ಶಾಲೆಗಳಲ್ಲಿ ಬಳಸುವ ಕರಿಹಲಗೆ ಗೊತ್ತು. ಅಂತೆಯೇ ಕಚೇರಿಗಳಲ್ಲಿ, ವಿಚಾರಸಂಕಿರಣಗಳಲ್ಲಿ
ಬಳಸುವ ಬಿಳಿಹಲಗೆ ಗೊತ್ತು ತಾನೆ? ನೀವು ಬೆಂಗಳೂರಿನಲ್ಲಿ, ನಿಮ್ಮ ಸಹೋದ್ಯೋಗಿ ಅಥವಾ
ಸ್ನೇಹಿತ ಅಮೇರಿಕದಲ್ಲಿ, ಮತ್ತೊಬ್ಬ ಜಪಾನ್‌ನಲ್ಲಿ ಕುಳಿತುಕೊಂಡು ಅಂತರಜಾಲವನ್ನು ಬಳಸಿ
ವಿಚಾರಗೋಷ್ಠಿ ಮಾಡುವ ಸವಲತ್ತುಗಳು ಹಲವಾರಿವೆ. ಹೆಚ್ಚಿನವು ಪಠ್ಯದ ಮೂಲಕ ಅಥವಾ
ಮಾತನಾಡುವ ಮೂಲಕ, ಇನ್ನೂ ಕೆಲವು ಕ್ಯಾಮರಾ ಬಳಸಿ ವೀಡಿಯೋ ಚಾಟ್ ಮಾಡುವ ಸವಲತ್ತುಗಳನ್ನು
ನೀಡುತ್ತವೆ. ನೀವು ಯಾವುದೋ ವಿಷಯದ ಬಗ್ಗೆ ಚರ್ಚಿಸುವಾಗ ಚಿತ್ರಗಳ ಮೂಲಕ, ಗೆರೆಗಳ ಮೂಲಕ
ಒಬ್ಬರಿಗೊಬ್ಬರಿಗೆ ವಿವರಿಸಬೇಕಾದಾಗ ಏನು ಮಾಡುತ್ತೀರಿ? ಆಗ ನಿಮ್ಮ ಸಹಾಯಕ್ಕೆ ಬರುವುದು
ಅಂತರಜಾಲ ಮೂಲಕ ಸಹಯೋಗಿ ಬಳಕೆ ಮಾಡಬಹುದಾದ ಬಿಳಿಹಲಗೆ. ಅಂತಹ ಒಂದು ಉಚಿತ ಸೌಲಭ್ಯ
ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.dabbleboard.com. ಇದರಲ್ಲಿ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳಿವೆ.
No comments:
Post a Comment