ನಿಮ್ಮ ಬೆರಳತುದಿಯಲ್ಲಿ ವಿಶ್ವದ ಭೌಗೋಳಿಕ ಮಾಹಿತಿ ಪಡೆಯಿರಿ.
ನಿಮ್ಮ ಮೊಬೈಲ್ ನಲ್ಲಿ ಸಹ ಅನ್ವೇಷಿಸಿ. ಗೂಗಲ್ ಅರ್ಥ್ ಅಪ್ಲಿಕೇಷನ್ ಈಗ ಆಂಡ್ರಾಯ್ಡ್, ಐಫೋನ್ ಮತ್ತು ಐಪಾಡ್ ಗಳಲ್ಲಿ ಡೌನ್ಲೋಡ್ ಮಾಡಿ ಆನಂದಿಸಿ.
ಆಂಡ್ರಾಯ್ಡ್ ಅಪ್ಲಿಕೇಷನ್ ಗಾಗಿ : https://play.google.com/store/apps/
ಐಪೋನ್/ಐಪಾಡ್ ಅಪ್ಲಿಕೇಷನ್ ಗಾಗಿ :http://itunes.apple.com/us/app/
ಗಣಕಯಂತ್ರದ ತಂತ್ರಾಂಶಕ್ಕಾಗಿ : http://www.google.com/earth
ಗೂಗಲ್ ಅರ್ಥ್ ಪ್ರೊ ಒಂದು ಮುಕ್ತ 7 ದಿನದ ಪ್ರಯೋಗಿಕ ಡೌನ್ಲೋಡ್ ಗಾಗಿ.
ಗೂಗಲ್ ಅರ್ಥ್ ವಾಸ್ತವಿಕ ಗೋಳದ, ನಕಾಶೆ ಮತ್ತು ಭೌಗೋಳಿಕ ಮಾಹಿತಿಯನ್ನು ನೀಡುವ ಒಂದು ಕಾರ್ಯಕ್ರಮವಾಗಿದ್ದು, ಪ್ರಾರಂಭದಲ್ಲಿ ಇದನ್ನು ಅರ್ಥ್ ವೀವರ್ ಎಂದು ಕರೆಯಲಾಗುತ್ತಿತ್ತು. Keyhole, Inc ಎಂಬ ಕಂಪನಿಯು ಇದನ್ನು ರಚಿಸಿದ್ದು, ಈ ಕಂಪನಿಯನ್ನು ೨೦೦೪ ರಲ್ಲಿ Google ತನ್ನ ಸುಪರ್ದಿಗೆ ತೆಗೆದುಕೊಂಡಿತು. ಇದು ಕೃತಕ ಉಪಗ್ರಹ ಚಿತ್ರಣ, ಬಾನಿನಿಂದ ಛಾಯಾಚಿತ್ರಗೃಹಣ ಮತ್ತು GIS 3Dಗೋಳ ಮುಂತಾದವುಗಳ ಮೂಲಕ ಪಡೆದುಕೊಂಡ ಚಿತ್ರಗಳನ್ನು ಅಧ್ಯಾರೋಪಿಸುವ ಮೂಲಕ ಭೂಮಿಯ
ನಕಾಶೆಯನ್ನು ರಚಿಸುತ್ತದೆ. ಇದು ಮೂರು ವಿಭಿನ್ನ ಪರವಾನಿಗೆಗಳ ಮೂಲಕ ಲಭ್ಯವಿದೆ: ಸೀಮಿತ
ಕಾರ್ಯಸಾಮರ್ಥ್ಯವಿರುವ ಗೂಗಲ್ ಅರ್ಥ್ನ ಉಚಿತ ಆವೃತ್ತಿ, ಹೆಚ್ಚಿನ ವೈಶಿಷ್ಟ್ಯಗಳಿರುವ
ಗೂಗಲ್ ಅರ್ಥ್ ಪ್ಲಸ್ (ನಿಲ್ಲಿಸಲಾಗಿದೆ), ಮತ್ತು ವಾಣಿಜ್ಯಿಕ ಉಪಯೋಗಗಳಿಗಾಗಿ ರಚಿಸಲಾದ ಗೂಗಲ್ ಅರ್ಥ್ ಪ್ರೋ ಸುಮಾರು (ಪ್ರತಿವರ್ಷಕ್ಕೆ $೪೯೫)
ಗೂಗಲ್ ಅರ್ಥ್ ಎಂಬ ಹೆಸರಿನಲ್ಲಿ ೨೦೦೫ ರಲ್ಲಿ ಮರು-ಬಿಡುಗಡೆಗೊಂಡ ಈ ಉತ್ಪನ್ನವು ಪ್ರಸ್ತುತವಾಗಿ ಪರ್ಸನಲ್ ಕಂಪ್ಯೂಟರ್ ಗಳಲ್ಲಿ ಲಭ್ಯವಿದ್ದು, Windows 2000 ಮತ್ತು ನಂತರದ ಆವೃತ್ತಿಗಳಲ್ಲಿ, Mac OS X ೧೦.೩.೯ ಮತ್ತು ನಂತರದ ಆವೃತ್ತಿಗಳಲ್ಲಿ, Linux Kernel: ೨.೪ ಅಥವಾ ನಂತರದ ಆವೃತ್ತಿಗಳಲ್ಲಿ (ಜೂನ್ ೧೨, ೨೦೦೬ ರಂದು ಬಿಡುಗಡೆಯಾದ), ಮತ್ತು FreeBSD
