ವಿಂಡೋಸ್
8 ಗಾಗಿ ನಾವು ಬಯಸುವ ಅನುಭವವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಬಾಹ್ಯ
ಹಾರ್ಡ್ವೇರ್ ಪಾಲುದಾರರೊಂದಿಗೆ ವಿಂಡೋಸ್ ತಂಡವು ಸತತವಾಗಿ ಕಾರ್ಯನಿರ್ವಹಿಸುವುದನ್ನು
ಮುಂದುವರಿಸಿದೆ. ಹೊಸ ವಿಂಡೋಸ್ 8 ಪಿಸಿಗಳಲ್ಲಿ ವಿಂಡೋಸ್ 8 ನಿಜವಾಗಿಯೂ ಯಶಸ್ವಿಯಾಗಲು
ಸಹ ನಾವು ಇದನ್ನು ಸಮತೋಲನ ಮಾಡಬೇಕು.
“ಬಿಲ್ಡ್”
ಕಾನ್ಫರೆನ್ಸ್ ನಲ್ಲಿ, ಹಲವಾರು ಸ್ಪರ್ಶ ಸಂವಹನಗಳನ್ನು ಮೈಕ್ರೋಸಾಫ್ಟ್ ಪರಿಚಯಿಸಿದೆ
ಮತ್ತು ಇದು ವಿಂಡೋಸ್ 8 ಅನ್ನು ಸ್ಪರ್ಶ ಭಾಷೆಯಾಗಿಸಿದೆ. ಈ ಮೂಲಭೂತ ಸಂವಹನಗಳು ವಿಂಡೋಸ್
8 ಬಳಕೆದಾರ ಇಂಟರ್ಫೇಸ್ನ ತಳಹದಿಯಾಗಿಸಿದೆ ಮತ್ತು ಇವುಗಳನ್ನು ಅಪ್ಲಿಕೇಶನ್
ಫ್ರೇಮ್ವರ್ಕ್ಗಳಲ್ಲಿ ಭಾರಿ ಪ್ರಮಾಣದಲ್ಲಿ ಮರುಬಳಕೆ ಮಾಡಲಾಗುತ್ತದೆ. ನಮ್ಮ ಸ್ಪರ್ಶ
ಭಾಷೆಯ ಪ್ರಮುಖ ಗುರಿಯು ಸುಲಭ ಬಳಕೆಯನ್ನು ಉತ್ತೇಜಿಸುವುದಾಗಿದೆ ಮತ್ತು ಬಳಕೆದಾರ
ವಿಶ್ವಾಸವನ್ನು ಖಾತ್ರಿಪಡಿಸುವುದಾಗಿದೆ. ಎಲ್ಲಾ ಸ್ಪರ್ಶ ಸಂವಹನಗಳು ಸ್ಥಿರವಾಗಿ ಮತ್ತು
ನಂಬಿಗಾರ್ಹವಾಗಿ ಎಲ್ಲಾ ಸಮಯಗಳಲ್ಲಿ ಕಾರ್ಯನಿರ್ವಹಿಸುತ್ತವೆ. ನಮ್ಮ ನಿಯಂತ್ರಣಗಳನ್ನು
ಬಳಕೆ ಮಾಡುವ ಡೆವಲಪರ್ಗಳು ಈ ಭಾಷೆಯನ್ನು ಸ್ವಯಂಚಾಲಿತವಾಗಿ ಅವರ ಅಪ್ಲಿಕೇಶನ್ನಲ್ಲಿ
ಬಳಸಿಕೊಳ್ಳುತ್ತಾರೆ ಅಥವಾ ಮಾದರಿಗಳನ್ನು ಬಳಸಿಕೊಳ್ಳುತ್ತಾರೆ. ಹೀಗೆ ಮಾಡುವ ಮೂಲಕ,
ಅವರು ಬಳಕೆದಾರರಿಗೆ ಅಗತ್ಯವಾದ ಯಾವುದೇ ಕಲಿಕೆಯನ್ನು ಕನಿಷ್ಠಗೊಳಿಸುತ್ತಾರೆ.
ಮೂಲಭೂತ ಸನ್ನೆಗಳಿಗೆ 12 ಕ್ಕಿಂತ ಹೆಚ್ಚು ಬೆರಳುಗಳು ಅಗತ್ಯವಾಗುವುದಿಲ್ಲ. ಆದರೆ 2 ಬೆರಳುಗಳು ವಿವಿಧ ಅಪ್ಲಿಕೇಶನ್ಗಳಿಗೆ ಸೀಮಿತಗೊಂಡು ಬದಲಾಗಬಹುದು. ಈ ಕಾರಣದಿಂದಲೇ ಕನಿಷ್ಠ 5 ಬೆರಳುಗಳನ್ನು ಬೆಂಬಲಿಸುವ ಡಿಜಿಟೈಜರ್ಗಳು ವಿಂಡೋಸ್ 8 ಪಿಸಿಗಳಿಗೆ ಅಗತ್ಯವಿರುತ್ತವೆ. ವಿಂಡೋಸ್ 8 ರಲ್ಲಿ ಹೊಸ UI ಕಲ್ಪನೆಯು ಸ್ಪರ್ಶ ಹಾರ್ಡ್ವೇರ್ ವಿನ್ಯಾಸಕ್ಕೂ ಸಹ ಪರಿಣಾಮ ಬೀರುತ್ತದೆ. ಇದು ಅಸ್ತಿತ್ವದಲ್ಲಿರುವ ವಿಂಡೋಸ್ 7 ಪಿಸಿಗಳಿಗಿಂತ ವಿಂಡೋಸ್ 8 ಪಿಸಿಗಳು ಹೆಚ್ಚು ಸಾಮರ್ಥ್ಯವುಳ್ಳದ್ದಾಗುವ ಮತ್ತೊಂದು ಕ್ಷೇತ್ರವಾಗಿದೆ.

