Pages

Saturday, August 11, 2012

50ಗಿಗಾ ಪಿಕ್ಸೆಲ್ ಕ್ಯಾಮರಾದತ್ತ

ಸದ್ಯಕ್ಕೀಗ ನಾವು ಬಳಸುವ ಕ್ಯಾಮರಾಗಳು ಮೆಗಾಪಿಕ್ಸೆಲ್‌ನಲ್ಲಿ ತಮ್ಮ ಸ್ಪಷ್ಟತೆಯನ್ನು ಹೊಂದಿರುತ್ತವೆ.ಮೆಗಾಪಿಕ್ಸೆಲ್ ಕ್ಯಾಮರಾದಲ್ಲಿ, ಸ್ಪಷ್ಟ ಚಿತ್ರ ಪಡೆಯಲು, ಚಿತ್ರ ತೆಗೆದ ಜಾಗದ ವಿಸ್ತೀರ್ಣ ಕಂಪ್ಯೂಟರ್ ತೆರೆಯಲ್ಲಿ ಪ್ರದರ್ಶಿಸುವ ಪುಟದಲ್ಲಿರುವ ಶಬ್ದವು ಹಿಡಿಸುವ ಜಾಗವೆಂದು ಕೊಂಡರೆ, ಗಿಗಾಪಿಕ್ಸೆಲ್ ಕ್ಯಾಮರಾವನ್ನು ಇಡೀ ಕಂಪ್ಯೂಟರ್ ತೆರೆಯ ಜಾಗದ ಚಿತ್ರ ಹಿಡಿಯಲು ಬಳಸಬಹುದು.ದೊಡ್ಡ ವಿಸ್ತೀರ್ಣದ ಪ್ರದೇಶವನ್ನು ಕ್ಯಾಮರದಲ್ಲಿ ಸೆರೆ ಹಿಡಿಯಬೇಕಾದಾಗ, ಆ ವಿಸ್ತೀರ್ಣದ ಪ್ರದೇಶದ ಸಣ್ಣ ಸಣ್ಣ ಭಾಗಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು, ನಂತರ ಅವನ್ನು ಕಂಪ್ಯೂಟರಿನಲ್ಲಿ ಜೋಡಿಸುವುದೇ ಸದ್ಯ ಲಭ್ಯವಿರುವ ತಂತ್ರ. ಸಂಶೋಧಕರೀಗ ಹಲವು ಕ್ಯಾಮರಾಗಳನ್ನು ಬಳಸಿ, ಒಂದೇ ಬಾರಿಗೆ ಇಡೀ ವಿಸ್ತೀರ್ಣವನ್ನು ಸೆರೆಹಿಡಿಯ ಬಾರದೇಕೆ ಎಂದು ಆಲೋಚಿಸುತ್ತಿದ್ದಾರೆ.
ಇದನ್ನು ಸಾಧಿಸಲು ಡ್ಯೂಕ್‌ನ ಇಂಜಿನಿಯರಿಂಗ್ ಕಾಲೇಜಿನ ಸಂಶೋಧಕರು ಕೀಟಗಳ ಸಂಯುಕ್ತಾಕ್ಷಿಗಳ ರಚನೆಯನ್ನು ಬಳಸುತ್ತಿದ್ದಾರೆ. ಇದರಲ್ಲಿ ಕೀಟದ ಕಣ್ಣಿಗೆ ಒಂದೇ ಲೆನ್ಸ್ ಮೂಲಕ ಬಂದ ನೋಟ, ಹಲವು ಭಾಗಗಳಾಗಿ ಪ್ರತ್ಯೇಕಗೊಳ್ಳುತ್ತದೆ.

ಡ್ಯೂಕ್‌ನ ಸಂಶೋಧಕರ ಅವೇರ್28 ಎನ್ನುವ ವ್ಯವಸ್ಥೆಯಲ್ಲಿ, ಒಂದು ದೊಡ್ಡ ಲೆನ್ಸ್ ಮೂಲಕ ಬಂದ ದೊಡ್ಡ ವಿಸ್ತೀರ್ಣದ ನೋಟ, ತೊಂಬತ್ತೆಂಟು ಭಾಗಗಳಾಗಿ ವಿಭಜನೆ ಹೊಂದಿ, ತೊಂಬತ್ತೆಂಟು ಬೇರೆ ಬೇರೆ ಸಂವೇದಕಗಳಲ್ಲಿ ದಾಖಲಾಗುವ ಮೂಲಕ ಅವನ್ನು ಕಂಪ್ಯೂಟರಿನಲ್ಲಿ ಸಮಗ್ರ ಚಿತ್ರವಾಗಿ ಮೂಡುತ್ತದೆ. ಹೆಚ್ಚಿನ ನೋಟಕ್ಕೆ: http://goo.gl/YfXth

No comments:

Post a Comment