ಚುಕುಬುಕು ಒಂದು ಓದಿನ ಬಂಡಿ! ಇದು ರೈಲೂ ಹೌದು, ಪ್ಲಾಟ್‌ಫಾರ್ಮೂ ಹೌದು. ಕನ್ನಡದ
ಪುಸ್ತಕಪ್ರೇಮಿಗಳನ್ನೆಲ್ಲ ಒಂದೆಡೆ ಸೇರಿಸುವ ಚಂದದ ವೇದಿಕೆ ಅನ್ನಿ. ಒಂದು ಅಂದಾಜಿನ
ಪ್ರಕಾರ ಪ್ರತಿವರ್ಷ ಮುದ್ರಣವಾಗುವ ಓದಲು ಯೋಗ್ಯವಾದ ಹೊಸ ಕನ್ನಡಪುಸ್ತಕಗಳ ಸಂಖ್ಯೆ ಏಳು
ಸಾವಿರ. ಆದರೆ ಭಾನುವಾರದ ಪುರವಣಿಗಳ ಪುಸ್ತಕಪರಿಚಯ ವಿಭಾಗದಲ್ಲಿ ಚೂರು ಜಾಗ ಪಡೆಯುವ
ಅದೃಷ್ಟ ಏಳೆಂಟು ಪುಸ್ತಕಗಳಿಗೆ ಮಾತ್ರ. ಅಂದರೆ ಶೇಕಡಾ ೮೫ರಷ್ಟು ಪುಸ್ತಕಗಳು ಬಂದದ್ದು
ಓದುಗನಿಗೆ ತಿಳಿಯುವುದೇ ಇಲ್ಲ. ಅಂಗಡಿಗೆ ಹೋಗಿ ನೋಡೋಣವೆಂದರೆ ಇಡೀ ರಾಜ್ಯದಲ್ಲಿರುವುದು
ಹತ್ತು - ಹನ್ನೆರೆಡು ಪುಸ್ತಕದಂಗಡಿಗಳು ಮಾತ್ರ. ಓದುಗ ಮತ್ತು ಪ್ರಕಾಶಕನ ನಡುವಿನ
ಬಹುಮುಖ್ಯ ಕೊಂಡಿಯೊಂದು ತಪ್ಪಿಹೋಗಿದೆ ಎಂದು ನಿಮಗನ್ನಿಸುವುದಿಲ್ಲವೆ? ಅದಕ್ಕೇ ಚುಕ್ಕುಬುಕ್ಕು ಎಂಬ ಲಿಂಕ್ ಟ್ರೈನು ಬಂದಿರುವುದು

ಇಷ್ಟದ ಲೇಖಕನ ಹೊಸ ಪುಸ್ತಕ ಬಂತೆ? ಹೊಸ ಲೇಖಕರು ಯಾರಾದರೂ ಚೆನ್ನಾಗಿ
ಬರೆಯುತ್ತಿದ್ದಾರಾ? ಒಂದು ಕತೆ ಅಥವಾ ಒಂದು ಅಧ್ಯಾಯ ಓದಿ ಇಷ್ಟವಾದರೆ ಮಾತ್ರ
ಕೊಂಡುಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು? ಓದುವ ಹಸಿವಿನ ನಿಮ್ಮ
ಆತಂಕಗಳಿಗೆಲ್ಲ ಸಮಾಧಾನ ನೀಡುವಂತಿದೆ ನಮ್ಮ ಚುಕ್ಕುಬುಕ್ಕು. ಇಲ್ಲಿ ನೀವು ಹೊಸದಾಗಿ
ಪ್ರಕಾಶನಗೊಂಡ ಪುಸ್ತಕದ ಬೆಲೆ ಪುಟಸಂಖ್ಯೆ ಮಾತ್ರವಲ್ಲ, ಪುಸ್ತಕದ ಸಾರಾಂಶ, ಲೇಖಕರ
ಪರಿಚಯ, ಪುಸ್ತಕದ ಬಗ್ಗೆ ಅವರ ಮಾತು, ಮುನ್ನುಡಿ-ಬೆನ್ನುಡಿಕಾರರ ಅನಿಸಿಕೆಗಳನ್ನೆಲ್ಲಾ
ಓದಬಹುದು. ಅಷ್ಟೇ ಅಲ್ಲ, ಪುಸ್ತಕದ ಒಂದು ಅಧ್ಯಾಯವನ್ನು ಕೂಡ ಉಚಿತವಾಗಿ ಓದಬಹುದು ಅಂದರೆ
ಖುಷಿಯಾಯಿತಲ್ಲವೆ?! ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ಇಷ್ಟವಾದ
ಪುಸ್ತಕಗಳನ್ನು ಕೊಳ್ಳಲು ಪ್ರಕಾಶಕರ ವಿಳಾಸ, ದೂರವಾಣಿ ಸಂಖ್ಯೆಗಳೂ ಇಲ್ಲಿ ಲಭ್ಯ.
