Pages

Saturday, January 4, 2014

ಮಂಗಳ ಗ್ರಹ ಏಕಮುಖ ಪ್ರವಾಸಕ್ಕೆ " ಮಾರ್ಸ್ ಒನ್"

ಏಕಮುಖ ಮಂಗಳ ಪ್ರವಾಸದ 1 ಸಾವಿರ ಮಂದಿಯ ಅಂತಿಮ ಸುತ್ತಿನ ಪಟ್ಟಿ ಸಿದ್ದವಾಗಿದ್ದು, ಈ ಪಟ್ಟಿಯಲ್ಲಿ 62 ಮಂದಿ ಭಾರತೀಯರು ಸ್ಥಾನಗಿಟ್ಟಿಸಿದ್ದಾರೆ. 2023ರ ವೇಳೆಗೆ ಮಂಗಳನಲ್ಲಿ ಕಾಯಂ ಕಾಲೋನಿ ನಿರ್ಮಿ‌ಸಲು ಉದ್ದೇಶಿಸಿ 'ಮಾರ್ಸ್ ಒನ್‌' ಪ್ರಾಜೆಕ್ಟ್‌‌ನ್ನು ಹಮ್ಮಿಕೊಳ್ಳಲಾಗಿದೆ.
ಇದು ಒನ್ ವೇ ಟ್ರಿಪ್ ಆಗಿದ್ದು, ಅಲ್ಲಿ ಹೋದವರು ಮರಳಿ ಭೂಮಿಗೆ ಬರುವಂತಿಲ್ಲ. ಯೋಜನೆಗೆ ಸಹಿ ಹಾಕಿದ ಜನರಲ್ಲಿ 1,058 ಜನರ ಅಂತಿಮ ಸುತ್ತಿನ ಪಟ್ಟಿ ತಯಾರಾಗಿದ್ದು ಪಟ್ಟಿಯಲ್ಲಿ ಅಮೆರಿಕದಿಂದ ಹೆಚ್ಚಿನ ಜನ ಆಯ್ಕೆಯಾಗಿದ್ದಾರೆ. ಅಂತಿಮ ಸುತ್ತಿಗೆ ಆಯ್ಕೆಯಾದ ದೇಶಗಳ ಪೈಕಿ ಅಮೆರಿಕ (297 ಜನ), ಕೆನಡಾ (75 ಜನ), ಭಾರತ(62 ಜನ) ರಷ್ಯಾದ (52 ಜನ) ಆಯ್ಕೆಯಾಗಿದ್ದಾರೆ. ಅಂತಿಮ ಸುತ್ತಿನಲ್ಲಿ ಬಂದಿರುವ ಅರ್ಜಿ‌ಯನ್ನು ಪರಿಶೀಲಿಸಿ ವಿವಿಧ ರಾಷ್ಟ್ರಗಳ 40 ಜನರನ್ನು ಈ ಯಾನಕ್ಕೆ ಆರಿಸಲಾಗುವುದು.
ನಂತರ ಈ 40 ಜನರನ್ನು,ನಾಲ್ಕು ಜನರಿರುವ ಹತ್ತು ತಂಡಗಳಾಗಿ ವಿಂಗಡಿಸಿ, ಅಂತಿಮ ಹೆಸರನ್ನು 'ಮಾರ್ಸ್ ಒನ್‌' ಪ್ರಾಜೆಕ್ಟ್ ತಂಡ ಆಯ್ಕೆ ಮಾಡಲಿದೆ. ಈ ನಾಲ್ಕು ಮಂದಿಯಲ್ಲಿ ತಲಾ ಇಬ್ಬರು ಪುರುಷರು ಮತ್ತು ಮಹಿಳೆಯರು 2022ರ ಸೆಪ್ಟೆಂಬರ್‌ನಲ್ಲಿ ಪ್ರಯಾಣ ಆರಂಭಿಸಲಿದ್ದು, 2023ರ ಏಪ್ರಿಲ್‌ನಲ್ಲಿ ಮಂಗಳನಲ್ಲಿ ಇಳಿಯುವಂತೆ ವೇಳಾಪಟ್ಟಿ ತಯಾರಾಗಿದೆ. 2011 ಜನವರಿಯಿಂದ ಆರಂಭಗೊಂಡ ಈ ಮಾರ್ಸ್‌ ಒನ್‌ ಪ್ರಾಜೆಕ್ಟ್‌ ಕಳೆದ ವರ್ಷದ ಮೇ ತಿಂಗಳಿನಲ್ಲಿ 78 ಸಾವಿರ ಜನರು ಸಹಿ ಹಾಕಿದ್ದರು.
ನಂತರ ಈ ಪ್ರಾಜೆಕ್ಟ್‌ ಸುದ್ದಿ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗಿ ಹೆಚ್ಚಿನ ಜನರು ಈ ಪ್ರಾಜೆಕ್ಟ್‌ ಸಹಿ ಹಾಕಲು ಆರಂಭಿಸಿದ್ದರು. ಅಗಸ್ಟ್‌ 31 ಸಹಿ ಹಾಕಲು ಅಂತಿಮ ದಿನ ನಿಗದಿಯಾಗಿತ್ತು.ಈ ಡೆಡ್‌ ಲೈನ್ ಸಮೀಪಿಸುತ್ತಿದ್ದಂತೆ, ಒಟ್ಟು 140 ದೇಶಗಳಿಂದ 2ಲಕ್ಷಕ್ಕೂ ಅಧಿಕ ಮಂದಿ ಈ ಯೋಜನೆಗೆ ಸಹಿ ಹಾಕಿದ್ದರು. ಮಂಗಳ ಗ್ರಹದ ಪ್ರಯಾಣದ ನೋಂದಣಿಗೆ ಸುಮಾರು 20 ಸಾವಿರಕ್ಕೂ ಅಧಿಕ ಭಾರತೀಯರು ಸಹಿ ಹಾಕಿದ್ದರು.ಈ ಮೂಲಕ ಮಾರ್ಸ್‌ ಒನ್‌ ಪ್ರಾಜೆಕ್ಟ್‌ಗೆ ನೋಂದಣಿ ಮಾಡಿಕೊಂಡ ರಾಷ್ಟ್ರಗಳ ಪೈಕಿ ಭಾರತ 4ನೇ ಸ್ಥಾನ ಪಡೆದಿತ್ತು. 
 
ಹೆಚ್ಚಿನ ಮಾಹಿತಿಗೆ ಜಾಲತಾಣ ಕೊಂಡಿ: www.mars-one.com

No comments:

Post a Comment