ಗೂಗಲ್ ಕಂಪನಿ‘ಗೂಗಲ್ ಗ್ಲಾಸ್’ಎಂಬ ಕಣ್ಣಿಗೆ
ಧರಿಸುವ ಕಂಪ್ಯೂಟರ್ ಅನ್ನು ಬಿಡುಗಡೆ ಮಾಡಿದೆ.
ನಡೆದುಕೊಂಡು ಹೋಗುತ್ತಿರುವಾಗಲೇ
ಪ್ರಿಯತಮೆ ಬಳಿ ವಿಡಿಯೋ ಕಾಲ್, ಅಗತ್ಯ ಇ-ಮೇಲ್‌ಗಳಿಗೆ ಉತ್ತರರಿಸಬಹುದು. ಆದರೆ ಇದು
ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ.
ಗೂಗಲ್ ಕಂಪನಿ ಹೊಸ ಉತ್ಪನ್ನದ ವಿಡಿಯೋ ಬಿಡುಗಡೆ ಮಾಡಿದೆ. ಹೊಸ ಉತ್ಪನ್ನದ ಬಗೆಗಿನ ಮಾಹಿತಿಯಿಂದ ವಿಶ್ವವೇ ಕುತೂಹಲಕ್ಕೆ ಒಳಗಾಗಿದೆ.
ನೀವು ಯಾವ ಸ್ಥಳಕ್ಕೆ ಹೋಗಲು ಬಯಸುವ ಸ್ಥಳದ
ಮಾಹಿತಿ, ಉಷ್ಣತೆ ಸೇರಿದಂತೆ ಎಲ್ಲ ವಿಚಾರಗಳನ್ನು ಗೂಗಲ್ ಗ್ಲಾಸ್ ಮೂಲಕ ಪಡೆಯಬಹುದು.
ಕಣ್ಣಿನ ಮೇಲ್ಭಾಗದಲ್ಲೇ ಇರುವ ಫ್ರೇಮಿನಲ್ಲಿರುವ ಸ್ಕ್ರೀನ್ ಮೂಲಕ ಇ ಮೇಲ್
ವೀಕ್ಷಣೆ, ಹಾಡುಗಳನ್ನು ಕೇಳಲು ಅವಕಾಶವಿದೆ. ಆದರೆ ಇದು ಯಾವುದಕ್ಕೂ ಬೆರಳನ್ನು
ಉಪಯೋಗಿಸುವ ಅಗತ್ಯವೇ ಇಲ್ಲ. ಕೇವಲ ಧ್ವನಿಯ ನೆರವಿನಿಂದ ಮತ್ತು ತಲೆಯನ್ನು ಅಲ್ಲಾಡಿಸುವ
ಮೂಲಕ ‘ಗೂಗಲ್ ಗ್ಲಾಸ್’ಅನ್ನು ನಿಯಂತ್ರಿಸ ಬಹುದು.
ಅಂದ ಹಾಗೆ ‘ಗೂಗಲ್ ಗ್ಲಾಸ್’ನಿಯಂತ್ರಣಕ್ಕೆ
Apple ಕಂಪನಿಯ ಐಪಾಡ್, ಐಫೋನ್ ಇರಬೇಕು. ಇಂಗ್ಲಿಷನಲ್ಲಿ ‘ವೇರಬಲ್ ಕಂಪ್ಯೂಟಿಂಗ್’ ಎಂದು ಈ
ವ್ಯವಸ್ಥೆಯನ್ನು ಕರೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೊಂಡಿ...
http://news.cnet.com/8301-17852_3-57410789-71/googles-augmented-reality-glasses-is-it-all-pr/
No comments:
Post a Comment