ನಿಮಗಿಷ್ಟವಾದ ಜಾಲತಾಣವೊಂದಿದೆ. ಅದರಲ್ಲಿ ನೂರಾರು ಲೇಖನಗಳಿವೆ. ಆ ಲೇಖನಗಳನ್ನು ಮತ್ತೆ
ಮತ್ತೆ ಓದಬೇಕಾಗಿದೆ. ಅಂದರೆ ನೀವು ಯಾವಾಗಲೂ ಅಂತರಜಾಲದ ಸಂಪರ್ಕದಲ್ಲಿ ಇರಬೇಕು
ಎಂದಾಯಿತು. ಆ ಸೌಕರ್ಯ ನಿಮಗಿಲ್ಲವಾದಲ್ಲಿ ಎನು ಮಾಡಬಹುದು? ಇಡಿಯ ಜಾಲತಾಣವನ್ನೇ ನಿಮ್ಮ
ಗಣಕಕ್ಕೆ ಪ್ರತಿ ಮಾಡಿಕೊಳ್ಳುವಂತಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು
ಯೋಚಿಸುತ್ತಿದ್ದೀರಾ? ಅದಕ್ಕೂ ತಂತ್ರಾಂಶ ಲಭ್ಯವಿದೆ. HTTrack ಹೆಸರಿನ ಈ ತಂತ್ರಾಂಶ
ಬೇಕಿದ್ದಲ್ಲಿ httrack.com ಜಾಲತಾಣಕ್ಕೆ
ಭೇಟಿ ನೀಡಿ. ಜಾಲತಾಣವೊಂದನ್ನು ಪ್ರತಿ ಮಾಡಲು ಇದರಲ್ಲಿ ಹಲವು ಸವಲತ್ತುಗಳಿವೆ. ಈ
ಜಾಲತಾಣವನ್ನು ಬಿಟ್ಟು ಹೊರಗೆ ಹೋಗಬೇಡ, ಈ ಪುಟದಿಂದ ಇಂತಿಷ್ಟೇ ಕೊಂಡಿಗಳಷ್ಟು ಕೆಳಕ್ಕೆ
ಇಳಿ, ಇತ್ಯಾದಿ. ಈ ಆಯ್ಕೆಗಳನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕು. ಇಲ್ಲವಾದಲ್ಲಿ ಅದು
ಇಡಿಯ ಅಂತರಜಾಲವನ್ನೇ ನಿಮ್ಮ ಗಣಕಕ್ಕೆ ಪ್ರತಿಮಾಡಿಬಿಟ್ಟೀತು!
No comments:
Post a Comment