ಗಳನ್ನು ಚಲಿಸುವ ಮೂಲಕ ಬಳಸಬಹುದಾಗಿದೆ. ಗೂಗಲ್ ಅರ್ಥ್ ಅನ್ನು ಬ್ರೌಸರ್ ಪ್ಲಗ್ಇನ್
ಆಗಿ ಸಹಾ ಬಳಸಬಹುದಾಗಿದ್ದು, ಅದು ಮೇ ೨೮, ೨೦೦೮ ರಂದು ಬಿಡುಗಡೆಯಾಗಿದೆ. ಇದನ್ನು ಅಕ್ಟೋಬರ್ 27 2008 ರಿಂದ iPhone OS ನಲ್ಲಿ ಸಹಾ ಲಭ್ಯಗೊಳಿಸಲಾಗಿದ್ದು, ಉಚಿತ ಡೌನ್ಲೋಡ್ ಆಗಿ App Store
ನ ಮೂಲಕ ಪಡೆಯಬಹುದಾಗಿದೆ. ಒಂದು ಕಿಹೋಲ್ ಆಧಾರಿತ ಕ್ಲೈಂಟ್ ಅನ್ನು ಬಿಡುಗಡೆ
ಮಾಡುವುದರ ಜೊತೆಗೆ Google ಕಂಪನಿಯು ತನ್ನ ವೆಬ್ ಆಧಾರಿತ ಮ್ಯಾಪಿಂಗ್ ತಂತ್ರಾಂಶಕ್ಕೆ
ಅರ್ಥ್ ದತ್ತಸಂಚಯದಿಂದ ಚಿತ್ರಗಳನ್ನು ಸೇರಿಸಿತು. ಜೂನ್ ೨೦೦೫ ರಲ್ಲಿ ಗೂಗಲ್ ಅರ್ಥ್
ಸಾರ್ವಜನಿಕರಿಗಾಗಿ ಬಿಡುಗಡೆಯಾದದ್ದು, ೨೦೦೫ ಮತ್ತು ೨೦೦೬ ರ ಮಧ್ಯದಲ್ಲಿ ಆವರೆಗಿನ ವಾಸ್ತವಿಕ ಗೋಳಗಳ ಕುರಿತ ಮಾಧ್ಯಮ ವರದಿಗಳ ವ್ಯಾಪ್ತಿ ಹತ್ತರಷ್ಟಕ್ಕಿಂತ ಹೆಚ್ಚಾಯಿತು. ಮತ್ತು ಇದರಿಂದಾಗಿ ಸಾರ್ವಜನಿಕರ ಭೂವ್ಯೋಮ ತಂತ್ರಜ್ಞಾನಗಳು ಮತ್ತು ಅದರ ಬಳಕೆಗಳ ಕುರಿತ ಆಸಕ್ತಿಯನ್ನು ವಿಶೇಷವಾಗಿ ಹೆಚ್ಚಿಸಿತು.
ವೈಶಿಷ್ಟ್ಯಗಳು
ವಿಕಿಪೀಡಿಯ ಮತ್ತು ಪನೋರಾಮಿಯೋ ಗಳ ಸಮನ್ವಯ, ಫ್ಲೈಟ್ ಸಿಮ್ಯುಲೇಟರ್, ವಿಶಿಷ್ಟ ವಿಮಾನಗಳು, ಸ್ಕೈ ಮೋಡ್, ಸ್ಟ್ರೀಟ್ ವ್ಯೂ, ಓಶಿಯನ್, ಐತಿಹಾಸಿಕ ಚಿತ್ರಣ, ಮಾರ್ಸ್,ಮೂನ್ ಇತ್ಯಾದಿಗಳು.
ಗೂಗಲ್
ಅರ್ಥ್ ನಲ್ಲಿ ನೀವು ಉಪಗ್ರಹ, ನಕ್ಷೆಗಳು, ಭೂಪ್ರದೇಶ, 3D ಕಟ್ಟಡಗಳು, ಸಾಗರ ಮತ್ತು
ಬಾಹ್ಯಾಕಾಶದಲ್ಲಿ ಸಹ ಗೆಲಕ್ಸಿಗಳನ್ನು ವೀಕ್ಷಿಸಲು ಅನುಮತಿಸುತ್ತದೆ. ಭೌಗೋಳಿಕ ವಿಷಯ ಅನ್ವೇಷಿಸಿ, ಇತರರೊಂದಿಗೆ ನಿಮ್ಮ ಪ್ರವಾಸ ಸ್ಥಳಗಳು ಉಳಿಸಲು, ಮತ್ತು ಹಂಚಿಕೊಳ್ಳಬಹುದು. ವಿವರಗಳಿಗಾಗಿ ನೋಡಿ :http://kn.wikipedia.org/wiki/ಗೂಗಲ್ ಅರ್ಥ್
No comments:
Post a Comment