ಅಂತರಜಾಲದಲ್ಲಿ ಪುಸ್ತಕಗಳ ಅಂಗಡಿಗಳು ಇರುವುದು ತಿಳಿದೇ ಇರಬಹುದು. ಅಂತೆಯೇ ಗ್ರಂಥಾಲಯಗಳೂ ಇವೆ. ಅಂತಹ ಒಂದು ಮುಕ್ತ ಗ್ರಂಥಾಲಯ
openlibrary.org. ಇದರ ವೈಶಿಷ್ಟ್ಯವೇನೆಂದರೆ ಇದಕ್ಕೆ ನಾವು ನೀವು ಎಲ್ಲರೂ ಪುಸ್ತಕ ಅಥವಾ ಪುಸ್ತಕದ ಸೂಚಿ ಹಾಗೂ ಕೊಂಡಿ ಸೇರಿಸಬಹುದು. ಇದರಲ್ಲಿ ಲಕ್ಷಕ್ಕಿಂತಲೂ ಅಧಿಕ ವಿದ್ಯುನ್ಮಾನ ಪುಸ್ತಕಗಳಿವೆ. ಮೊದಲೇ ತಿಳಿಸಿದಂತೆ ಇದು ಗ್ರಂಥಾಲಯ. ಅಂದರೆ ಪುಸ್ತಕವನ್ನು ನೀವು ಓದಿ ಹಿಂತಿರುಗಿಸಬೇಕು. ಅಂತರಜಾಲದ ಮೂಲಕ ದೊರಕುವ ವಿ-ಪುಸ್ತಕಗಳನ್ನು ಓದಿ ಹಿಂತಿರುಗಿಸುವುದು ಎಂದರೆ ಹೇಗೆ ಎಂಬ ಅನುಮಾನವೇ? ಅದಕ್ಕೆ ಹಲವು ವಿಧಾನಗಳಿವೆ. ಒಂದು ಅತಿ ಸರಳ ವಿಧಾನವೆಂದರೆ ಜಾಲತಾಣದಲ್ಲೇ ಓದುವುದು. ಭೌತಿಕ ಪುಸ್ತಕದ ಪುಟ ಮಗುಚಿದಂತೆ ಜಾಲತಾಣದಲ್ಲೂ ಪುಟ ಮಗುಚಿದ ಅನುಭವ ಮೂಡುವಂತೆ ಮಾಡುವ ತಂತ್ರಾಂಶದ ಬಳಕೆ ಇಲ್ಲಿ ಆಗಿದೆ. ಇತರೆ ವಿಧಾನಗಳೂ ಇವೆ. ಈ ಜಾಲತಾಣವಲ್ಲದೆ ಇತರೆ ಜಾಲತಾಣಗಳಲ್ಲಿ ದೊರೆಯುವ ಪುಸ್ತಕಗಳಿಗೆ ಕೊಂಡಿಯೂ ಇಲ್ಲಿದೆ.
No comments:
Post a Comment