WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Thursday, September 29, 2011

ಇದು ನಿಮಗೆ ತಿಳಿದಿರಲಿ : ದಿನಕ್ಕೆ 100 SMS ಮಾತ್ರ

 

ಮೊಬೈಲ್ ಗ್ರಾಹಕರಿಗೊಂದು ಸುದ್ದಿ! ಅದು ಸಿಹಿಯೋ, ಕಹಿಯೋ ನಿಮಗೆ ಸೇರಿದ್ದು! ಇದೇ ತಿಂಗಳು 27 ರಿಂದ (ಸೆಪ್ಟೆಂಬರ್ 27) ಮೊಬೈಲ್ ಬಳಕೆದಾರರಿಗೆ 'Per Day Per Sim' (PDPS) ಎಂಬ ಘೋಷಣೆಯೊಂದಿಗೆ TRAI (ಟೆಲಿಫೊನ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ತರುತ್ತಿದೆ ದಿನಕ್ಕೆ 100 ಎಸ್ ಎಮ್ ಎಸ್ ಸೌಲಭ್ಯ.

ಈ ನಿಯಮದ ಪ್ರಕಾರ ಸೇವೆದಾರರು ಬಳಕೆದಾರರಿಗೆ ದಿನವೊಂದಕ್ಕೆ ನೂರು SMS ಗಳಿಗಿಂತ ಹೆಚ್ಚು ಸೌಲಭ್ಯ ನೀಡುವಂತಿಲ್ಲ. TRAI ತನ್ನ ಹೇಳಿಕೆಯಲ್ಲಿ ಈ ವಿಷಯ ಸ್ಪಷ್ಟಪಡಿಸಿದೆ. ಹೀಗೆ ಬಳಕೆದಾರರಿಗೆ ಇನ್ನು ಮುಂದೆ ದಿನವೊಂದಕ್ಕೆ ನೂರು SMS ಮಾತ್ರ ಮಾಡುವ ಅವಕಾಶ ನೀಡಲಾಗಿದೆ.

ಆದರೆ TRAI ಯ ಈ ನಿಯಮ ಹಾಗೂ ನಿರ್ಧಾರದ ಬಗ್ಗೆ ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿವೆ. ವಿರೋಧದ ಅಲೆಗಳೇ ಹೆಚ್ಚು ಎಂದೇ ಹೇಳಬಹುದು. ಕೆಲವರು 100 SMS, ಇದು ತುಂಬಾ ಕಡಿಮೆಯಾಯ್ತು, ಇದು ನಮ್ಮ ಸ್ವಾತಂತ್ರ್ಯ ಹರಣ ಎಂದರೆ ಕೆಲವರು ನಮ್ಮ ಮೊಬೈಲುಗಳಿಂದ ಪ್ರಮೋಶನಲ್ ಮೆಸೇಜ್ ಕಳಿಸುವವರಿಗೆ ತಕ್ಕ ಶಾಸ್ತಿಯಾಯ್ತು ಎಂದಿದ್ದಾರೆ.

ಆದರೆ ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ಇದು ನಮ್ಮ ಹಕ್ಕುಗಳನ್ನು ಕಸಿಯುವ ಕೆಲಸವಾಗಿದೆ. ನಾವೇನು ಕೊಳ್ಳುತ್ತೇವೆಯೋ ಅದಕ್ಕೆ ಸರಿಯಾಗಿ ನಾವು ಪಾವತಿಸುತ್ತೇವೆ ಕೂಡ. ನಾವೆಷ್ಟು ಮೆಸೇಜ್ ಕಳಿಸಬೇಕೆಂದು ನಿರ್ಧರಿಸಲು ನಮಗೇ ಬಿಡಬೇಕು. ಇದರಲ್ಲಿ ಮಧ್ಯೆ ಮೂಗು ತೂರಿಸುವುದು ಯಾವ ನ್ಯಾಯ ಎನ್ನುವವರೇ ಬಹಳಷ್ಟಿದ್ದಾರೆ.

ಈ ಹೊಸ ಸೇವೆಯನ್ನು ನೀಡಲಿರುವ ಅಪ್ಲಿಕೇಶನ್ ಗಳು ಬಿಬಿಎಮ್ ಮತ್ತು ವಾಟ್ಸ್ ಆಪ್ (BBM and Whatsapp). ಎಲ್ಲರಿಗೂ 100 ಎಸ್ ಎಮ್ ಎಸ್ ದೊರೆಯುವುದರಿಂದ ಜನರು ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದೆಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ಈ ಕೊಡುಗೆ ಬಂದಮೇಲೆ ಜನರ ಪ್ರತಿಕ್ರಿಯೆ ಹೇಗಿರಬಹುದೆಂದು ಈಗ ಹೇಳಲಾಗದು, ಏಕೆಂದರೆ ಲೋಕೋ ಭಿನ್ನ ರುಚಿಃ...!

No comments:

Post a Comment