infoaxe.com ಇನ್ನೊಂದು ಶೋಧ ತಾಣ. ಆದರಿದು ಕೆಲಸ ಮಾಡುವ ರೀತಿ ಮಾತ್ರ ತುಸು ಭಿನ್ನ.ಶೋಧ
ಗುಚ್ಚವನ್ನು ನೀಡಿದ ವ್ಯಕ್ತಿಯು ಈ ಹಿಂದೆ ಭೇಟಿ ನೀಡಿದ್ದ ತಾಣಗಳಲ್ಲಿ ಆ ವಿಷಯಕ್ಕೆ
ಸಂಬಂಧಿಸಿದ ಮಾಹಿತಿಯಿದೆಯೇ ಎಂದು ಹುಡುಕಿಕೊಡಲು ಈ ತಾಣ
ಪ್ರಯತ್ನಿಸುತ್ತದೆ. ಸಾಮಾನ್ಯವಾಗಿ ಜನರು ತಾವು ಹಿಂದೆ ಭೇಟಿ ನೀಡಿದ ತಾಣದಲ್ಲಿ ಕಂಡ
ಯಾವುದೋ ಮಾಹಿತಿಯ ಬಗ್ಗೇ ಶೋಧಿಸುವುದೇ ಹೆಚ್ಚು ಎನ್ನುವ ಸಂಶೋಧನೆಯ ಅನ್ವಯ ಈ ತಾಣದ
ಶೋಧವನ್ನು ನಡೆಸಲಾಗುತ್ತದೆ. ಈ ರೀತಿಯ ಶೊಧ ನಡೆಸುವ ಕಾರಣ, ತಾಣವು ನೋಂದಾವಣೆಯನ್ನು
ಬಯಸುತ್ತದೆ. ಪ್ರತಿಯೋರ್ವನ ಅಂತರ್ಜಾಲ ಚರಿತೆಯನ್ನದು ನೆನಪಿನಲ್ಲಿರಿಸಿ, ಶೋಧ ಫಲಿತಾಂಶ
ನೀಡುತ್ತದೆ. ಹೀಗಾಗಿ ಖಾಸಗಿತನದ ಬಗ್ಗೆ ಕಾಳಜಿ ಇದ್ದವರು ಈ ತಾಣವನ್ನು ದೂರವಿಡಲೂ ಬಹುದು.
No comments:
Post a Comment