WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Monday, May 20, 2013

ಬಳಸಿದ ನಿಮಿಷಕ್ಕನುಗುಣವಾಗಿ ದರ ಕಾರ್ ಸೇವೆ

ಅಮೆರಿಕಾದಲ್ಲಿ ಕಾರನ್ನು ಬಾಡಿಗೆಗೆ ನೀಡುವ ಸೇವೆಗಳನ್ನು ಇಂಟರ್ನೆಟ್ ಮೂಲಕ ಪಡೆಯಲು ಸಾಧ್ಯವಾಗುತ್ತಿದೆ Car2go ಮತ್ತು ಸ್ಮಾರ್ಟ್‌ಫೋನ್ ಮುಖಾಂತರ ಕಾರನ್ನು ಬಾಡಿಗೆಗೆ ಹಿಡಿಯಬಹುದು. ಈಗದು ಕಾರನ್ನು ಬಳಸಿದ್ದಕ್ಕೆ ಬಾಡಿಗೆಯನ್ನು ನಿಮಿಷಕ್ಕಿಷ್ಟು ಎಂಬ ದರದಲ್ಲಿ ಲೆಕ್ಕ ಹಾಕಿ,ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ. ಹೆಚ್ಚಿನ ಬಾಡಿಗೆ ಕಾರು ಸೇವೆಗಳು ಗಂಟೆಗಿಷ್ಟು ಎಂದು ದರ ನಿಗದಿಪಡಿಸಿವೆ. Car2go ದ ಸೇವೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಬಾಡಿಗೆಯಲ್ಲಿ ಪಾರ್ಕಿಂಗ್ ಉಚಿತವಾಗಿದೆ. ಹಾಗಾಗಿ, ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ಬಿಟ್ಟು ಹೋದರಾಯಿತು. ಯಾರಿಗಾದರೂ ವಿಮಾನ ನಿಲ್ದಾಣಕ್ಕೆ ಹೋಗಬೇಕಾದರೆ ಇಂಟರ್ನೆಟ್ ಮೂಲಕ ಬಾಡಿಗೆ ಕಾರನ್ನು ಬುಕ್ ಮಾಡಿ, ಅದನ್ನು ಚಲಾಯಿಸಿಕೊಂಡು ವಿಮಾನ ನಿಲ್ದಾಣ ತಲುಪಿ, ಅಲ್ಲಿನ ಅಧಿಕೃತ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ ಹೋದರಾಯಿತು. ಕಾರನ್ನು ಮರಳಿಸುವ ಅಗತ್ಯವೂ ಇಲ್ಲ. ಹೀಗಾಗಿ, ಏಕಮುಖ ಪಾವತಿ ಸವಲತ್ತು ಪಡೆದಂತಾಯಿತು. ಗ್ರಾಹಕರು ಇಂತಹ ಕಾರು ಸೇವೆಗಳನ್ನು ಪಡೆಯಲು ವಾರ್ಷಿಕ ಶುಲ್ಕ ಪಾವತಿಸಿ, ನೋಂದಾಯಿಸಿಕೊಳ್ಳಬೇಕು. ವಿಳಾಸ ಕೋಂಡಿ: www.car2go.com

ಕರಕುಶಲ ಸಾಮಗ್ರಿಗಳ ತಾಣ

 ಶಾಪೆಟ್‌ಪ್ಲೇಸಸ್  ಇಂಟರ್ನೆಟ್ ತಾಣವು ಇದರಲ್ಲಿ ವಿವಿಧ ಸ್ಥಳಗಳ ವಿಶೇಷ ಸಾಮಗ್ರಿಗಳ ಆನ್‌ಲೈನ್ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸದ್ಯ ಎಂಟು ರಾಜ್ಯಗಳ ಕರಕುಶಲ ಸಾಮಗ್ರಿಗಳಷ್ಟೇ ಈ ತಾಣದಲ್ಲಿ ದೊರಕುತ್ತಿದೆ. ನಿಧಾನವಾಗಿ ಈ ತಾಣ ಎಲ್ಲಾ ರಾಜ್ಯಗಳನ್ನೂ ಒಳಗೊಳ್ಳಲಿದೆ. ಗ್ರಾಹಕರು ತಮಗೆ ಬೇಕಾದ ವಸ್ತುಗಳಿಗೆ ಬೇಡಿಕೆ ಸಲ್ಲಿಸಿದರೆ, ಅದನ್ನು ಕಳುಹಿಸುವ ಏರ್ಪಾಡು ಮಾಡಲಾಗುತ್ತದೆ.ಸಾಮಗ್ರಿಯನ್ನು ತಲುಪಿಸಿದಾಗ,ಪಾವತಿ ಮಾಡಿದರೆ ಸಾಕು. ಜಾಲತಾಣದಲ್ಲಿ ಜಾಲಾಡಲು ಕೊಂಡಿ: www.shopatplaces.com

