ಕನ್ನಡ ಈಗ ಬರೀ ರಾಜ್ಯದ ಸ್ಥಳೀಯ ಭಾಷೆಯಾಗಿ ಉಳಿದಿಲ್ಲ. ದೇಶದ ಇತರ ಪ್ರಾದೇಶಿಕ ಭಾಷೆಗಳ ಜೊತೆಯಲ್ಲಿ ಸರಿಯಾದ ಪೈಪೋಟಿ ನೀಡುವಂತಹ ಭಾಷೆಯಾಗಿ ಬೆಳೆದು ನಿಂತಿದೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಅಂತರಾಳದ ಮಾತು.
ಕನ್ನಡೇತರರು ಸುಲಭವಾಗಿ ಕನ್ನಡ ಮಾತನಾಡಲು ಸಹಾಯಕವಾಗುವಂತಹ ವೆಬ್‌ಸೈಟ್‌ನ್ನು ಡ್ರೀಮ್ಸ್ ಇನ್ಫರಾ ಸಂಸ್ಥೆ ಆರಂಭಿಸಿದೆ. ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಂ,
ಹಿಂದಿ ಭಾಷೆಗಳ ಮುಖಾಂತರ ಮಾತಾಡಿ ಡಾಟ್ ಕಾಮ್ ಅಂತರ್ಜಾಲದಲ್ಲಿ ಸರಳವಾಗಿ ವಿಡಿಯೋ ಮುಖಾಂತರ ಕನ್ನಡ ಕಲಿಯಬಹುದಾಗಿದೆ. ಸದ್ಯಕ್ಕೆ ಹದಿನಾರು ವಿಡಿಯೋ ತುಣುಕುಗಳು ಜಾಲತಾಣದಲ್ಲಿ ಲಭ್ಯವಿದೆ. ಜಾಲತಾಣ ಕೊಂಡಿ: www.mathadi.com

No comments:
Post a Comment