ್‌ಸ್ಟಾಲ್ ಆಗಿರುತ್ತದೆ. ಈ
ಜಾಲತಾಣದಲ್ಲಿರುವ ಆಟಗಳನ್ನು ಹಲವು ವಿಷಯಾಧಾರಿತವಾಗಿ ವಿಂಗಡಿಸಲಾಗಿದೆ.
No comments:
Post a Comment