ಎಸ್ಸೆಮೆಸ್ಸ್ ಮಾಡುವುದಕ್ಕೆ, ಮಾತಾಡುವುದಕ್ಕೆ, ಪೋಟೋ ಶೇರ್ ಮಾಡುವುದಕ್ಕೆ, ಆಡಿಯೋ ಮೆಸೇಜ್ ಕಳಿಸುವುದಕ್ಕೆ ಇಂದು ಅಪ್ಲಿಕೇಷನ್ ಇದ್ದರೆ ಎಷ್ಟು ಚಂದ ಅಲ್ವಾ? ಮೋಬೈಲ್ ಜಗತ್ತಿನಲ್ಲಿ ಅದೂ ಸಹ ಇದೆ. "ಟು ಮಿ" ಎನ್ನುವ ತಂತ್ರಾಂಶ ಈ ಎಲ್ಲಾ ಸೇವೆಯನ್ನು ನೀಡುತ್ತದೆ. ಉಚಿತವಾಗಿ ಕರೆ ಮಾಡಬಹುದು. ಮೆಸೇಜ್ ಕಳುಹಿಸಬಹುದು. ವಿದೇಶಗಳಿಗೆ ಕರೆ ಮಾಡಿದರೂ ಅಂತಾರಾಷ್ಟ್ರೀಯ ಕರೆಯ ಹೊರೆ ಬೀಳುವುದಿಲ್ಲ. ನಿಮ್ಮ ಮೆಸೇಜ್ಗಳು, ಶೇರ್ ಮಾಡುವ ಪೋಟೋಗಳು ದುರ್ಬಳಕೆಯಾಗದಂತೆ ಸುರಕ್ಷಿತವಾಗಿರುತ್ತವೆ. ಅಷ್ಟೇ ಅಲ್ಲದೇ ಈ ತಂತ್ರಾಂಶದಿಂದ ನಡೆಯುವ ಯಾವುದೇ ಸಂವಹನ ಸುರಕ್ಷಿತವಾಗಿರುತ್ತದೆ. ಕೇವಲ ಮಾತುಕತೆಗಷ್ಟೆ ಅಲ್ಲ, ನಿಮ್ಮ ಸ್ನೇಹಿತರು, ಸಂಬಂಧಿಕರು ಈಗ ಎಲ್ಲಿದ್ದಾರೆ ಎಂದು ತಿಳಿಯುವುದಕ್ಕೂ ಟು ಮಿ ತಂತ್ರಾಂಶ ಸಹಾಯ ಮಾಡುತ್ತದೆ. ಈ ತಂತ್ರಾಂಶ ಐಪೋನ್ ಹಾಗೂ ಆಂಡ್ರಾಯ್ಡ್ ಮೊಬೈಲ್ ತಂತ್ರಾಂಶ ಲಭ್ಯವಿದ್ದು ಮಾಹಿತಿಗಾಗಿ ಜಾಲತಾಣ ವಿಳಾಸ: http://www.tumeapp.com/en/
No comments:
Post a Comment