ನಿಮ್ಮ ಮಿಂಚಂಚೆಯು ಹ್ಯಾಕರುಗಳ ದಾಳಿಗೆ ತುತ್ತಾಗಿದೆಯೇ ಎಂದು ತಿಳಿಸುವ ಅಂತರ್ಜಾಲ
ತಾಣವೊಂದು ಆರಂಭವಾಗಿದೆ. https://www.pwnedlist.com ವಿಳಾಸದಲ್ಲಿ ಲಭ್ಯವಿರುವ
ತಾಣದಲ್ಲಿ ನಿಮ್ಮ ಮಿಂಚಂಚೆಯ ವಿಳಾಸ ಅಥವ ಬಳಕೆದಾರನ ಹೆಸರನ್ನು ನೀಡಿದರೆ,ನಿಮ್ಮ
ಮಿಂಚಂಚೆಯು ಹ್ಯಾಕರುಗಳ ದಾಳಿಗೆ ತುತ್ತಾಗಿದೆಯೇ ಎನ್ನುವ ವಿವರ ಸಿಗುತ್ತದೆ.ಪೈರೇಟ್
ಬೇ,ಪೇಸ್ಟ್ ಬಿನ್ ಮುಂತಾದ ತಾಣಗಳಲ್ಲಿ ಹ್ಯಾಕ್ ಆದ ಮಿಂಚಂಚೆಯ ವಿವರಗಳನ್ನು
ಹಂಚಿಕೊಳ್ಳಲಾಗುತ್ತದೆ.ಅಂತಹ ತಾಣಗಳಿಂದ ವಿವರಗಳನ್ನು ಕಲೆ ಹಾಕಿ,ಹ್ಯಾಕ್ ಆದ ಮಿಂಚಂಚೆಯ
ವಿವರಗಳನ್ನು ತಾಣದಲ್ಲಿ ಪ್ರಕಟಿಸಲಾಗುತ್ತದೆ.ಇದುವರೆಗೆ ಸುಮಾರು ನಾಲ್ಕು ದಶಲಕ್ಷಕ್ಕೂ
ಹೆಚ್ಚು ಮಿಂಚಂಚೆಗಳ ವಿವರಗಳನ್ನು ತಾಣ
ಸಂಗ್ರಹಿಸಿದೆ.ಒಂದು ವೇಳೆ ನಿಮ್ಮ ಮಿಂಚಂಚೆ ಹ್ಯಾಕ್ ಆಗಿದೆ ಎಂದು ಈ ತಾಣದ ಮೂಲಕ
ತಿಳಿದರೆ,ಒಡನೆಯೇ ಮಿಂಚಂಚೆ ವಿಳಾಸದ ಲಾಗಿನ್ ವಿವರಗಳನ್ನು ಬದಲಿಸುವುದು ಸುರಕ್ಷಿತ.ಹೊಸ
ಪಾಸ್‌ವರ್ಡ್ ಬಳಸಿ,ಮಿಂಚಂಚೆಯ ಮೂಲಕ ಇತರ ಖಾತೆಗಳ ಪಾಸ್‌ವರ್ಡ್ ಪಡೆದಿದ್ದರೆ, ಅವನ್ನೂ
ಬದಲಿಸಿ ಸುರಕ್ಷಿತವಾಗಿಸಿ. https://www.pwnedlist.com
No comments:
Post a Comment