ಸಾಹಿತ್ಯ ಎಂದರೆ ನಿಮಗೆ ಇಷ್ಟವೇ?
ಷೇಕ್ಸ್ ಪಿಯರ್, ಲಿಯೋ ಟಾಲ್ ಸ್ಟಾಯ್, ಪುಷ್ಕಿನ್,
ಮಿಲ್ಟಾ, ವಡ್ಸ್ ವರ್ಥ್, ಕಾಪ್ಕಾ, ಕಮೂ, ಕೀಟ್ಸ್, ರಾಬರ್ಟ್ ಬ್ರೌನಿಂಗ್, ಆರಿಸ್ಟಾಟಲ್,
ಟ್ಯಾಗೂರ್, ಒ.ಹೆನ್ರಿ, ಪ್ಲೇಟೂ, ಎವರನ್ನೇಲ್ಲಾ ಓದಿದ್ದೀರಾ? ಅಥವಾ
ಓದಬೇಕೆಂದುಕೊಂಡಿದ್ದೀರಾ?
ಈ ಧಾವಂತದ ಬದುಕಿನಲ್ಲಿ ಇವನ್ನೇಲ್ಲ ಓದೋದು ಹೇಗೆ ಅಂತ
ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಆನ್ಲೈನ್ ಲಿಟರೇಚರ್ ಡಾಟ್ ಕಾಮ್ ಈ ತಾಣದಲ್ಲಿ ಸಾಹಿತ್ಯದ ಸಮೃದ್ದ ರಸದೌತಣ
ದೊರೆಯುತ್ತದೆ. ಬಿಡುವಿನಲ್ಲಿ ಈ ತಾಣಕ್ಕೆ ಬಂದರೆ ಇವರನ್ನೆಲ್ಲ ಓದಿಕೊಳ್ಳಬಹುದು. 250
ಕ್ಕೂ ಹೆಚ್ಚು ಲೇಖಕರ ಕತೆ, ಕವಿತೆ, ಪುಸ್ತಕಗಳು ಇಲ್ಲಿ ನಿಮಗೆ ಓದಿಗೆ ದೊರೆಯುತ್ತದೆ.
ಜತೆಗೆ ಈ ಎಲ್ಲ ಲೇಖಕರ ಜೀವನದ ಸಂಕ್ಷಿಪ್ತ ಪರಿಚಯವೂ ಇದೆ. ಜೊತೆಗೆ ಸಾಹಿತ್ಯದ
ಓದುಗರಿಗಾಗಿ ಆಕರ್ಷಕ ಸ್ಪರ್ಧೆಗಳೂ ಇರುವುದು ಈ ತಾಣದ ವಿಶೇಷ. ನಿಮ್ಮ ನೆಚ್ಚಿನ
ಬರಹಗಾರರನ್ನೆಲ್ಲ ಇಲ್ಲಿ ಓದಿಕೊಳ್ಳಬಹುದು. ಹಾಗಿದ್ದರೆ ಏಕೆ ತಡ? ಕೊಂಡಿ ಕ್ಲಿಕ್ಕಿಸಿ. http://www.online-literature.com
No comments:
Post a Comment