ನಿಮಗೆ ಸಂಗೀತ,ನಾಟಕ,ಸಿನೆಮಾ ಇವೆಲ್ಲಾ ಇಷ್ಟ ! ಅದರಲ್ಲಿ ಭಾಗವಹಿಸುವ ಆಸೆಯೂ ಇದೆ.ಆದರೆ ನಿಮ್ಮ ಬ್ಯೂಸಿ ಷೆಡ್ಯೂಲ್ ನಲ್ಲಿ ಸ್ವತಃ ಹೋಗಿ ಅವುಗಳ ಟಿಕೇಟ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಥವಾ ಅಲ್ಲಿಗೆ ಹೋಗುವ ಹೊತ್ತಿಗೆ ಟಿಕೇಟ್ ಸಿಗಲ್ಲ ಎಂಬ ಕೊರಗಿದೆಯೇ? ಹಾಗಿದ್ದರೆ "ಇಂಡಿಯಾಸ್ಟೇಜ್.ಇನ್" ಎಂಬ ಈ ಜಾಲತಾಣಕ್ಕೆ ಭೇಟಿನೀಡಿ. ಜಾಲತಾಣದ ಮೂಲಕ ನೀವು ಟಿಕೇಟ್ ಖರೀದಿಸಬಹುದು. ಹಾಗೇಯೇ ಸಾಂಸ್ಕೃತಿಕ ಕಾರ್ಯಕ್ರಮ ನೀಡುವವರು, ಪ್ರಾಯೋಜಕರೂ ತಮ್ಮ ಕಾರ್ಯಕ್ರಮಗಳ ಮಾಹಿತಿಯನ್ನು ಈ ಜಾಲತಾಣದಲ್ಲಿ ಪ್ರಕಟಿಸಬಹುದು. ಸದ್ಯ ಈ ಜಾಲತಾಣ ಬೆಂಗಳೂರು ಸೇರಿದಂತೆ 10 ಮುಖ್ಯ ನಗರಗಳಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿಯನ್ನು ಮಾತ್ರ ನೀಡುತ್ತದೆ. ಹೆಚ್ಚಿನ ವಿವರಗಳಿಗಾಗಿ ಜಾಲತಾಣ ವಿಳಾಸ ಕೊಂಡಿ:http://www.indianstage.in
No comments:
Post a Comment