Pages

Saturday, January 4, 2014

ಹೊಸವರ್ಷಕ್ಕೊಂದು ಹೊಸ ತಾಣ

ಶಾಪಿಂಗ್ - ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಇಷ್ಟವೋ ಕಷ್ಟವೋ, ಅದು ಅನಿವಾರ್ಯವೂ ಹೌದು.

ಅನಿವಾರ್ಯ ಎಂದ ಮಾತ್ರಕ್ಕೆ ಶಾಪಿಂಗ್ ಸುಲಭದ ಕೆಲಸವೇನೂ ಅಲ್ಲ. ಯಾವುದೇ ವಸ್ತುವಿಗಾಗಿ ಶಾಪಿಂಗ್ ಮಾಡಲು ಹೊರಟಾಗ ಮಾರುಕಟ್ಟೆಯಲ್ಲಿ ಕಾಣಸಿಗುವ ಆಯ್ಕೆಗಳು ನಮ್ಮ ಮನಸಿನಲ್ಲಿ ಹುಟ್ಟುಹಾಕುವ ಗೊಂದಲವೇನು ಸಾಮಾನ್ಯದ್ದೇ?
ಇಂತಹ ಗೊಂದಲದ ಕೆಲವು ಕ್ಷಣಗಳಲ್ಲಿ ನಿಮಗೆ ನೆರವಾಗುವ ಸಣ್ಣದೊಂದು ಪ್ರಯತ್ನವನ್ನು ಇಜ್ಞಾನ ಡಾಟ್ ಕಾಮ್ ಮಾಡುತ್ತಿದೆ. ೨೦೧೪ರ ಮೊದಲ ದಿನ, ಹೊಸವರ್ಷದ ಶುಭಾಶಯಗಳೊಂದಿಗೆ, 'ಇಜ್ಞಾನ ಶಾಪಿಂಗ್ ಸಂಗಾತಿ'ಯ ಪ್ರಾಯೋಗಿಕ ಆವೃತ್ತಿಯನ್ನು ಅಂಕಣಕಾರ, ತಂತ್ರಜ್ಞ ಶ್ರೀನಿಧಿಯವರು ಪ್ರಯತ್ನಿಸಿದ್ದಾರೆ.

ವಿದ್ಯುನ್ಮಾನ ಉಪಕರಣಗಳು, ಗೃಹೋಪಯೋಗಿ ಪರಿಕರಗಳನ್ನೆಲ್ಲ ಕೊಳ್ಳುವಾಗ ನಾವು ಗಮನಿಸಬೇಕಾದ ಅಂಶಗಳನ್ನು ಈ ತಾಣ ನಿಮ್ಮೊಡನೆ ಹಂಚಿಕೊಳ್ಳಲಿದೆ. ಡಿಜಿಟಲ್ ಕ್ಯಾಮೆರಾ, ಲ್ಯಾಪ್‌ಟಾಪ್‌ಗಳಿಂದ ಪ್ರಾರಂಭಿಸಿ ವಾಟರ್ ಹೀಟರ್, ಫ್ರಿಜ್‌ವರೆಗೆ ಅನೇಕ ಉಪಕರಣ-ಪರಿಕರಗಳನ್ನು ಕುರಿತಾದ ಟಿಪ್ಸ್ ಈ ತಾಣದಲ್ಲಿ ಕಾಣಿಸಿಕೊಳ್ಳಲಿದೆ.

ಹೆಚ್ಚಿನ ಮಾಹಿತಿಗೆ ಜಾಲತಾಣ ಕೊಂಡಿ: shopping.ejnana.com

No comments:

Post a Comment