ಕಂಪ್ಯೂಟರಿಗೆ ಮೊಬೈಲ್ ಕುಲುಕಿ ಕಡತ ವರ್ಗಾವಣೆ ಮಾಡಲು

ಮೊಬೈಲ್‌ಗಳಲ್ಲಿ ಬಂಪ್ ಎನ್ನುವ ತಂತ್ರಾಂಶ ಇದ್ದರೆ, ಅವನ್ನು ಡಿಕ್ಕಿ ಹೊಡೆಸಿ,ಕಡತಗಳನ್ನು ಒಂದರಿಂದ ಇನ್ನೊಂದಕ್ಕೆ ವರ್ಗಾಯಿಸಲು ಸಾಧ್ಯವಿತ್ತು.ಈ ತಂತ್ರಾಂಶವು ಐಓಎಸ್ ಮತ್ತು ಆಂಡ್ರಾಯಿಡ್ ಫೋನುಗಳಿಗೆ ಲಭ್ಯವಿದೆ. ಈಗ ಅದರ ಹೊಸ ಸುಧಾರಿತ ಆವೃತ್ತಿಯಲ್ಲಿ ಈ ಸೌಕರ್ಯವನ್ನು ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲೂ ಪಡೆಯಲು ಸಾಧ್ಯ.ಇದಕ್ಕೆ ಕಂಪ್ಯೂಟರಿನಲ್ಲಿ ತಂತ್ರಾಂಶ ಅಳವಡಿಸಬೇಕಿಲ್ಲ. ಬಂಪ್ ತಂತ್ರಾಂಶವು ಮೊಬೈಲಿನಲ್ಲಿ ಇರಬೇಕು. ವರ್ಗಾಯಿಸ ಬೇಕಿರುವ ಕಡತಗಳನ್ನು ಆಯ್ಕೆ ಮಾಡಿ. ನಂತರ ಮೊಬೈಲನ್ನು ಕಂಪ್ಯೂಟರಿನ ಸ್ಪೇಸ್‌ಬಾರ್ ಕೀಲಿಯ ಮೇಲೆ ಕುಟ್ಟಿದರೆ ಸರಿ, ಕಡತಗಳು ವರ್ಗಾಯಿಸಲ್ಪಡುತ್ತವೆ. ಆಡಿಯೋ, ವೀಡಿಯೋ, ಲಿಪಿ ಕಡತಗಳು ಯಾವುದನ್ನೂ ವರ್ಗಾಯಿಸಲು ಬರುತ್ತದೆ. ಹೆಚ್ಚಿನ ವಿವರಗಳಿಗೆ ಜಾಲತಾಣವನ್ನು ನೋಡಿ.https://bu.mp