ಕೆಲವು ಸ್ಪರ್ಶ
ಸ್ಕ್ರೀನ್ಗಳಲ್ಲಿ, ಸ್ಕ್ರೀನ್ನಿಂದ ವರದಿ ಮಾಡಲ್ಪಟ್ಟ ಮಾಹಿತಿಯು ಸ್ಥಿರವಾಗಿರುವುದಿಲ್ಲ.
ಬೆರಳು ಚಲಿಸುತ್ತಿದೆಯೇ ಅಥವಾ ಸ್ಥಿರವಾಗಿದೆಯೇ ಎಂದು ಸಿಸ್ಟಮ್ಗೆ ತಿಳಿದುಕೊಳ್ಳಲು
ಕಷ್ಟವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, “ಒತ್ತು ಮತ್ತು ಹಿಡಿದುಕೊಳ್ಳುವ” ಸರಳ
ಸನ್ನೆಗಳು ಲೆಕ್ಕಾಚಾರ ಮಾಡಲು ತೀರಾ ಕಷ್ಟಕರವಾಗಬಹುದು. ಬೆರಳಿನ ಜ್ಯಾಮಿತಿಗಳನ್ನು
ಬಳಸಿಕೊಂಡು ಸ್ಪರ್ಶ ಗುರಿಗಳನ್ನು ಲೆಕ್ಕಾಚಾರ ಮಾಡಲು ನಾವು ಹೊಸ ವಿಧಾನಗಳನ್ನು
ಅಭಿವೃದ್ಧಿಪಡಿಸಿದ್ದೇವೆ ಮತ್ತು ಇದು ಬೆರಳಿನ ಸಂಪರ್ಕದ ಕ್ಷೇತ್ರದೊಳಗೆ ಯಾವುದೇ UI
ಅನ್ನು ಕರೆತರಲು ಸುಲಭವಾಗುತ್ತದೆ. ಹಾರ್ಡ್ವೇರ್ನಲ್ಲಿನ ವ್ಯತ್ಯಾಸಕ್ಕೆ ಅವಕಾಶ
ಕಲ್ಪಿಸಲು ನಾವು ಸಾಕಷ್ಟು ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇವೆ, ಸಾಫ್ಟ್ ವೇರ್ ಪ್ರತಿಫಲ
ನೀಡದ ಕೆಲವು ಕ್ಷೇತ್ರಗಳೂ ಇವೆ.
ಸಾಮಾನ್ಯವಾಗಿ 3
ಸಂಗತಿಗಳಿಗೆ ಪರಿಣಾಮವಾಗುತ್ತದೆ, ಸ್ಪರ್ಶ ಸ್ಕ್ರೀನ್ ಪ್ರತಿಕ್ರಿಯೆ ದರ, ಟೈಪಿಂಗ್ ವೇಗ
ಮತ್ತು ಸ್ಪರ್ಶ ಬಿಂದುಗಳ ಸಂಖ್ಯೆ. ಟಚ್ ಸ್ಕ್ರೀನ್ನಲ್ಲಿ ತ್ವರಿತ ಟ್ಯಾಪ್ಗಳಿಗಿಂತ
ಎಳೆಯುವಿಕೆ ಸನ್ನೆಗಳನ್ನು ಪತ್ತೆಹಚ್ಚಲು ಸಾಮಾನ್ಯವಾಗಿ ಪ್ರತಿಕ್ರಿಯೆ ದರವನ್ನು ಹೆಚ್ಚು
ಗರಿಷ್ಠಗೊಳಿಸಿರಲಾಗುತ್ತದೆ; ಇದು ಸ್ವತಃ ತಪ್ಪಿಹೋದ ಟ್ಯಾಪ್ಗಳಾಗಿ ತೋರಿಸಲ್ಪಡುತ್ತದೆ.
ಪ್ರಾರಂಭಿಕ ಸ್ಪರ್ಶಕ್ಕೆ ಪ್ರತಿಕ್ರಿಯೆ ನೀಡಲು ಸ್ಪರ್ಶಕ್ಕೆ ಸ್ವಲ್ಪ ಸಮಯ ತಗಲುತ್ತದೆ.
