WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Saturday, December 25, 2010

ಇಂಥವ್ರು ಇರ್ತಾರೆ…!!!

ಹಣ ಎಂದರೆ ಯಾರಿಗೆ ಬೇಡ ಹೇಳಿ. ಹಣ ಸಿಕ್ಕರೆ ನನಗೂ ಇರಲಿ, ಹೆಚ್ಚಾದರೆ ನನ್ ಹೆಂಡ್ತಿ, ಮಕ್ಕಳಿಗೂ ಇರಲಿ ಅನ್ನೋರೆ ಜಾಸ್ತಿ. ದಾರಿಯಲ್ಲಿ ಹೋಗುವಾರ ಭಿಕ್ಷುಕರೋ, ಕೈಲಾಗದವರೋ ಅಮ್ಮಾ ತಾಯಿ, ಅಂತ ಕೈಚಾಚಿದರೆ ನೋಡಿದರೂ ನೋಡದ ಹಾಗೆ ಮುಂದೆ ಹೋಗ್ತೀವಿ. ಇಲ್ಲಾಂದ್ರೆ ಚಿಲ್ಲರೆಗಾಗಿ ಇಡೀ ಪರ್ಸ್ ಅಥವಾ ಬ್ಯಾಗ್ ಹುಡುಕಿ ಐವತ್ತು ಪೈಸಾನೋ , ಒಂದು ರೂಪಾಯಿನೋ ಕೊಡ್ತೀವಿ. ಆದ್ರೆ ಇದಕ್ಕೆಲ್ಲ ಅಪವಾದ ಎನ್ನುವಂತೆ ಅಮೆರಿಕದಲ್ಲೊಬ್ಬ ಇದ್ದಾನೆ.
ಆತನ ಹೆಸರು ರೀಡ್ ಸ್ಯಾಂಡ್ರಿಡ್ಜ್. ಈತನಿಗೊಂದು ವಿಚಿತ್ರ , ವಿಶಿಷ್ಟ ಅಭ್ಯಾಸವಿದೆ.ಪ್ರತಿ ದಿನ ಅಪರಿಚಿತರೊಬ್ಬರಿಗೆ 10 ಡಾಲರ್ ಹಣ ಕೋಡೋದು. ಆದರೆ ಅದು ಅವರಿಗೆ ಉಪಯೋಗಕ್ಕೆ ಬರುತ್ತದೆ ಎಂಬುದು ಆತನಿಗೆ ಖಾತ್ರಿ ಆದರೆ ಮಾತ್ರ ಕೊಡುತ್ತಾನೆ. ಪ್ರತಿದಿನ ದಾರಿಯಲ್ಲಿ ಹೋಗುವಾಗ ಸಿಗುವ ಯಾರಿಗಾದರೂ ಅಪರಿಚಿತ ವ್ಯಕ್ತಿಗಳಿಗೆ ತನ್ನ ಪ್ಯಾಕೆಟ್ನಿಂದ 10 ಡಾಲರ್ ತೆಗೆದು ಅವರ ಕೈಗಿಟ್ಟು ಅವರೊಂದಿಗೆ ಮಾತಿಗೆ ಕೂರುತ್ತಾನಂತೆ. ಅವರ ಕೆಲಸವೇನು? ಅವರ್ಯಾರು ಅವರ ಕಷ್ಟ ಸುಃಖಗಳೇನು ಎಂಬುದನ್ನು ರೀಡ್ ವಿಚಾರಿಸುತ್ತಾನೆ. ಬಳಿಕ ಅವರ ಬಗ್ಗೆ ತನ್ನ ಬ್ಲಾಗ್ನಲ್ಲಿ ಬರೆಯುತ್ತಾನೆ. ಇವರಿಗೆ ಬೇರೆ ಯಾರಾದರೂ ದಾನಿಗಳು ದಾನ ಮಾಡುವುದಿದ್ದರೆ ಮಾಡಲಿ ಎಂಬುದು ರೀಡ್ನ ಈ ಕೆಲಸದ ಉದ್ದೇಶ. ತಾನು ಹೀಗೆ ಕೊಡುವ ವ್ಯಕ್ತಿಗಳಿಂದ ರೀಡ್ ಪ್ರತಿಯಾಗಿ ಏನನ್ನು ನಿರೀಕ್ಷಿಸುವುದಿಲ್ಲ. ಪ್ರತಿದಿನ ಬೇರೆ ಬೇರೆ ವ್ಯಕ್ತಿಗಳಿಗೆ ರೀಡ್ ಈ ರೀತಿ ದಾನ ಮಾಡುತ್ತಾನೆ. ಈತನಿಗೆ ಅಭ್ಯಾಸ ಬಂದಿದ್ದು ತನ್ನ ತಾಯಿಯಿಂದ. ರೀಡ್ನ ತಾಯಿ ಆತನಿಗೆ ಯಾವಾಗಲೂ ಹೇಳುತ್ತಿದ್ದಳಂತೆ ಹಣಕ್ಕೆ ಹೆಚ್ಚು ಆಸೆ ಪಡಬೇಡ. ನಿನಗೆ ಬದುಕಲು ಬೇಕಾದ್ದಕ್ಕಿಂತ ಹೆಚ್ಚು ಹಣವಿದ್ದರೆ ಅದನ್ನು ಬೇರೆಯವರಿಗೆ ದಾನ ಮಾಡು ಅಂತ. ಹಾಗಾಗಿ ರೀಡ್ ಮೂರು ವರ್ಷಗಳ ಹಿಂದೆ ತನ್ನ ತಾಯಿ ತೀರಿ ಹೋದ ಬಳಿಕ ಆಕೆಯ ನೆನಪಿಗಾಗಿ ಈ ರೀತಿ ‘ಇಯರ್ ಆಫ್ ಗೀವಿಂಗ್’ ಎಂಬ ದಾನ ಮಾಡುವ ಪ್ರವೃತ್ತಿಯನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಹಣ ಎಂದರೆ ಹೆಣವೂ ಬಾಯ್ಬಿಡುತ್ತದೆ ಎನ್ನುವ ಈ ಕಾಲದಲ್ಲೂ ಇಂಥ ವ್ಯಕ್ತಿಗಳಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ…