Pages

Saturday, December 3, 2011

ಮುಖ್ಯ ಮಂತ್ರಿ ಕಛೇರಿಯ ನೇರಪ್ರಸಾರ

 



ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರ 'ಮೂಕಿ' ಚಿತ್ರ ನೇರ ಪ್ರಸಾರ ಬುಧವಾರ ಬೆಳಗ್ಗೆ 11.45ರ ನಂತರ ಆರಂಭವಾಗಿದೆ. ಮುಖ್ಯ ಪಾತ್ರಧಾರಿ ಸದಾನಂದ ಗೌಡರು ಕಚೇರಿಯಲ್ಲಿದ್ದಾಗ(ಗೃಹ ಕಚೇರಿ ಅಥವಾ ವಿಧಾನಸೌಧ) ಮಾತ್ರ ಈ ಲೈವ್ ದೃಶ್ಯಗಳು ನಾಡಿನ ಜನತೆಗೆ ಲಭ್ಯವಾಗಲಿದೆ.

ಕೇರಳದ ಮುಖ್ಯಮಂತ್ರಿ ಊಮ್ಮನ್‌ಚಾಂಡಿ ಅವರಿಂದ ಪ್ರೇರಿತರಾದ ಸದಾನಂದ ಗೌಡರು ಆನ್ ಲೈನ್ ಜಗತ್ತಿಗೆ ತಮ್ಮ ದೈನಂದಿನ ಕಚೇರಿ ಚಟುವಟಿಕೆಗಳನ್ನು ಹರಿಯಬಿಟ್ಟಿದ್ದಾರೆ. ಆದರೆ, ಊಮ್ಮನ್ ಚಾಂಡಿಯಂತೆ 24X7 ಸದಾನಂದ ಗೌಡರ ಕಚೇರಿ ದೃಶ್ಯಗಳು ಲಭ್ಯವಿರುವುದಿಲ್ಲ.

ಕರುನಾಡು ವೆಬ್ ತಾಣದಲ್ಲಿ ಸಿಎಂ ವೈಬ್‌ಸೈಟ್‌ ಎಂಬ ಕೊಂಡಿ ಕ್ಲಿಕ್‌ ಮಾಡುವ ಮೂಲಕ ಸಿಎಂ ಕಚೇರಿಯ ನೇರ ಪ್ರಸಾರ ನೋಡಬಹುದು. ಹೋಮ್ ಆಫೀಸ್ ಹಾಗೂ ವಿಧಾನಸೌಧ ಎಂಬ ಎರಡು ಪ್ರತ್ಯೇಕ ವಿಭಾಗ ಇದೆ. ಸದ್ಯಕ್ಕೆ ಗೃಹ ಕಚೇರಿಯ ಕೃಷ್ಣಾ ದೃಶ್ಯಗಳು ಲಭ್ಯವಾಗಿದೆ.

ನಂತರ ಈ ಆನ್‌ಲೈನ್‌ ವಿಡಿಯೋಗಳು ಯೂಟ್ಯೂಬ್‌ ಮೂಲಕ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ.

ಕರ್ನಾಟಕದ ಇ-ಆಡಳಿತ ವಿಭಾಗವು ಈ ಸೌಲಭ್ಯವನ್ನು ಕಲ್ಪಿಸುತ್ತಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಕಚೇರಿಗಳು ಹಾಗೂ ಸಮ್ಮೇಳನ ಸಭಾಂಗಣದ ಸಿಸಿಟಿವಿಯನ್ನು ಯೂಟ್ಯೂಬ್‌ಗ ನಿರಂತರವಾಗಿ ಸ್ಟ್ರೀಮಿಂಗ್‌ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.

ಇದು ಕೇವಲ ವೀಡಿಯೋ ಮಾತ್ರವಾಗಿದ್ದು, ಆಡಿಯೋ ಇರುವುದಿಲ್ಲ. ಸದ್ಯಕ್ಕಂತೂ ನೆಟ್ ಪ್ರಾಬ್ಲಂ ನಿಂದಾಗಿ ಸರಿಯಾಗಿ ಪ್ರಸಾರ ಕೂಡಾ ಆಗುತ್ತಿಲ್ಲ.

No comments:

Post a Comment