ಮೋಷಿ ಮಾನ್ಸ್‌ಟರ್ಸ್ www.moshimonsters.com ಎನ್ನುವುದು ಇಂತಹುದೇ ಇನ್ನೊಂದು
ತಾಣ. ಈ ತಾಣದ ಸದಸ್ಯರಾಗುವ ಮಕ್ಕಳು ಅಲ್ಲಿನ ವರ್ಚುಯಲ್ ಲೋಕದಲ್ಲಿ ತಮ್ಮದೇ ಆದ ವಿಚಿತ್ರ
ಪ್ರಾಣಿಯೊಂದನ್ನು ಇರಿಸಿಕೊಳ್ಳಬಹುದು. ಆ ಪ್ರಾಣಿಯ ಯೋಗಕ್ಷೇಮ ವಿಚಾರಿಸಿಕೊಳ್ಳುವುದು
ಮಕ್ಕಳದೇ ಜವಾಬ್ದಾರಿ. ಅವರ ಪ್ರಾಣಿ ತಮ್ಮ ಗೆಳೆಯರ ಪ್ರಾಣಿಯ ಜೊತೆ ಸಂಪರ್ಕದಲ್ಲಿರುವುದೂ
ಸಾಧ್ಯ. ಬಹಳ ಕ್ಷಿಪ್ರವಾಗಿ ಲಕ್ಷಾಂತರ ಬಳಕೆದಾರರನ್ನು ಸಂಪಾದಿಸಿಕೊಂಡಿರುವ ಈ ತಾಣ
ಇದೀಗ ತನ್ನ ತಾಣದಲ್ಲಿರುವ ಪ್ರಾಣಿಗಳನ್ನು ಹೋಲುವ ಆಟಿಕೆಗಳ ತಯಾರಿಕೆಯನ್ನೂ
ಶುರುಮಾಡಿದೆ.
No comments:
Post a Comment