ಸತ್ತ ನಂತರವೂ ಟ್ವೀಟ್ ಮಾಡಲು ಲೈವ್ಸ್ ಆನ್ ತಂತ್ರಾಂಶ

ಲೈವ್ಸ್ ಆನ್ ಎಂಬ ತಂತ್ರಾಂಶದ ಮೂಲಕ ಸತ್ತ ನಂತರವೂ ಟ್ವಿಟ್ಟರಿನಲ್ಲಿ ಸಂದೇಶ ಹಾಕುವುದು ಸಾಧ್ಯ. ಈ ಲೈವ್ಸ್ ಆನ್ ತಂತ್ರಾಂಶವು ವ್ಯಕ್ತಿಯು ಇಷ್ಟಪಡುವ ಕೊಂಡಿಗಳ ಬಗೆ, ಆತನು ಯಾರ ಟ್ವೀಟುಗಳನ್ನು ಇತರರ ಜತೆ ಹೆಚ್ಚಾಗಿ ಹಂಚಿಕೊಳ್ಳುತ್ತಾನೆ ಎಂಬುದನ್ನೆಲಾ ಗಮನಿಸಿ, ಅದರ ಪ್ರಕಾರವೇ ವ್ಯಕ್ತಿಯು ಮರಣ ಹೊಂದಿದ ಬಳಿಕವೂ ಸಂದೇಶಗಳನ್ನು ಕಳುಹಿಸುವ ಸಾಮರ್ಥ್ಯ ಹೊಂದಿದೆ. ಹಾಗೂ ನಿಮ್ಮ ಖಾತೆಗೆ ನಾಮನಿರ್ದೇಶನ ಮಾಡಿದ ವ್ಯಕ್ತಿಯು ಸಹ ನಿಮ್ಮ ಖಾತೆಯನ್ನು ಚಲಾಯಿಸಬಹುದು.  ಹೆಚ್ಚಿನ ವಿವರಗಳಿಗೆ ಜಾಲತಾಣ ಕೋಂಡಿ: http://liveson.org/

ಗೂಗಲ್‌ ಕ್ರೋಮ್ ಪಿಕ್ಸೆಲ್ ಲ್ಯಾಪ್‌ಟಾಪ್


ಗೂಗಲ್ ಯಂತ್ರಾಂಶ ತಯಾರಿಗಿಳಿದದ್ದು ಹಳೆ ಸುದ್ದಿ. ಸ್ಯಾಮ್‌ಸಂಗ್, ಏಸರ್, ಲೆನೋವೋ, ಎಚ್‌ಪಿ ಕಂಪೆನಿಗಳು ಗೂಗಲ್‌ಗಾಗಿ ಸಾಧನಗಳನ್ನು ತಯಾರಿಸುತ್ತವೆ. ಆದರೆ ಪಿಕ್ಸೆಲ್ ಲ್ಯಾಪ್‌ಟಾಪ್‌ನಲ್ಲಿ ಬಿಡಿಭಾಗಗಳನ್ನು ಇತರ ಕಂಪೆನಿಗಳಿಂದ ಖರೀದಿಸಿ, ಗೂಗಲ್ ಸ್ವತ: ತಯಾರಿಸಿದೆ.
ಇದರ ತೆರೆ ಮ್ಯಾಕ್‌ಬುಕ್ಕಿನ ರೆಟಿನಾ ಡಿಸ್‌ಪ್ಲೇಯಷ್ಟೇ ಸ್ಪಷ್ಟತೆ ಹೊಂದಿದೆ. ಪ್ರತಿ ಇಂಚಿಗೆ ಇನ್ನೂರ‍ ಮೂವತ್ತೊಂಭತ್ತು, ಒಟ್ಟಾರೆಯಾಗಿ ನಲವತ್ತಮೂರು ಲಕ್ಷ ಪಿಕ್ಸೆಲುಗಳನ್ನು ತೆರೆಯ ಮೇಲಿದೆ. ಹಾಗಾಗಿ ಇದರಲ್ಲಿ ಚಿತ್ರ ಮತ್ತು ಲಿಪಿಗಳನ್ನು ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಇದರ ತೆರೆ ಸ್ಪರ್ಶಸಂವೇದಿ ಕೂಡಾ. ಹಾಗಾಗಿ ವಿಂಡೋಸ್8ನಂತಹ ಆಪರೇಟಿಂಗ್ ವ್ಯವಸ್ಥೆಗಳಿಗಿದು ಹೇಳಿ ಮಾಡಿಸಿದ ಹಾಗಿದೆ. ಆದರೆ ಇದರಲ್ಲಿ ಗೂಗಲ್‌ಕ್ರೋಮ್ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸಲಾಗಿದೆ. ಪದಸಂಸ್ಕಾರದಂತಹ ದೈನಂದಿನ ತಂತ್ರಾಂಶಗಳನ್ನು ಕ್ಲೌಡ್‌ಸೇವೆಗಳ ಮುಖಾಂತರ ಇಂಟರ್‌ನೆಟ್ಟಿನಿಂದ ಪಡೆಯುವಲ್ಲಿ ಅವಕಾಶ ಕಲ್ಪಿಸಲಾಗಿದೆ. ನಾಲ್ಕನೇ ತಲೆಮಾರಿನ ಫೋರ‍್‌ಜಿ ಸಂಪರ್ಕಕ್ಕಿದರಲ್ಲಿ ಅವಕಾಶವಿದೆ.
ಸದ್ಯಕ್ಕಂತೂ ಈ ಕ್ರೋಮ್ ಪಿಕ್ಸೆಲ್ ಲ್ಯಾಪ್ ಟಾಪ್ ಗೋಗಲೆ ಪ್ಲೇ ಆನ್ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಭಾರತೀಯ ಮಾರುಕಟ್ಟೆಗೆ ಇನ್ನೂ ಬಾರದ ಈ ಲ್ಯಾಪ್ ಟಾಪ್, ವಿದೇಶಗಳಲ್ಲಿನ ಉತ್ತಮ ಮಾರುಕಟ್ಟೆಯಲ್ಲಿ ಲಭ್ಯವಿದೆ.  ಹೆಚ್ಚಿನ ವಿವರಗಳಿಗೆ ಜಾಲತಾಣ ಕೊಂಡಿಗಳು:  http://www.google.co.in/intl/en/chrome/devices/chromebook-pixel/   ಹಾಗೂ ಆನ್ಲೈನ್ ಮಾರುಕಟ್ಟೆ ಗೂಗಲ್ ಪ್ಲೇ ವಿಳಾಸ : https://play.google.com/store/devices/details?id=chromebook_pixel_wifi ಹಾಗೂ ಬೆಸ್ಟ್ ಬೈ ಸ್ಟೋರ್ಸ್ಗಳ ವಿಳಾಸ ಕೊಂಡಿ: http://www.google.co.in/intl/en/chrome/devices/chromebook-pixel/#stores