ಇನ್ನೇನು ತಾನೆ ಬೇಕು?

ಅಷ್ಟೆಲ್ಲಾ ಶ್ರದ್ಧೆಯಿಂದ ಮುದ್ರಿಸಿದ ಪುಸ್ತಕ ಬಂದಿದೆ ಎಂದು ಓದುಗರಿಗೆ ತಿಳಿಯದೇ
ಹೋಗುವ ಪ್ರಕಾಶಕನ ಸಂಕಟ ನಮಗೆ ಅರ್ಥವಾಗುತ್ತದೆ. ಸಾಪ್ತಾಹಿಕ ಪುರವಣಿಗಳಲ್ಲಿ ವಿಮರ್ಶೆಯ
ಮಾತಿರಲಿ, ಸಾದರ ಸ್ವೀಕಾರದಲ್ಲಾದರೂ ಬಂದರೆ ಅದೇ ಭಾಗ್ಯವೆಂದು ಹಪಹಪಿಸುವ ಬದಲು
ಚುಕ್ಕುಬುಕ್ಕು ಎಂಬ ಈ ವೇದಿಕೆಯನ್ನು ಬಳಸಿಕೊಂಡು ಹಬ್ಬ ಮಾಡಿ. ಹೌದು! ನಮ್ಮ
ವೆಬ್‌ಸೈಟಿನಲ್ಲಿ ನಿಮ್ಮ ಪುಸ್ತಕದ ಬಗ್ಗೆ ನಾಲ್ಕು ಸಾಲು ಬರೆಯುವ ಬಗ್ಗೆ ನಾವು
ಮಾತನಾಡುತ್ತಿಲ್ಲ. ನಿಮ್ಮ ಪುಸ್ತಕಕ್ಕೇ ಒಂದು ಚೆಂದದ ಕಿರುವೆಬ್‌ಸೈಟಿನ ಬಗ್ಗೆ ನಾವು
ಮಾತನಾಡುತ್ತಿದ್ದೇವೆ. ನಾಲಕ್ಕು ಪೂರ್ಣ ವೆಬ್‌ಪುಟಗಳು ನಿಮ್ಮ ಕನಸಿನ ಪುಸ್ತಕಕ್ಕೆಂದೇ
ಮೀಸಲು! ದೊಡ್ಡ ಮುಖಪುಟ, ಲೇಖಕನ ಪರಿಚಯ, ಸಾರಾಂಶ, ಉಚಿತಪುಟ, ವಿಮರ್ಶೆಗಳು, ಓದುಗರ
ಅನಿಸಿಕೆಗಳು. ಒಂದು ಪುಸ್ತಕವನ್ನು ಸೆಲೆಬ್ರೇಟ್ ಮಾಡುವ ಇದಕ್ಕಿಂತ ಉತ್ತಮ ವಿಧಾನ
ಬೇರೊಂದಿಲ್ಲ. ನೀವೇ ನೋಡಿ. ಚುಕ್ಕುಬುಕ್ಕು ಸಾಧ್ಯತೆಗಳನ್ನು ಬಳಸಿಕೊಳ್ಳಿ. ಸರಿಯಾದ
ಓದುಗರನ್ನು ತಲುಪಿ.
- ಪುಸ್ತಕಗಳಲ್ಲದೆ ಚುಕ್ಕುಬುಕ್ಕುವಿನಲ್ಲಿ ಮತ್ತೇನಿದೆ?
ಚುಕ್ಕುಬುಕ್ಕುವನ್ನು ಒಂದು ಲವಲವಿಕೆಯ ಓದುಗರ
ಕೂಡುಸ್ಥಳವನ್ನಾಗಿಸಬೇಕೆಂಬುದು ನಮ್ಮ ಆಶಯ. ಇಲ್ಲಿ ಸದಾ ಯಾವುದಾದರೊಂದು ಸ್ಪರ್ಧೆ,
ಚರ್ಚೆಗಳು ನಡೆಯುತ್ತಿರುತ್ತವೆ. ನೀವು ಪಾಲ್ಗೊಳ್ಳಬಹುದು. ಬಹುಮಾನಗಳನ್ನು ಗೆಲ್ಲಬಹುದು.
ಈ ತಾಣ ಏನಾಗಿ ರೂಪುಗೊಳ್ಳಬೇಕೆಂಬುದು ನಿಮ್ಮ ಪಾಲ್ಗೊಳ್ಳುವಿಕೆಯ ಮೇಲೆಯೂ
ಅವಲಂಬಿತವಾಗಿದೆ. ಮತ್ತೆ ಮತ್ತೆ ಭೇಟಿಕೊಡಿ. ನಿಮ್ಮ ತಾಣವನ್ನಾಗಿ ಇದನ್ನು ರೂಪಿಸಿ.
ಚುಕ್ಕುಬುಕ್ಕು ಜಾಲತಾಣ ಕೊಂಡಿ:
http://chukkubukku.com