Pages

Tuesday, December 17, 2013

ಆನ್ಲೈನ್ ಖರೀದಿ ಮಾಡಿದ ವಸ್ತುಗಳು 30 ನಿಮಿಷಗಳಲ್ಲೇ ನಿಮ್ಮ ಮನೆಗೆ ಬಾಗಿಲಿಗೆ!


ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸುವುದರಲ್ಲಿ ಹುಡುಕಾಟ, ಸಮಯ ವ್ಯರ್ಥ ಹಾಗೂ ವಾಹನ ದಟ್ಟಣೆಯ ಜೊತೆಗೆ ಪಾರ್ಕಿಂಗ್ ಸಮಸ್ಯೆಯ ಹೆಣಗಾಟ, ಇನ್ನು ಅಂತಹ ಯಾವ ಚಿಂತೆಯೂ ಬೇಡ!
ಯಾಕೆಂದರೆ ಇ- ಮಾರುಕಟ್ಟೆಯಲ್ಲಿ ಹೆಸರುವಾಸಿಯಾದ ಅಮೆಜಾನ್ ಅಂತರಜಾಲ ತಾಣ, "ಅಮಜೋನ್ ಪ್ರೈಮ್ ಏರ್ ಅಂತರಿಕ್ಷ ವಾಹನ" ಇನ್ಮುಂದೆ ನಿಮ್ಮ ನೆರವಿಗೆ ಬರಲಿದ್ದು, ಕೇವಲ 30 ನಿಮಿಷಗಳಲ್ಲೇ ನೀವು ಆರ್ಡರ್ ಮಾಡಿದ ವಸ್ತು ನಿಮ್ಮ ಮನೆ ಸೇರಲಿದೆ. 

ಅದು ಹೇಗೆ ಅಂದರೇ? 
ಅಮಜೋನ್ ಪ್ರೈಮ್ ಏರ್ ಹಾರಾಡುವ ಸಣ್ಣ ವಾಹನವಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಬಳಕೆ ಮಾಡಬಹುದಾಗಿದೆ.
ಈ ಅಂತರಿಕ್ಷ ವಾಹನವು ಕೇವಲ 30 ನಿಮಿಷಗಳಲ್ಲೇ ಗ್ರಾಹಕರ ಆರ್ಡರ್ ಮಾಡಿದ ವಸ್ತುಗಳನ್ನು ಮನೆ ಮುಂದೆ ತಲುಪಿಸಲಿದೆ. 
ಪ್ರಸ್ತುತ ಮುಂದಿನ ತಲೆಮಾರಿನ ಈ ಅಂತರಿಕ್ಷ ವಾಹನವು ಅಮಜೋನ್ ಆರ್ ಆಂಡ್ ಡಿ ಪ್ರಾಯೋಗಾಲಯದಲ್ಲಿ ಅಭಿವೃದ್ಧಿ ಹಂತದಲ್ಲಿದೆ.

ನಿಮಗಿದು ವಿಜ್ಞಾನದ ಕಟ್ಟುಕಥೆ ಎಂದು ಅನಿಸಿದರೂ ಪ್ರಾಯೋಗಿಕವಾಗಿಯೂ ಇದು ಯಶಸ್ಸನ್ನು ಕಾಣಲಿದೆ ಎಂದು ಸಂಸ್ಥೆ ಅಭಿಪ್ರಾಯ ಪಟ್ಟಿದೆ.
ಇನ್ನು ಕಾನೂನಿನ ತೊಡಕು ನಿವಾರಿಸುವುದಕ್ಕಾಗಿ ಫೆಡೆರಲ್ ಆವಿವೇಷನ್ ಆಡ್ಮಿನಿಸ್ಟ್ರೇಶನ್ ಸಂಪರ್ಕದಲ್ಲಿದೆ.

ಇನ್ನು ಸುರಕ್ಷತೆಗೂ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿತ್ತಿದ್ದು, ಇದನ್ನು ವಿಶೇಷ ರೂಪದಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. 2015ರ ವೇಳೆಗೆ ಸೇವೆಗೆ ಲಭ್ಯವಾಗುವ ನಿರೀಕ್ಷೆಯೂ ಇದೆ. 
ಹೆಚ್ಚಿನ ಮಾಹಿತಿಗಾಗಿ ವೀಡಿಯೋ ವೀಕ್ಷಿಸಿ... 

No comments:

Post a Comment