Pages

Thursday, April 19, 2012

ಮುದ್ರಿಸಲು ಗೂಗಲ್ ಸೇವೆ

ಗೂಗಲ್ ವೆಬ್ ಕ್ಲೌಡ್ ಪ್ರಿಂಟ್ ಸೇವೆ ನಿಮ್ಮ ಮುದ್ರಕಗಳು ಸಂಪರ್ಕಿಸುವ ಹೊಸ ತಂತ್ರಜ್ಞಾನ. ಗೂಗಲ್ ಕ್ಲೌಡ್ ಪ್ರಿಂಟ್ ಬಳಸಿಕೊಂಡು, ನೀವು ಪ್ರತಿದಿನ ಬಳಸುವ ಮುದ್ರಣ ಸೇವೆಯನ್ನು, ನಿಮ್ಮ ಮನೆ ಮತ್ತು ಕಛೇರಿ ಹಾಗೂ ಮತ್ಯಾವುದೇ ಸ್ಥಳದಿಂದ ನೀವು ಲಭ್ಯವಿರುವ ಮುದ್ರಕಗಳಿಂದ ಪ್ರಿಂಟ್ ಮಾಡಬಹುದು. ಗೂಗಲ್ ಕ್ಲೌಡ್ ಪ್ರಿಂಟ್ ನಿಮ್ಮ ಫೋನ್, ಟ್ಯಾಬ್ಲೆಟ್, ಕ್ರೋಮ್ ಬುಕ್, ಗಣಕಯಂತ್ರ ಮತ್ತು ನೀವು ಮುದ್ರಿಸಲು ಬಯಸುವ ಯಾವುದೇ ಇತರ ಜಾಲ ಸಂಪರ್ಕ ಸಾಧನಗಳು ಕೆಲಸ ಮಾಡುತ್ತವೆ. 
ನಿಮ್ಮ ಪ್ರಿಂಟರ್ ಯಾವುದೇ ಇದ್ದರೂ, ಅದನ್ನು ಅಂತರ್ಜಾಲ ಮೂಲಕವೇ ನಿಯಂತ್ರಿಸಿ, ಅದರಿಂದ ಮುದ್ರಣ ಸೇವೆಯನ್ನು ಪಡೆಯುವ ಕ್ಲೌಡ್ ಕಂಪ್ಯೂಟಿಂಗ್ ಸೇವೆ ನೀಡಲು ಗೂಗಲ್ ಮುಂದಾಗಿದೆ.ಸಾಮಾನ್ಯವಾಗಿ, ಮುದ್ರಕದ ಸೇವೆ ಪಡೆಯಲು ಗಣಕಯಂತ್ರದ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಮತ್ತು ಮುದ್ರಕದ ಡ್ರೈವರ್ ತಂತ್ರಾಂಶದ ನೆರವು ಬೇಕು. ಅಂತರ್ಜಾಲದ ಮೂಲಕ ಇವುಗಳ ನೇರವಾಗಿ ಮುದ್ರಕಕ್ಕೆ ಮುದ್ರಣ ಪ್ರತಿಗಳಿಗೆ ಕೋರಿಕೆ ಸಲ್ಲಿಸುವ ಹೊಸ ತಂತ್ರವನ್ನು ಪ್ರಯೋಗಿಸಲು ಗೂಗಲ್ ಸಜ್ಜಾಗಿದೆ. ನಿಮ್ಮ ಮುದ್ರಕ ಯಾವ ಕಂಪೆನಿಯದ್ದು ಮುಂತಾದ ವಿವರಗಳನ್ನು ನೀವು ನೀಡಿದರೆ ಈ ಸವಲತ್ತ್ತು ನಿಮ್ಮದಾಗುತ್ತದೆ. ಅಂತರ್ಜಾಲ ಮೂಲಕವೇ ಕೆಲಸ ಸಾಧಿಸಿಕೊಳ್ಳುವ ಗೂಗಲ್ ಕ್ರೋಮ್ ಬ್ರೌಸರ್ ಮೂಲಕ ಈ ಸೇವೆ ಪಡೆಯಬಹುದು. ಜಾಲತಾಣದ ಕೊಂಡಿಗಾಗಿ: http://www.google.com/cloudprint

No comments:

Post a Comment