ಎಂಎಸ್ ಆಫೀಸ್
ಉತ್ಪನ್ನಗಳ ಬಳಕೆದಾರರ ಸಮುದಾಯಕ್ಕೆ ಆಫೀಸ್ ಬ್ಲಾಗ್ ಒಂದು ಅತ್ಯುತ್ತಮ ಬ್ಲಾಗ್
ತಾಣವಾಗಿದೆ. ಇಲ್ಲಿ ಹಲವಾರು ಪ್ರಶ್ನೆಗಳು ಎತ್ತಲ್ಪಡುತ್ತವೆ ಮತ್ತು ಪ್ರಶ್ನೆಗಳಿಗೆ
ಸಮವಾಗಿ ಅಥವಾ ಅದಕ್ಕಿಂತ ಹೆಚ್ಚು ಉತ್ತರಗಳು ಮಂಡಿಸಲ್ಪಡುತ್ತವೆ. ಈ ಆಫೀಸ್
ಬ್ಲಾಗ್‌ನಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ವೀಡಿಯೋ ಲೇಖನಗಳು ಮತ್ತು ಪಠ್ಯ ಲೇಖನಗಳನ್ನು
ಒದಗಿಸಲಾಗಿದೆ. ಎತ್ತಲಾಗಿರುವ ಪ್ರಶ್ನೆಗಳಿಗೆ ನಿಖರವಾದ ಪ್ರತಿಸ್ಪಂದನದೊಂದಿಗೆ
ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ.
ಇದರಲ್ಲೊಂದು ವೀಡಿಯೋ ಲೇಖನವಿದ್ದು, ಇದು
ಎಂಎಸ್- ಔಟ್‌ಲುಕ್ ಬಳಸಿ ವಾಣಿಜ್ಯ ಸಭೆಗಳಿಗೆ ಸ್ವಂತದ ಐಡಿಯಾಗಳನ್ನು ಸೃಷ್ಟಿಸುವ
ಕುರಿತು ಮಾರ್ಗಗಳನ್ನು ತಿಳಿಸುತ್ತದೆ. ವಾಣಿಜ್ಯ ಸಭೆಗಳು ಮತ್ತು ಗ್ರಾಹಕರ ಬೆಂಬಲದ
ಕುರಿತು ವೇಳಾಪಟ್ಟಿಯನ್ನು ಒಳಗೊಂಡಂತೆ ಪ್ರಕ್ರಿಯೆಗಳು ಮತ್ತು ಹಂತಗಳೊಂದಿಗೆ ವಿಡೀಯೋ
ಪ್ರವಹನದ ಹರಿಯುವಿಕೆಯು ಮುಂದುವರಿಯುತ್ತದೆ. ಇದರಲ್ಲಿ ಮೈಕ್ರೋಸಾಫ್ಟ್ ವ್ಯಾಪ್ತಿಯ
ಕುರಿತು ಲೇಖನ ಒಂದಿದೆ. ಇದು ಎಂಎಸ್- ಆಕ್ಸೆಸ್‌ನಲ್ಲಿ ದತ್ತಾಂಶವನ್ನು ಮರಳಿ ಪಡೆಯುವ
ಕುರಿತು ಪರಿಹಾರವನ್ನು ಹೊಂದಿದೆ. ಟೋಟಲ್ ವಿಶುವಲ್ ಏಜೆಂಟ್ ಎಂಬ ತಂತ್ರಾಂಶವನ್ನು ಬಳಸಿ
ಇದನ್ನು ಮರಳಿ ಪಡೆಯಲಾಗಿದ್ದು, ಆಕ್ಸೆಸ್ ದತ್ತಾಂಶಗಳ ಸಮಗ್ರತೆ ಹಾಗೂ ಬ್ಯಾಕ್ ಅಪ್
ಗಳನ್ನು ಸ್ವಯಂಚಾಲಿತವಾಗಿ ಮಾಡುವಂತೆ ಈ ತಂತ್ರಾಂಶವನ್ನು ವೃದ್ಧಿಗೊಳಿಸಲಾಗಿದೆ.
ಈ ಬ್ಲಾಗಿನಲ್ಲಿ ಎಂಎಸ್ - ಒನ್ ನೋಟ್ 2010
ಕುರಿತ ಒಂದು ಲೇಖನವೂ ಇದೆ. ಎಂಎಸ್ - ಒನ್ ನೋಟ್ 2010 ಒಂದು ಮೈಕ್ರೋ ಸಾಫ್ಟ್
ಉತ್ಪನ್ನವಾಗಿದ್ದು ಸದರೀ ಲೇಖನದಲ್ಲಿ ಈ ತಂತ್ರಾಂಶದ ಕುರಿತು ಸಂಪೂರ್ಣ ಗುಣಲಕ್ಷಣಗಳು
ಮತ್ತು ಬಳಕೆಯ ಕುರಿತ ವಿವರಣೆ ಇದೆ.
