ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಸಲಕರಣೆಗಳನ್ನು ತಯಾರಿಸುವಲ್ಲಿ ಅವುಗಳ ವಿನ್ಯಾಸ
ನಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ವಿದ್ಯುನ್ಮಾನ ಯಂತ್ರದ ಒಳಗೆ ಪ್ರಿಂಟೆಡ್
ಸರ್ಕ್ಯುಟ್ ಬೋರ್ಡ್ ಇರುವುದನ್ನು ಗಮನಿಸಿರಬಹುದು. ಇವುಗಳನ್ನು ತಯಾರಿಸಲು ಅವುಗಳ
ವಿನ್ಯಾಸ ನಕ್ಷೆ (ಸರ್ಕ್ಯುಟ್ ಡಯಾಗ್ರಾಮ್) ಬೇಕಾಗುತ್ತದೆ. ಈ ನಕ್ಷೆಯಲ್ಲಿ ಆ
ಸಲಕರಣೆಯಲ್ಲಿ ಬಳಸುವ ಎಲ್ಲ ವಿದ್ಯುನ್ಮಾನ ಅಂಗಗಳ ನಕ್ಷೆ ಮತ್ತು ಅವುಗಳನ್ನು ಜೋಡಿಸುವ
ರೇಖೆಗಳಿರುತ್ತವೆ. ಉದಾಹರಣೆಗೆ ಟ್ರಾನ್‌ಸಿಸ್ಟರ್, ಡಯೋಡ್, ಕೆಪಾಸಿಟರ್, ಇತ್ಯಾದಿ. ಈ
ವಿನ್ಯಾಸ ನಕ್ಷೆ ತಯಾರಿಸುವುದು ಪರಿಣತರಿಂದ ಮಾತ್ರ ಸಾಧ್ಯ. ನೀವು ಇಲೆಕ್ಟ್ರಾನಿಕ್ಸ್
ಇಂಜಿನಿಯರ್ ಆಗಿದ್ದಲ್ಲಿ ನಿಮಗೆ ಈ ನಕ್ಷೆ ತಯಾರಿಸುವುದು ದಿನನಿತ್ಯದ
ಕೆಲಸವಾಗಿರುತ್ತದೆ. ಇಂತಹ ನಕ್ಷೆಗಳನ್ನು ಗಣಕ ಬಳಸಿ ತಯಾರಿಸಲು ಹಲವು ದುಬಾರಿ
ತಂತ್ರಾಂಶಗಳು ಲಭ್ಯವಿವೆ. ಅಂತೆಯೇ ಒಂದು ಸರಳ ಉಚಿತ ತಂತ್ರಾಂಶವೂ ಲಭ್ಯವಿದೆ. ಅದು
ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ - www.circuit-diagram.org.
No comments:
Post a Comment