ಸಾವಿರಾರು ಕಿಲೋಮೀಟರ್ ದೂರದಿಂದ ಹಕ್ಕಿಗಳು ವಲಸೆ ಬರುವುದು ಗೊತ್ತಿರಬಹುದು. ಮೈಸೂರಿನ
ಪಕ್ಕದ ರಂಗನತಿಟ್ಟು ಇಂತಹ ಹಕ್ಕಿಗಳಿಗೆ ಖ್ಯಾತವಾಗಿದೆ. ಇದೇ ರೀತಿ ಇನ್ನೂ ಹಲವಾರು
ಸ್ಥಳಗಳಲ್ಲಿ ವಲಸೆಬಂದ ಹಕ್ಕಿಗಳನ್ನು ಗಮನಿಸಬಹುದು. ಕೆಲವೊಮ್ಮೆ ಅಷ್ಟೇನೂ
ಪ್ರಚಲಿತವಲ್ಲದ ಜಾಗದಲ್ಲೂ ವಲಸೆಬಂದ ಹಕ್ಕಿಗಳನ್ನು ನೋಡಬಹುದು. ಈ ವರ್ಷ ಕಂಡುಬಂದ ಹಕ್ಕಿ
ಪ್ರಭೇದ ಇನ್ನೊಂದು ವರ್ಷ ಕಂಡುಬರಬೇಕೆಂದೇನೂ ಇಲ್ಲ. ಹೀಗೆ ಕಂಡುಬಂದ ಹಕ್ಕಿಗಳನ್ನು
ವರದಿ ಮಾಡಿ ಅವುಗಳ ಬಗ್ಗೆ ಮಾಹಿತಿಸಂಚಯ ಮಾಡಲೆಂದೇ ಒಂದು ಜಾಲತಾಣವಿದೆ. ಅದರ ವಿಳಾಸ - www.migrantwatch.in. ಈ ಜಾಲತಾಣದಲ್ಲಿ ನೋಂದಾಯಿಸಿಕೊಂಡು ನೀವು ಗಮನಿಸಿದ ವಲಸೆಹಕ್ಕಿಗಳ ಬಗ್ಗೆ ಮಾಹಿತಿ ದಾಖಲಿಸಬಹುದು.
source: http:, //ganakindi.blogspot.com/
source: http:, //ganakindi.blogspot.com/
No comments:
Post a Comment