ಸಾಮಾನ್ಯವಾಗಿ ನಾಮಕರಣ, ಉಪನಯನ, ಮದುವೆ, ಸತ್ಯನಾರಾಣ ಪೂಜೆ ಹೀಗೆ ವಿವಿಧ ರೀತಿಯ ಶುಭ ಸಮಾರಂಭಗಳ ವಿಡಿಯೋ ಚಿತ್ರೀಕರಣವಾದ ಮೇಲೆ ವಿಡಿಯೋ ಜೊತೆಗೆ ಧ್ವನಿಯನ್ನು ಜೋಡಿಸಿದರೆ ನೋಡಲು ಚಂದ. ಅದಕ್ಕಾಗಿ ಹಿಂದಿನ ಕಾಲದಲ್ಲಿ ಹಳೆಯ ಚಲನಚಿತ್ರಗಳ ಗೀತೆಗಳನ್ನು ವಿಡಿಯೋ ಜೊತೆಗೆ ಜೋಡಿಸಲಾಗುತ್ತಿತ್ತು, ಆಗಿನ ಸಿನಿಮಾ ಹಾಡುಗಳೆಂದರೆ ಸುಮಧುರದ ಜೊತೆಯಲ್ಲಿ ಅರ್ಥಪೂರ್ಣವಾಗಿರುತ್ತಿದ್ದವು, ಆದರೆ ಈಗಿನ ಚಲನಚಿತ್ರ ಗೀತೆಗಳನ್ನು ಕೇಳಲು ಆ ದೇವರೇ ಧರೆಗಿಳಿದು ಬರಬೇಕು! ಅರ್ಥವಿರದಿದ್ದರೂ ಆ ಕಿರುಚಾಟದ ಹಾಡುಗಳನ್ನು ಕೇಳುವುದಾದರೂ ಹೇಗೆ?
ಸಂದರ್ಭಕ್ಕೆ ತಕ್ಕ ಹಾಡುಗಳನ್ನು ವಿಡಿಯೋ ಜೊತೆಯಲ್ಲಿ ಜೋಡಿಸಿ ಕೇಳಲು ಈಗೆಲ್ಲಿ ಸಿಗಬೇಕು ಅಂಥ ಅರ್ಥಪೂರ್ಣ ಹಾಡುಗಳು, ಹೀಗೆ ನನ್ನ ಹುಡುಕಾಟದಲ್ಲಿ ನನಗೆ ದೊರೆತದ್ದು ಅನಾವರಣ ಸಂಸ್ಥೆ! ಅವರು ಹಳೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿ ಅನಾವರಣ ಎಂಬ ಸಂಸ್ಥೆಯ ಸಾಂಪ್ರದಾಯಿಕ ಹಾಡುಗಳ ಧ್ವನಿ ಮುದ್ರಣವನ್ನು 4 ಅವತರಣಿಕೆಗಳಲ್ಲಿ ಇತ್ತಿಚೆಗೆ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಬಿಡುಗಡೆ ಮಾಡಿದ್ದಾರೆ.
ನಮ್ಮ ಹಳೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮೂಲ ಉದ್ದೇಶದಿಂದ ಈ ಧ್ವನಿ ಮುದ್ರಣವನ್ನು ಹೊರಗೆ ತಂದಿದ್ದು, ಇದರಲ್ಲಿ ಮದುವೆ, ಪುನಯನ, ಸತ್ಯನಾರಾಯಣ ಪೂಜೆ, ಗೋಪೂಜೆ, ತುಳಸಿ ಪೂಜೆ ಮುಂತಾದ ಸಂದರ್ಭಗಳಲ್ಲಿ ಹಾಡುವ ಹಾಡುಗಳನ್ನು ಕಲಾವಿದರು ಸುಶ್ರಾವ್ಯವಾಗಿ ಹಾಡಿದ್ದಾರೆ.
ಇದು 3 ಭಾಗಗಳಲ್ಲಿ ಲಭ್ಯವಿದ್ದು, ಮದುವೆಯ ಕಾರ್ಯಕ್ರಮದ್ದೇ ಪ್ರತ್ಯೇಕ ಧ್ವನಿ ಮುದ್ರಣ ಇರುತ್ತದೆ ಎಂದು ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಗಣೇಶ್ ಕೆ.ಎಸ್ ತಿಳಿಸಿದ್ದಾರೆ. ಹಾಡುಗಳ ಮಾದರಿ ತುಣುಕುಗಳನ್ನು ಜಾಲತಾಣದಲ್ಲಿ ಕೇಳುವ ಅವಕಾಶವನ್ನು ಕಲ್ಪಿಸಲಾಗಿದೆ.
ಇಷ್ಟೇ ಅಲ್ಲಾ ಅನಾವರಣ ಸಂಸ್ಥೆಯಲ್ಲಿ ಸಾಕ್ಷ್ಯಚಿತ್ರಗಳ ನಿರ್ಮಾಣ, ಜಾಹೀರಾತುಗಳ ನಿರ್ಮಾಣ, ಜಾಲತಾಣಗಳ ಅಭಿವೃದ್ಧಿ, ಕಲೆ ಮತ್ತು ಕುಶಲಕಲೆ, ಕಾರ್ಯಕ್ರಮಗಳ ನಿರ್ವಹಣೆ, ವಾಣಿಜ್ಯ ಮತ್ತು ಕೈಗಾರಿಕಾ ಪೋಟೋಗ್ರಫಿ, ದೃಶ್ಯ ಸಂಕಲನ, 3ಡಿ ಆನಿಮೇಷನ್, ಸಂಗೀತ ನಿರ್ಮಾಣ, ಭಾಷಾಂತರ, ವ್ಯವಹಾರ ಸಮಾಲೋಚನೆ, ಪ್ರಸರಣ ಸಮಾಲೋಚನೆ ಹೀಗೆ ಹತ್ತು ಹಲವು ಸೇವೆಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಂಚಾರಿ: 9742349990, ಅಥವಾ ಮಿಂಚಂಚೆ ವಿಳಾಸ: contact@anaavarana.com ಜಾಲತಾಣ ವಿಳಾಸ ಕೊಂಡಿ www.anaavarana.com ಗೆ ಸಂಪರ್ಕಿಸಬಹುದಾಗಿದೆ.
No comments:
Post a Comment