ಸ್ವೈಪ್ ಮತ್ತು ಸ್ಲೈಡ್ ಅನ್ನು ಟ್ಯಾಪ್ ಎಂದು ತಪ್ಪಾಗಿ ಅರ್ಥಕಲ್ಪಿಸಲಾಗುತ್ತದೆ,
ಅದರಲ್ಲೂ ಪ್ರಮುಖವಾಗಿ ಸಾಕಷ್ಟು ಸೂಕ್ಷ್ಮವಾಗಿಲ್ಲದ ಹಾರ್ಡ್ವೇರ್ನಲ್ಲಿ ಹೀಗಾಗುತ್ತದೆ.
ತುದಿಯಿಂದ ಸ್ವೈಪ್ ಮಾಡುವುದು ಪ್ರಮುಖವಾಗಿ ವೇಗದ ಸ್ವೈಪ್ನಲ್ಲಿ ಯಾವಾಗಲೂ
ಕಾರ್ಯನಿರ್ವಹಿಸುವುದಿಲ್ಲ.
ಇದನ್ನು ಹಲವು
ಸಿಸ್ಟಮ್ಗಳಲ್ಲಿ ವಿಂಡೋಸ್ 7.0 ಅನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಪರೀಕ್ಷಿಸಲಾಗಿದೆ.
ಬಹುಪಾಲು ವಿಂಡೋಸ್ 7 ಟಚ್ ಸ್ಕ್ರೀನ್ಗಳನ್ನು ವಿಂಡೋಸ್ 8 ರೊಂದಿಗೆ ಬಳಸಬಹುದು. ಇದರರ್ಥ
ಸ್ಪರ್ಶ ಡ್ರೈವರ್ಗಳು ಲೋಡ್ ಆಗುವುದನ್ನು ಮುಂದುವರಿಸುತ್ತವೆ ಮತ್ತು ಸಾಕಷ್ಟು ಪ್ರಮಾಣದ
ಯಶಸ್ಸಿನೊಡನೆ ವಿಂಡೋಸ್ 8 ರೊಂದಿಗೆ ನೀವು ಮೂಲಭೂತ ಸ್ಪರ್ಶ ಸಂವಹನಗಳನ್ನು ಮಾಡಬಹುದು.
ವಿಂಡೋಸ್ 8 ಸಂವಹನಗಳನ್ನು ಫೈಲ್ ಆಯ್ದುಕೊಳ್ಳಲು ಸ್ವೈಪ್ ಮಾಡಲು, ಚಲಿಸಲು ಟೈಲ್ ಅನ್ನು
ಎಳೆಯಲು, ಸ್ನಾಪ್ ಮಾಡಿದ ವೀಕ್ಷಣೆಯನ್ನು ಮರುಗಾತ್ರಗೊಳಿಸಲು ಎಳೆಯುವಾಗ ಮತ್ತು
ಚಾರ್ಮ್ಗಳನ್ನು ಇನ್ವೋಕ್ ಮಾಡಲು ಸ್ಕ್ರೀನ್ ತುದಿಯನ್ನು ಸ್ವೈಪ್ ಮಾಡುವಾಗ ಟಚ್
ಸ್ಕ್ರೀನ್ಗಳ ನಡುವೆ ಹೇಗೆ ಯಶಸ್ವಿ ಪೂರ್ಣಗೊಳಿಸುವಿಕೆಯು ಬದಲಾಗುತ್ತವೆ ಎಂಬುದನ್ನು
ಕೆಳಗಿನ ಕೋಷ್ಟಕಗಳು ತೋರಿಸುತ್ತವೆ. 100% ಎಂದರೆ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಿದೆ
ಎಂದರ್ಥ.
ವಿಂಡೋಸ್ 8 ಅಭಿವೃದ್ಧಿಯಾದ್ಯಂತ, ಹಾರ್ಡ್ವೇರ್ ವ್ಯತ್ಯಾಸವನ್ನು ತಗ್ಗಿಸಲು ಮತ್ತು ಸ್ಥಿರವಾದ ವಿಂಡೋಸ್ 8 ಅಗತ್ಯತೆಗಳನ್ನು ಸ್ಥಾಪಿಸಲು ನಾವು ಬಾಹ್ಯ ಹಾರ್ಡ್ವೇರ್ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದ್ದೇವೆ. ವಿಂಡೋಸ್ 8 ಪಿಸಿಯಾಗಿ ಪ್ರತಿಯೊಂದು ಸ್ಪರ್ಶ ಸಾಧನವು ಮಾರುಕಟ್ಟೆಗೆ ತಲುಪುವ ಮೊದಲು ಅದನ್ನು ಮೈಕ್ರೋಸಾಫ್ಟ್ ಪರೀಕ್ಷಿಸುತ್ತದೆ ಮತ್ತು ಪ್ರಮಾಣೀಕರಿಸುತ್ತದೆ. ಈ ಮೂಲಕ ನಾವು ವಿಂಡೋಸ್ 8 ರಲ್ಲಿನ ಸ್ಪರ್ಶ ಹಾರ್ಡ್ವೇರ್ನಲ್ಲಿ ಸ್ಥಿರತೆಯನ್ನು ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುತ್ತೇವೆ.