ಪ್ರಸ್ತುತ ನೃತ್ಯಕ್ಕೆ, ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜನಜೀವನಕ್ಕೆ
ತಲುಪುವ ಸಾಧ್ಯತೆ ಬಹಳ ಕಡಿಮೆಯಾಗುತ್ತ ಹೋಗಿದೆ. ಜೊತೆಗೆ ನೃತ್ಯದ ಕೇವಲ
ಶಾಸ್ತ್ರೀಯತೆಯನ್ನಷ್ಟೇ ಅವಲೋಕಿಸದೇ, ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ,
ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಒಂದು ಮಾಧ್ಯಮದ ಅಗತ್ಯತೆ ಎದ್ದು
ಕಾಣಿಸುತ್ತದೆ. ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿ ಕೇವಲ ಸಾಮಾಜಿಕ-ಸಾಮುದಾಯಿಕ
ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು
ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ
ನೀಡುವಲ್ಲಿ ನನಗೂ ಕರ್ತವ್ಯವಿದೆ ಎಂದೆನಿಸಿತು.ಪತ್ರಿಕೆಯ ತಂತ್ರಾಂಶ-ಪ್ರತಿಯು ಈ
ತಾಣದಲ್ಲಿ ಲಭ್ಯ. ಸಾಹಿತ್ಯಾಸಕ್ತರು ಹಾಗೂ ನೃತ್ಯಾಸಕ್ತರು ಇದರ ಸದುಪಯೋಗ
ಪಡೆದುಕೊಳ್ಳಬಹುದು.
No comments:
Post a Comment