Pages

Saturday, August 18, 2012

ಕನ್ನಡಕಗಳಿಲ್ಲದೆ 3ಡಿ ನೋಡಿ




ಇನ್ನು ಮುಂದೆ 3ಡಿ ಸಿನಿಮಾಗಳನ್ನು ವೀಕ್ಷಿಸುವಾಗ ಕನ್ನಡಕಗಳನ್ನು ಧರಿಸಬೇಕಾಗಿಲ್ಲ. ಆರಾಮವಾಗಿ ಬರಿಯ ಕಣ್ಣುಗಳಿಂದ ಸಿನಿಮಾ ವೀಕ್ಷಿಸಬಹುದು.

ಮುಂದಿನ ತಿಂಗಳು ಬರ್ಲಿನ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಿನಿಮಾ ಸಂಘಟಕರ ಉದ್ಯಮದಲ್ಲಿ ಅಟೋಸ್ಟಿರಿಯೋಸ್ಕೋಪಿಕ್ ಡಿಸ್‌ಪ್ಲೇಗೆ 3ಡಿ ಸಿನಿಮಾಗಳನ್ನು ಹೊಂದಿಸುವಂತಹ ನೂತನ ತಂತ್ರಜ್ಞಾನ ಬಿಡುಗಡೆಗೊಳ್ಳಲಿದೆ. ಫ್ರಾನ್‌ಹಾಫರ್, ಹೆನ್ರಿಕ್ ಹರ್ಟ್ಸ್ ಸಂಸ್ಥೆಯ ಸಂಶೋಧಕರು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಇನ್ನು ಮುಂದೆ ಮನೆಯಲ್ಲೆ ಕೂತು ಆರಾಮವಾಗಿ ಸೋಫಾಕ್ಕೆ ಆತುಕೊಂಡು 3ಡಿ ಸಿನಿಮಾಗಳನ್ನು ಎಂಜಾಯ್ ಮಾಡಬಹುದು. ಕನ್ನಡಕಗಳ ಕಿರಿಕಿರಿಯಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

3ಡಿ ಸಿನಿಮಾಗಳು ಬ್ಲೂ ರೇ ತಂತ್ರಜ್ಞಾನದ ರೂಪದಲ್ಲಿದ್ದು ಎರಡು ಆಯಾಮಗಳನ್ನು ಒಳಗೊಂಡಿದೆ. ಎರಡು ಕಣ್ಣುಗಳಿಗೆ ಎರಡು ಪ್ರತ್ಯೇಕ ಇಮೇಜ್‌ಗಳು ದಕ್ಕುತ್ತವೆ. ಅಟೋಸ್ಟಿರಿಯೋಸ್ಕೋಪಿಕ್ ತಂತ್ರಜ್ಞಾನ ಇದಾಗಿದ್ದು ಇಲ್ಲಿ ಕಾಣಿಸುವ 3 ಆಯಾಮದ ಚಿತ್ರಗಳನ್ನು ಯಾವ ಕೋನದಲ್ಲಾದರೂ ನೋಡಿ ಆನಂದಿಸಬಹುದು. ಸೋಫಾದ ಮೇಲೆ ಎಲ್ಲಿ ಕೂತರೂ ನೋಡಲು ಅನುಕೂಲಕರವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಈಗಾಗಲೆ ಇದಕ್ಕೆ ಸಂಬಂಧಪಟ್ಟ ಸಾಫ್ಟ್‌ವೇರ್ ಅನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಅಟೋಸ್ಟಿರಿಯೋಸ್ಕೋಪಿಕ್ ಡಿಸ್‌ಪ್ಲೇಗಳು ಮಾರುಕಟ್ಟೆಗೆ ಇನ್ನಷ್ಟೆ ಬರಬೇಕಿದ್ದು ಗ್ರಾಹಕರು ಇನ್ನಷ್ಟು ಕಾಯಬೇಕಾಗಿದೆ. ಉಚಿತ ತಂತ್ರಾಂಶ ಹಾಗೂ ವಿವರಗಳಿಗೆ ಜಾಲತಾಣ: http://www.dimencodisplays.com

No comments:

Post a Comment