ಭಾಷಣ ಮಾಡುವಾಗ, ತರಗತಿಯಲ್ಲಿ ಪಾಠ ಮಾಡುವಾಗ, ಲೇಖನ ಬರೆಯುವಾಗ ಆಗಾಗ ಅಲ್ಲಲ್ಲಿ
ಖ್ಯಾತನಾಮರ ಮಾತುಗಳನ್ನು ಉದಾಹರಿಸುವ ಅಭ್ಯಾಸ ಇದೆ ತಾನೆ? ಹೀಗೆ ಉದಾಹರಿಸಲು ಪ್ರಸಿದ್ಧ
ಮಾತುಗಳನ್ನು ಬರೆದಿಟ್ಟುಕೊಳ್ಳುವ ಅಭ್ಯಾಸವೂ ಕೆಲವರಿಗಿದೆ. ಕೆಲವೊಮ್ಮೆ ಇಂತಹ ಮಾತುಗಳು
ಜೀವನಕ್ಕೆ ದಾರಿದೀಪವಾಗಿಯೂ ಬೇಕಾಗುತ್ತವೆ. ಇಂತಹ ಜಗತ್ಪ್ರಸಿದ್ಧ ಮಾತುಗಳ ಜಾಲತಾಣ www.brainyquote.com.
ನೀವು ಆಗಾಗ ಇಲ್ಲಿಗೆ ಭೇಟಿ ನೀಡಿ ಕೊಟೇಶನ್‌ಗಳನ್ನು ಓದಬಹುದು, ಅವುಗಳಿಗೆ
ಚಂದಾದಾರರಾಗಬಹುದು, ನಿಮ್ಮ ಗಣಕದ ಪರದೆಯಲ್ಲಿ ಒಂದು ಬದಿಯಲ್ಲಿ ಈ ಮಾತುಗಳು ಬರುತ್ತಾ
ಇರುವಂತೆ ಮಾಡಬಹುದು, ನಿಮ್ಮ ಬ್ಲಾಗ್‌ತಾಣದಲ್ಲಿ ಅವು ಮೂಡುವಂತೆ ಮಾಡಬಹುದು -ಇತ್ಯಾದಿ
ಸವಲತ್ತುಗಳಿವೆ.
No comments:
Post a Comment