ಬಿಟ್‌ಕಾಯಿನ್


ಈ ಬಿಟ್‌ಕಾಯಿನ್ ಎನ್ನುವುದು, ಕಂಪ್ಯೂಟರ್ ಪ್ರಪಂಚದಲ್ಲಷ್ಟೇ ಚಲಾಯಿಸಲಾಗುವ ಕರೆನ್ಸಿ. ಯಾವುದಾದರೂ ಗಣಿತ ಸಮಸ್ಯೆಯನ್ನು ಬಿಡಿಸಿದಾಗ, ಬಿಟ್‌ಕಾಯಿನ್ ಮೂಲಕ ಸಮಸ್ಯೆ ಬಿಡಿಸಿದವನಿಗೆ ಮೊತ್ತ ಪಾವತಿಯಾಗುತ್ತದೆ. ಯಾರ ತಿಳುವಳಿಕೆಗೂ ಬಾರದಂತೆ ಹಣ ಖರ್ಚು ಮಾಡುವವರಿಗೆ ಈ ಕರೆನ್ಸಿ ಅನುಕೂಲವಾಗಿದೆ. ಕ್ಯಾಸಿನೋಗಳಲ್ಲೂ ಇದನ್ನು ಸ್ವೀಕರಿಸುವ ಕಾರಣ ಇದು ಜನಪ್ರಿಯವಾಗಿದೆ. ಇದನ್ನು ಮಾಮೂಲು ಹಣಕ್ಕೆ ಪರಿವರ್ತಿಸಲೂ ಸಾಧ್ಯ. ಇದರ ದೈನಂದಿನ ಮೌಲ್ಯವನ್ನು ನಿರ್ಧರಿಸುವ Mt Gox ಅಂತಹ ಕಂಪೆನಿ ಈ ಕೆಲಸ ಮಾಡುತ್ತದೆ. ಸದ್ಯ ಬಿಟ್‌ಕಾಯಿನ್ ಬೆಲೆ ಗಗನಮುಖಿಯಾಗಿದ್ದು, ಮೂವತ್ತಮೂರು ಡಾಲರು ಬೆಲೆಯಿದೆ.  ಹೆಚ್ಚಿನ ಮಾಹಿತಿಗೆ ಜಾಲತಾಣಗಳ ವಿಳಾಸ ಕೊಂಡಿ: http://bitcoin.org/en/  https://mtgox.com/  http://unoco.in/