ಎಂಎಸ್ ಎಕ್ಸೆಲ್‌ನಲ್ಲಿ ಅಭಿವೃದ್ಧಿ
ಪಡಿಸಲಾಗಿರುವ ಕೌಟುಂಬಿಕ ಬಜೆಟ್ ಟೆಂಪ್ಲೇಟ್ ಆಗಿರುವ "ಸ್ಟೇಯಿಂಗ್ ಆನ್ ಬಜೆಟ್" ಎಂಬ
ಬಜೆಟ್ ಮೇಲೆ ಅವಲಂಬನೆ ಎಂಬದರ ಕುರಿತು ಎಂದು ಸುಂದರವಾದ ಬರಹವಿದೆ. ಈ ಕೌಟುಂಬಿಕ ಬಜೆಟ್
ಟೆಂಪ್ಲೇಟನ್ನು ಹಲವು ಮಂದಿ ಅಳವಡಿಸಿಕೊಂಡಿದ್ದು ಇಂತಹ ಹಲವು ಬಳಕೆದಾರರಿಂದ ಈ ಬಗ್ಗೆ
ಅಪಾರವಾದ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಾಗಿ ಈ ಬ್ಲಾಗ್ ಒಂದಿಲ್ಲ ಒಂದು ರೀತಿಯಲ್ಲಿ
ಆರ್ಥಿಕವಾಗಿಯೂ ಸಹಾಯ ಮಾಡುತ್ತದೆ. ಇದಲ್ಲದೆ ಇದು ಪೈವಟ್ ಟೇಬಲ್ ಅನ್ನುವ ಪ್ಲಗ್ - ಇನ್
ಕುರಿತಂತೆಯೂ ವಿರವರಣೆ ನೀಡುತ್ತದೆ. ಪೈವಟ್ ಟೇಬಲ್‌ಗಳು ದತ್ತಾಂಶ ಗೊಂದಲಗಳನ್ನು ಸರಿ
ಪಡಿಸುವಲ್ಲಿ ಉಜ್ವಲವಾಗಿವೆ. ಇವುಗಳು ಬಜೆಟ್ ದತ್ತಾಂಶಗಳನ್ನು ಸ್ವಯಂ ಚಾಲಿತವಾಗಿ
ಸಂಘಟಿಸಬಹುದು ಮತ್ತು ಸಂಕ್ಷೇಪಿಸಬಹುದಾಗಿದೆ.
ಮೈಲ್‌ಗಳು ಮತ್ತು ಮೈಲ್ ಸ್ಪಂದನಗಳನ್ನು
ನಿಭಾಯಿಸುವ ಕುರಿತಾಗಿಯೂ ಈ ಬ್ಲಾಗಿನಲ್ಲಿ ಲೇಖನಗಳಿವೆ. ಮೈಲ್ ಕುರಿತಂತಹ ಇಂತಹ ಒಂದು
ಬರಹದಲ್ಲಿ ಒಂದೆಂದರೆ ಸಮೂಹ ಮೈಲ್‌ಗಳಿಗೆ ಲೇಬಲ್‌ಗಳನ್ನು ಸೃಷ್ಟಿಸುವುದಾಗಿದೆ. ಇದು
ಪಠ್ಯ ಬರಹವನ್ನು ಮಾತ್ರವಲ್ಲದೆ, ವಿಡೀಯೋ ಪ್ರಾತ್ಯಕ್ಷಿಕೆಗಳನ್ನೂ ಒಳಗೊಂಡಿದೆ. ವೀಡಿಯೋ
ಚಿತ್ರಣವು ಮೈಲ್ ಮರ್ಜಿಂಗ್ ಮತ್ತು ಸಮೂಹ ಮೈಲಿಂಗ್ ಕುರಿತ ವಿಧಾನ ಪ್ರಕ್ರಿಯೆಯ
ಹಂತಹಂತಗಳ ಚಿತ್ರಣವನ್ನು ಹೊಂದಿದೆ. ಪಠ್ಯ ಬರಹವನ್ನು ಐದು ವಿಭಾಗಗಳಲ್ಲಿ
ವರ್ಗೀಕರಣಗೊಳಿಸಲಾಗಿದೆ ಮತ್ತು ಪ್ರತೀ ವಿಭಾಗದಲ್ಲಿಯೂ ಓದುಗರಿಗೆ ಅನುಕೂಲವಾಗುವಂತೆ
ಬೆಂಬಲ ನೀಡುವ ಚಿತ್ರಗಳೊಂದಿಗೆ ಲೇಬಲ್‌ಗಳನ್ನು ಸೃಷ್ಟಿಸಲು ಮತ್ತು ಸಾಮೂಹಿಕ ಮೈಲ್
ಮಾಡುವ ಕುರಿತಂತೆ ಹಂತ ಹಂತವಾದ ಪ್ರಕ್ರಿಯೆಗಳನ್ನು ನೀಡಲಾಗಿದೆ.
No comments:
Post a Comment