ಮೈಕ್ರೋಸಾಫ್ಟ್ ಕಂಪೆನಿಯು ಹಾಟ್‌ಮೇಲ್ ಎನ್ನುವ ಮಿಂಚಂಚೆ ಸೇವೆಯನ್ನು ಜನರಿಗೆ
ಒದಗಿಸುತ್ತಿತ್ತು. ಈಗ ಅದು ಔಟ್‌ಲುಕ್ ಎಂಬ ಹೊಸ ಹೆಸರನ್ನು ಬಳಸಿ ಹೊಸ ಗಿರಾಕಿಗಳ
ಮನಗೆಲ್ಲಲು ಪ್ರಯತ್ನಿಸಲಿದೆ. ಜಿಮೇಲ್ ಅಂತಹ ಗೂಗಲ್ ಮಿಂಚಂಚೆಯ ಜನಪ್ರಿಯತೆಗೆ ಕಡಿವಾಣ
ಹಾಕಲು ಔಟ್‌ಲುಕ್‌ಗೆ ಸಾಧ್ಯವಾಗಬಹುದೇ ಎನ್ನುವುದು ಕುತೂಹಲದ ವಿಷಯವಾಗಿದೆ.ಮೊದಲ
ಗಂಟೆಯಲ್ಲಿಯೇ ಸುಮಾರು ದಶಲಕ್ಷ ಜನ ಔಟ್‌ಲುಕ್ ಸೇವೆಗೆ ನೋಂದಾಯಿಸಿಕೊಂಡು, ಬೆನ್ನು
ತಟ್ಟಿರುವುದು ವಿಶೇಷವಾಗಿದೆ. ಕಂಪೆನಿಯ ಸಿಇಓ ಆದ ಬಾಮರ್ ಅವರ ಹೆಸರಿನ ಮಿಂಚಂಚೆಯನ್ನು
ಯಾರೋ ಈಗಾಗಲೇ ನೋಂದಾಯಿಸಿಕೊಂಡಿರುವ ಘಟನೆಯೂ ಕುತೂಹಲ ಮೂಡಿಸಿದೆ. ನಿವು ಇನ್ನೂ ಔಟ್ ಲುಕ್ ಮಿಂಚಂಚೆ ಖಾತೆ ಹೊಂದಿಲ್ಲವಾದರೆ? ನೊಂದಾಯಿಸಿಕೊಳ್ಳಲು ಜಾಲತಾಣ ವಿಳಾಸ ಕೊಂಡಿ: http://goo.gl/cMUK7

No comments:
Post a Comment