ಗಣಕವನ್ನು ಬಳಸುವುದು ಒಂದಾದರೆ ಗಣಕದಲ್ಲಿ ಕ್ರಮವಿಧಿ ರಚಿಸುವುದು (ಪ್ರೋಗ್ರಾಮ್ಮಿಂಗ್)
ಇನ್ನೊಂದು. ಇದು ಕೇವಲ ಆಸಕ್ತರಿಗೆ ಹಾಗೂ ಪರಿಣತರಿಗೆ. ಗಣಕದಲ್ಲಿ ಕ್ರಮವಿಧಿ ರಚಿಸಲು
ಹಲವು ಭಾಷೆಗಳು (programming languages) ಲಭ್ಯವಿವೆ. ಉದಾ -C, C++, Java, C#,
ASP.NET, ಇತ್ಯಾದಿ. ಇವೆಲ್ಲ ದೊಡ್ಡವರಿಗಾಗಿ ಹಾಗೂ ಕಲಿಯಲು ಕ್ಲಿಷ್ಟವಾದ ಭಾಷೆಗಳು.
ಮಕ್ಕಳಿಗಾಗಿ ಲೋಗೋ ಎಂಬ ಭಾಷೆ ಸುಮಾರು ವರ್ಷಗಳಿಂದ ಬಳಕೆಯಲ್ಲಿದೆ. ಲೋಗೋ ಮಾದರಿಯಲ್ಲೇ
ಮಕ್ಕಳಿಗೆಂದೇ ರಚಿಸಲಾದ ಕ್ರಮವಿಧಿ ರಚನೆಯ ಭಾಷೆ Scratch. ಇದರ ವೈಶಿಷ್ಟ್ಯವೇನೆಂದರೆ
ಇದರಲ್ಲಿ ಎಲ್ಲವೂ ಚಿತ್ರಗಳ (ಗ್ರಾಫಿಕ್ಸ್) ಮೂಲಕ ಆಗುತ್ತದೆ. ಈ ಉಚಿತ ತಂತ್ರಾಂಶ
ಬೇಕಿದ್ದಲ್ಲಿ ನೀವು ಬೇಟಿ ನೀಡಬೇಕಾದ ಜಾಲತಾಣ scratch.mit.edu. ಇದು ೧೬ ವರ್ಷದ ಒಳಗಿನ ಮಕ್ಕಳನ್ನೇ ಗಮನದಲ್ಲಿಟ್ಟುಕೊಂಡು ತಯಾರಾದ ತಂತ್ರಾಂಶ. ಇದನ್ನು ಅಧ್ಯಾಪಕರೂ ಬಳಸಬಹುದು.
No comments:
Post a Comment