ಆನ್‌ಲೈನ್ ಮೌಲ್ಯಮಾಪನದ ನಂತರ, ಇದೀಗ ಪ್ರಶ್ನೆಪತ್ರಿಕೆಗಳ ಬಟವಾಡೆಗೆ ಅಂತರ್ಜಾಲದ ಬಳಕೆ
ಮಾಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸುದ್ದಿಯಲ್ಲಿದೆ. ಬೆಳಗಾವಿ
ವಿಭಾಗದಲ್ಲಿ ಆನ್‌ಲೈನ್ ಪ್ರಶ್ನೆಪತ್ರಿಕೆ ರವಾನೆ ವ್ಯವಸ್ಥೆಯನ್ನು ಸಫಲವಾಗಿ
ಬಳಸಿ,ಇನ್ನಿದನ್ನು ರಾಜ್ಯದಲ್ಲೆಡೆ ಬಳಕೆ ಮಾಡಲು ವಿಶ್ವವಿದ್ಯಾಲಯ
ಉದ್ದೇಶಿಸಿದೆ.ಕಾಲೇಜುಗಳಿಗೆ ಪರೀಕ್ಷೆ ನಡೆವ ದಿನವೇ ಪ್ರಶ್ನೆಪತ್ರಿಕೆಯ ಇ-ಪ್ರತಿ
ಕಳುಹಿಸಿ,ಪರೀಕ್ಷಾ ಕೇಂದ್ರಗಳಲ್ಲಿ ಅವನ್ನು ಮುದ್ರಿಸಿ, ಪರೀಕ್ಷೆ ನಡೆಸುವುದೇ ಈ
ವ್ಯವಸ್ಥೆ.ಮಾಮೂಲು ಮಿಂಚಂಚೆ ಸೇವೆಯನ್ನು ಈ ವ್ಯವಸ್ಥೆ ಬಳಸುತ್ತಿಲ್ಲ. ಅಂತರ್ಜಾಲದಲ್ಲಿ
ಖಾಸಗಿ ಜಾಲವನ್ನು ಏರ್ಪಡಿಸಿ, ತಂತ್ರಾಂಶವೊಂದನ್ನು ಬಳಸಿ ಇದನ್ನು
ಕಾರ್ಯಗತಗೊಳಿಸಲಾಗಿದೆ. ಪ್ರಶ್ನೆಪತ್ರಿಕೆ ಮಾಹಿತಿ ಸೋರಿಕೆ ತಡೆಗೆ ಗೂಢಲಿಪಿಯನ್ನು
ಆಧರಿಸಿದ ಭದ್ರತಾ ವ್ಯವಸ್ಥೆಯಿದೆ. http://www.vtu.ac.in/
No comments:
Post a Comment